ಸಿದ್ದರಾಮಯ್ಯ ಸಗಣಿ ಎತ್ತೋದನ್ನ ಬಿಟ್ಟು ಗೋ ಆರಾಧನೆ ಮಾಡ್ಲಿ : ಕಟೀಲ್
ಮಂಗಳೂರು : ಮಾಜಿ ಸಿಎಂ ಸಿದ್ದರಾಮಯ್ಯ ಸಗಣಿ ಎತ್ತೋದನ್ನ ಬಿಟ್ಟು ಗೋವನ್ನು ಆರಾಧನೆ ಮಾಡಲಿ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ವಿಧಾನಸಭೆಯಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಅಂಗೀಕಾರವಾದ ಹಿನ್ನೆಲೆ ಮಂಗಳೂರಿನ ಬಿಜೆಪಿ ಕಚೇರಿ ಮುಂಭಾಗ ಕಟೀಲ್ ಗೋ ಪೂಜೆ ಮಾಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಳಿನ್ ಕುಮಾರ್ ಕಟೀಲ್, ಮಾಜಿ ಸಿಎಂ ಸಿದ್ದರಾಮಯ್ಯ ಸಗಣಿ ಎತ್ತಿದ್ದೇನೆ ಅಂತಾ ಹೇಳ್ತಾರೆ.
ಸಗಣಿ ಎತ್ತಿದ್ದರಿಂದ ಏನೂ ಆಗೋದಿಲ್ಲ. ಗೋವನ್ನು ಆರಾಧನೆ ಮಾಡಬೇಕು. ಸಗಣಿ ಎತ್ತಿ ನಾಟಕ ಮಾಡೋದ್ರಿಂದ ಪ್ರಯೋಜನ ಇಲ್ಲ ಎಂದು “ನಾನು ತಿಪ್ಪೆಗೆ ಸಗಣಿ ಹಾಕಿದ್ದೀನಿ” ಎಂಬ ಸಿದ್ದರಾಮಯ್ಯ ಹೇಳಿಗೆ ತಿರುಗೇಟು ನೀಡಿದರು.

ಇನ್ನು ಭಾರತೀಯ ಸಂಸ್ಕøತಿಯಲ್ಲಿ ಗೋಮಾತೆಗೆ ವಿಶೇಷ ಸ್ಥಾನವಿದೆ. ವಿಧಾನಸಭೆಯಲ್ಲಿ ಗೋಹತ್ಯೆ ನಿಷೇಧ ಮಸೂದೆ ಮಂಡನೆ ಮಾಡಿದೆ.
ಬಿಬಿಎಂಪಿ ಶಾಲೆಗಳ ಸ್ಥಿತಿ ಗತಿ ಅಧ್ಯಯನಕ್ಕೆ ಆಮ್ ಆದ್ಮಿ ಪಕ್ಷದಿಂದ ಸಮಿತಿ ರಚನೆ
ದೇಶದಲ್ಲಿ ಗೋ ಸಂಸ್ಕೃತಿ ಉಳಿಯೋದಕ್ಕೆ ಈ ಮಸೂದೆ ಬಂದಿದೆ. ಇದಕ್ಕಾಗಿ ಯಡಿಯೂರಪ್ಪ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.
ಇನ್ನು ಮಾಹಿತಿ ನೀಡಿದೇ ವಿಧಾನಸಭೆಯಲ್ಲಿ ಮಸೂದೆ ಮಂಡಿಸಲಾಗಿದೆ ಎಂಬ ಸಿದ್ದರಾಮಯ್ಯರ ಆರೋಪದ ಬಗ್ಗೆ ಮಾತನಾಡಿ, ಕಾಂಗ್ರೆಸ್ ಈ ಹಿಂದೆ ಮಸೂದೆ ತೆಗೆಯುವಾಗ ಚರ್ಚೆ ಮಾಡಿತ್ತಾ? ಈಗ ಚರ್ಚೆ ಬೇಕು ಅನ್ನೋದು ಕಾಂಗ್ರೆಸ್ಸಿನ ತುಷ್ಠೀಕರಣ ನೀತಿಯಾಗಿದೆ ಎಂದು ಟೀಕಿಸಿದರು.
ಗೋ ಹತ್ಯೆ ನಿಷೇಧ ರೈತರಿಗೆ ಪೂರಕವಾದ ಅಂಶವೇ ಆಗಿದೆ ಎಂದ ಕಟೀಲ್, ಕಾಂಗ್ರೆಸ್ ಸುಮ್ಮನೆ ತುಷ್ಟೀಕರಣ ಮಾಡುತ್ತಿದೆ. ಕಾಂಗ್ರೆಸ್ ಗೋಹತ್ಯೆಕೋರರ ಪರವಾಗಿದೆ ಎಂದು ದೂರಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








