ಇದೇ ತಿಂಗಳು 24 ರಂದು ಭಾರತಕ್ಕೆ ಬೇಟಿ ನೀಡಲಿರೋ ಅಮೇರಿಕಾದ ಅದ್ಯಕ್ಷ ಟ್ರಂಪ್ ಗೆ ಸ್ವಾಗತ ಕೋರಲು ಭಾರತ ಸರ್ಕಾರ ಸಕಲ ಸಿದ್ದತೆ ಮಾಡಿಕೊಂಡಿದೆ. ೧೦ ಸಾವಿರ ಭಧರತಾ ಸಿಬ್ಬಂಧಿಯನ್ನು ಹಾಕಿರುವ ಸರ್ಕಾರ, ಇದೇ ವೇಳೆ ಭದ್ರತಾ ವಿಚಾರವಾಗಿ ಸಾಕಷ್ಟು ಎಚ್ಚರ ವಹಿಸಿರುವ ಭಾರತಕ್ಕೆ ಅಮೇರಿಕಾ ಏರ್ ಫೋರ್ಸ್ ಸಹ ಕೈ ಜೋಡಿಸಿದೆ. ಇಡೀ ಪ್ರಪಂಚದಲ್ಲಿ ಟ್ರಂಪ್ ಯಾವ ದೇಶಕ್ಕೆ ಭೇಟಿ ಕೊಟ್ಟರೂ ಮೊದಲೇ ಅಲ್ಲಿಗೆ ಅಮೇರಿಕಾದ ಭದ್ರತಾ ಸಿಬ್ಬಂದಿ ಬಂದಿರುತ್ತದೆ. ಅದೇ ಟ್ರಂಪ್ ಭದ್ರತೆಗಾಗಿ ಅಮೇರಿಕಾದಿಂದ ಹೆರ್ಕ್ಯುಲಸ್, ಬೋಯಿಂಗ್ ಸಿ೧೭ ಗ್ಲೋಬ್ ಮಾಸ್ಟರ್ ಭಾರತಕ್ಕೆ ಬಂದಿಳಿದಿದೆ. ಅಷ್ಟೇ ಅಲ್ಲದೆ ಸೆಕ್ಯೂರಿಟಿ ಕಾರ್, ಸ್ನೈಪರ್ ಟೀಮ್ ಸೇರಿದಂತೆ ಎಲ್ಲಾ ಭದ್ರತಾ ಉಪಕರಣಗಳನ್ನು ಈ ವಿಮಾನದಲ್ಲಿ ತರಲಾಗಿದೆ. ಗಂಟೆಗೆ ೮೧೮ ಕಿಲೋಮೀಟರ್ ವೇಗದಲ್ಲಿ ಚಲಿಸುವ ದೈತ್ಯಾಕಾರದ ಭದ್ರತಾ ಕವಚ ಹೊಂದಿರುವ ಈ ವಿಮಾನ, ಒಂದು ಬಾರಿ ಆಕಾಶಕ್ಕೆ ಹಾರಿದರೆ ೪೪೦೦ ಕಿಲೋಮೀಟರ್ ದೂರ ಸಾಗುವ ಸಾಮರ್ಥ್ಯ ಹೊಂದಿದೆ.
ಈಗಾಗಲೇ ಗುಜರಾತ್ ನ ಅಲಹಾಬಾದ್ ಏರ್ಪೋರ್ಟ್ ತಲುಪಿರುವ ಅಮೇರಿಕಾದ ಭದ್ರತಾ ಪಡೆಗಳು, ತನ್ನ ವಿಮಾನಗಳ ಪಾರ್ಕಿಂಗ್ ಸ್ಥಳಕ್ಕೆ ಬೇಕಾದ ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡಿದೆ. ಅಮೇರಿಕಾದ ೧೮ ಸೀಕ್ರೆಟ್ ಸರ್ವಿಸ್ ಅಧಿಕಾರಿಗಳು, ಕಾರ್ಯಕ್ರಮ ಅಯೋಜನೆ ಮಾಡಿರುವ ಸರ್ದಾರ್ ವಲ್ಲಭಭಾಯ್ ಸ್ಟೇಡಿಯಂಗೆ ಬೇಟಿ ನೀಡಿದೆ. ಈ ಭದ್ರತಾ ಟೀಮ್ ಸ್ಟೇಡಿಯಂ ಅನ್ನು ಸಂಪೂರ್ಣ ತನ್ನ ಹಿಡಿತಕ್ಕೆ ಪಡೆಯುತ್ತದೆ. ಸುಮಾರು ೨೦೦ ಸಿಬ್ಬಂದಿಯನ್ನು ಒಳಗೊಂಡ ಈ ಟೀಮ್ ತನಗೆ ಬೇಕಾದಂತೆ ಕಂಟ್ರೋಲ್ ರೂಮ್ ತಯಾರಿಯಲ್ಲಿ ತೊಡಗಿಕೊಂಡಿದೆ. ಒಟ್ಟಿನಲ್ಲಿ ಬಾರೀ ಭದ್ರತಾ ಸಲಕರಣೆಗಳು ಹಾಗೂ ಸಿಬ್ಬಂದಿಯನ್ನು ಹೊತ್ತು ತಂದಿರುವ ಹೆರ್ಕ್ಯುಲಸ್ ವಿಮಾನದ ಜೊತೆಗೆ ಮತ್ತಷ್ಟು ವಿಮಾನಗಳು ಬರಲಿವೆ.








