ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಬಂದು ವಾರವೇ ಕಳೆದರೂ, ಟ್ರಂಪ್ ಮಾತ್ರ ಭಾರತ ಪ್ರವಾಸದ ಗುಂಗಿನಿಂದ ಆಚೆ ಬಂದಿಲ್ಲ. ಅವರು ಹೋದಲ್ಲೆಲ್ಲಾ ಭಾರತದಲ್ಲಿ ತಮಗೆ ಸಿಕ್ಕ ಅಭೂತಪೂರ್ವ ಸ್ವಾಗತವನ್ನ ಹೇಳಿಕೊಂಡು ಓಡಾಡುತ್ತಿದ್ದಾರೆ.
ಭಾರತದ ಮೊಟೆರಾದಲ್ಲಿ ನಡೆದ ‘ನಮಸ್ತೆ ಟ್ರಂಪ್’ ಕಾರ್ಯಕ್ರಮದಲ್ಲಿ ನೆರೆದಿದ್ದ ಜನರ ಕಂಡು ನಿಬ್ಬೆರರಾಗಿರುವ ಟ್ರಂಪ್, ಇನ್ನು ಮುಂದೆ ಎಂತಹ ಜನಸ್ತೋಮ ಕಂಡರೂ ಅಶ್ಚರ್ಯಚಕಿತನಾಗಲಾರೆ ಎಂದು ಹೇಳಿದ್ದಾರೆ.
ಅಮೆರಿಕಾದ ಸೌತ್ ಕಾರೊಲಿನಾದಲ್ಲಿ ನಡೆದ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಟ್ರಂಪ್, ನನಗೆ ಇಲ್ಲಿ ಸೇರಿರುವ ಜನನೋಡಿದರೆ ನನಗೊಂದು ಮಾತು ಹೇಳಬೇಕಿನಿಸುತ್ತದೆ. ನಾನು ಹೋದ ಕಡೆಯಲ್ಲೆಲ್ಲ, ಯಾರೂ ನೋಡದಷ್ಟು ಜನಸಮೂಹ ಎದುರಾಗುತ್ತದೆ. ಆದರೆ ಭಾರತಕ್ಕೆ ಹೋಗಿ ಬಂದ ನನಗೆ ಇನ್ನೆಂದೂ ನನಗೆ ಎದುರಾಗುವ ಜನ ಸಮೂಹದ ಬಗ್ಗೆ ಅಶ್ಚರ್ಯಕ್ಕೆ ಒಳಗಾಗಲಾರೆ ಎಂದು ಹೇಳಿದ್ದಾರೆ. ನಾನು ಇಲ್ಲಿಯವರನ್ನೂ ಪ್ರೀತಿಸುತ್ತೇನೆ, ಅಲ್ಲಿಯವರನ್ನೂ ಪ್ರೀತಿಸುತ್ತೇನೆ ಎಂದು ಹೇಳಿದ್ರು.
ಜಗತ್ತಿನ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ ಮೊಟೆರಾದಲ್ಲಿ 1 ಲಕ್ಷಕ್ಕೂ ಹೆಚ್ಚು ಮಂದಿ ಒಂದೇ ಕಡೆ ಸೇರಿದ್ದು ನನಗೆ ಅಶ್ಚರ್ಯ ಉಂಟು ಮಾಡಿತು. ನನಗಾಗಿ ಮೋದಿ ಅವರು ಏರ್ಪಡಿಸಿದ್ದ ನಮಸ್ತೆ ಟ್ರಂಪ್ ಕಾರ್ಯಕ್ರಮ ತುಂಬಾ ಖುಷಿ ತರಿಸಿತು, ಅಲ್ಲಿನ ಜನರು ನಮ್ಮನ್ನು ತುಂಬಾ ಪ್ರೀತಿಸುತ್ತಾರೆ ಎಂದು ಭಾರತದ ಪ್ರವಾಸದ ಬಗ್ಗೆ ಅಮೆರಕನ್ನರಿಗೆ ವಿವರಿಸಿದ್ರು.








