ಇಸ್ರೋ ಬೇಹುಗಾರಿಕೆ ಪ್ರಕರಣ – ನಾಲ್ವರು ಆರೋಪಿಗಳ ನಿರೀಕ್ಷಣಾ ಜಾಮೀನು ರದ್ದು…
ಭಾರತೀಯ ಬಾಹ್ಯಾಕಾಶ ಸಂಸ್ಥೆ – ಇಸ್ರೋ ವಿಜ್ಞಾನಿ ನಂಬಿ ನಾರಾಯಣನ್ ವಿರುದ್ಧ 1994ರಲ್ಲಿ ಸುಳ್ಳು ಬೇಹುಗಾರಿಕೆ ಆರೋಪ ಹೊರಸಿದ ಪ್ರಕರಣದಲ್ಲಿ ಸಿಬಿಐ ಮನವಿಯನ್ನು ಪುರಸ್ಕರಿಸಿರುವ ಸುಪ್ರೀಂ ಕೋರ್ಟ್ ಕೇರಳ ಹೈಕೋರ್ಟ್ ಆದೇಶಕ್ಕೆ ತಡೆ ನೀಡಿದೆ.
ನಿವೃತ್ತ ಪೊಲೀಸ್ ಮಹಾ ನಿರ್ದೇಶಕರು ಸೇರಿದಂತೆ ನಾಲ್ವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ಕೇರಳ ಹೈಕೋರ್ಟ್ ನೀಡಿರುವ ಆದೇಶವನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿದ್ದು, ಹೊಸದಾಗಿ ಅವರುಗಳ ಜಾಮೀನು ಅರ್ಜಿಯನ್ನು ನಾಲ್ಕು ವಾರಗಳೊಳಗಾಗಿ ಇತ್ಯರ್ಥ ಪಡಿಸುವಂತೆಯೂ ಸರ್ವೋನ್ನತ ನ್ಯಾಯಾಲಯ ಕೇರಳ ಹೈಕೋರ್ಟ್ ಗೆ ಆದೇಶಿಸಿದೆ.
ಐದು ವಾರಗಳ ಅವಧಿಯೊಳಗಾಗಿ ಅವರನ್ನು ಬಂಧಿಸದಂತೆ ನ್ಯಾಯಮೂರ್ತಿ ಎಂ.ಆರ್. ಷಾ ಮತ್ತು ಸಿ.ಟಿ. ರವಿಕುಮಾರ್ ಅವರನ್ನೊಳಗೊಂಡ ನ್ಯಾಯಪೀಠ ತಿಳಿಸಿದೆ.
Nambi Narayanan : In ISRO spy case, top court sets aside Kerala HC order on pre-arrest bail for 5