namma metro
ನಮ್ಮ ಮೆಟ್ರೋದಿಂದ ಪ್ರಯಾಣಿಕರಿಗೆ ಗುಡ್ ನ್ಯೂಸ್..!
ಕೋವಿಡ್ ಹಾವಳಿಯಿಂದಾಗಿ ಲಾಕ್ ಡೌನ್ ನಂತರವೂ ಕೆಲ ನಿರ್ಬಂಧನೆಗಳೊಂದಿಗೆ ಸೇವೆ ಆರಂಭಿಸಿದ್ದ ನಮ್ಮ ಮೆಟ್ರೋ ಇದೀಗ ಪ್ರಯಾಣಿಕರಿಗೊಂದು ಗುಡ್ ನ್ಯೂಸ್ ನೀಡಿದೆ. ಹೌದು ಸೆಪ್ಟೆಂಬರ್ 18 ಅಂದ್ರೆ ಇಂದಿನಿಂದ ಪ್ರತಿದಿನ ಬೆಳಿಗ್ಗೆ 6ರಿಂದ ರಾತ್ರಿ 10ರವರೆಗೂ ಮೆಟ್ರೋ ರೈಲುಗಳು ಕಾರ್ಯ ನಿರ್ವಹಿಸಲಿವೆ.
ವಾರದ ಎಲ್ಲಾ ದಿನಗಳಲ್ಲಿ ಕೊನೆಯ ಮೆಟ್ರೋ ರಾತ್ರಿ 9.30ಕ್ಕೆ ಬೈಯಪ್ಪನಹಳ್ಳಿ, ಕೆಂಗೇರಿ, ನಾಗಸಂದ್ರ ಮತ್ತು ಸಿಲ್ಕ್ ಇನ್ಸ್ಟಿಟ್ಯೂಟ್ ಟರ್ಮಿನಲ್ ನಿಲ್ದಾಣಗಳಿಂದ ಹೊರಡಲಿದೆ. ಇನ್ನೂ ನೇರಳೆ ಮಾರ್ಗದಲ್ಲಿ ಬೈಯಪ್ಪನಹಳ್ಳಿ ಮತ್ತು ಮೈಸೂರು ರಸ್ತೆ ನಿಲ್ದಾಣದ ನಡುವೆ ರೈಲು ಸಂಚರಿಸಿದರೆ, ಹಸಿರು ಮಾರ್ಗದಲ್ಲಿ ಯಲಚೇನಹಳ್ಳಿ ಮತ್ತು ನಾಗಸಂದ್ರ ನಿಲ್ದಾಣಗಳ ನಡುವಿನ ರೈಲು ಸಂಚರಿಸಲಿದೆ. ಪ್ರತಿ 5 ಮತ್ತು 10 ನಿಮಿಷಕ್ಕೊಮ್ಮೆ ಮೆಟ್ರೋ ರೈಲುಗಳು ಸಂಚರಿಸಲಿದೆ.
ಪ್ರತಿದಿನ ಸಿಲ್ಕ್ ಇನ್ಸ್ಟಿಟ್ಯೂಟ್ ಮತ್ತು ಕೆಂಗೇರಿ ನಿಲ್ದಾಣಗಳಿಗೆ ಪ್ರತಿ 10 ನಿಮಿಷಕ್ಕೊಮ್ಮೆ ರೈಲು ಓಡಾಡಲಿದೆ. ಆದರೆ ವಾರಾಂತ್ಯಗಳಲ್ಲಿ ಮೆಟ್ರೋ ರೈಲು ಸಂಚಾರವನ್ನು ಹೆಚ್ಚಿಸಬಹುದು ಅಥವಾ ಕಡಿತಗೊಳಿಸಬಹುದು ಎಂದು ಬಿಎಂಆರ್‌ಸಿ ಸೂಚಿಸಿದೆ.
ಲಸಿಕೆ ವಿತರಣೆಯಲ್ಲಿ ಇಡೀ ದೇಶದಲ್ಲಿ ಬೆಂಗಳೂರಿಗೆ 1ನೇ ಸ್ಥಾನ
namma metro