ಭಾರತೀಯ ಚಿತ್ರರಂಗದಲ್ಲಿ ಖ್ಯಾತ ನಿದೇಶಕರಲ್ಲಿ ಒಬ್ಬರಾದ ಮಣಿರತ್ನಂ ಸಿನಿಮಾದಲ್ಲಿ ಆಕ್ಟಿಂಗ್ ಮಾಡುವ ಚಾನ್ಸ್ ಸಿಕ್ರೆ ಸಾಕಪ್ಪ ಅಂತ ಅನೇಕ ನಟರು ಕಾಯುತ್ತಿರುತ್ತಾರೆ. ಇದೀಗ ವೆಬ್ ಸೀರೀಸ್ ನಲ್ಲಿ ಬ್ಯುಸಿಯಾಗಿರುವ ಮಣಿರತ್ನಂ ಅವರು ‘ನವರಸಂ’ ಎಂಬ ಹೆಸರಿನ ತಮಿಳು ವೆಬ್ ಸೀರೀಸ್ ಗೆ ಆಕ್ಷನ್ ಕಟ್ ಹೇಳ್ತಿದ್ದಾರೆ. ವೆಬ್ ಸರಣಿಯ ಒಂದು ಸಂಚಿಕೆಯಲ್ಲಿ ಸೂಪರ್ ಸ್ಟಾರ್ ಗಳಾದ ಸೂರ್ಯ, ಅರವಿಂದ್ ಸ್ವಾಮಿ, ಸಿದ್ಧಾರ್ಥ್ ಸೇರಿದಂತೆ ಹಲವರು ಕಾಣಿಸಿಕೊಳ್ಳಲಿದ್ದಾರೆ. ಮಣಿರತ್ನಂ ಅವರೇ ಬಂಡವಾಳ ಹೂಡಿರುವ ವೆಬ್ ಸೀರೀಸ್ ನಲ್ಲಿ ತೆಲುಗು ನಟರಾದ ನಾನಿ ಹಾಗೂ ನಾಗಚೈತ್ನö್ಯರಿಗೂ ಕಾಣಿಸಿಕೊಳ್ಳುವ ಆಫರ್ ಸಿಕ್ಕಿತ್ತು. ಆದ್ರೆ ಮಣಿರತ್ನಂ ಅವರೊಂದಿಗೆ ಕೆಲಸ ಮಾಡಲು ನಾನಿ, ನಾಗಚೈತನ್ಯ ನಿರಾಕರಿಸಿದ್ದಾರೆ ಎಂಬ ಸುದ್ದಿ ಬಹಿರಂಗವಾಗಿದೆ. 
ಈ ಹಿಂದೆ ಮಣಿರತ್ನಂ ಚಿತ್ರದಲ್ಲಿ ನಟನೆಗೆ ಚಾನ್ಸ್ ಚಿಕ್ಕಿದರೇ ಸಾಕು ಎಂದು ತುದಿಗಾಲಿನಲ್ಲಿ ಕಾಯುತ್ತಿದ್ದ ತೆಲುಗಿನ ಅನೇಕ ನಟರು ಇದೀಗ ಅವರೊಂದಿಗೆ ಕೆಲಸ ಮಾಡಲು
ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗ್ತಿದೆ. ಅಷ್ಟೇ ಅಲ್ದೇ ರಾಮಚರಣ್ ಹಾಗೂ ಮಹೇಶ್ ಬಾಬು ಅವರು ಸಹ ಮಣಿರತ್ನಂ ಅವರೊಂದಿಗೆ ಕೆಲಸ ಮಾಡಲು ನಿರಾಕರಿಸಿದ್ದರು. ಇದೀಗ ನಾನಿ ಮತ್ತು ನಾಗಚೈತನ್ಯ ಸಹ ಆಫರ್ ರಿಜೆಕ್ಟ್ ಮಾಡಿದ್ದಾರೆ ಎಂಬುವ ಸುದ್ದಿ ತೀವ್ರ ಚರ್ಚೆಯಾಗುತ್ತಿದೆ. ಇನ್ನೂ ನಾನಿ ಮತ್ತು ನಾಗಚೈತನ್ಯ ಸಾಕಷ್ಟು ಸಿನೆಮಾಗಳಲ್ಲಿ ಬ್ಯುಸಿಯಾಗಿರುವ ಕಾರಣ ವೆಬ್ ಸೀರೀಸ್ ನಿಂದ ಹಿಂದೆ ಸರಿದಿದ್ದಾರೆ ಎನ್ನಲಾಗ್ತಿದೆ.
ಡಿಕೆಶಿ ಮನಗೆಲ್ಲಲು ಹೊಸ ಅಸ್ತ್ರ: ‘ಭಾವಿ ಸಿಎಂ’ ಎಂದಾಕ್ಷಣ 50 ಕೋಟಿ ಅನುದಾನ ಮಂಜೂರು! ವಿಧಾನಸಭೆಯಲ್ಲಿ ಬಟಾ ಬಯಲಾಯ್ತು ‘BJP’ ಸೀಕ್ರೆಟ್
ಬೆಂಗಳೂರು: ರಾಜಕಾರಣದಲ್ಲಿ ಕೆಲಸ ಆಗಬೇಕೆಂದರೆ ಸಾಮ, ದಾನ, ಭೇದ, ದಂಡ ಎಲ್ಲವನ್ನೂ ಬಳಸಬೇಕು ಎಂಬ ಮಾತಿದೆ. ಆದರೆ, ಹಾಲಿ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್...








