Nanjangud ನಂಜನಗೂಡಿನ ಪಂಚಮಹಾರಥೋತ್ಸವ ರದ್ದು : ಸ್ಥಳೀಯರ ಪ್ರತಿಭಟನೆ
ನಂಜನಗೂಡು : ಪಂಚಮಹಾರಥೋತ್ಸವ ನಡೆಸುವಂತೆ ಒತ್ತಾಯಿಸಿ ನಂಜನಗೂಡು ನಿವಾಸಿಗಳು ದೇವಸ್ಥಾನದ ಮುಂದೆ ಕುಳಿತು ಪ್ರತಿಭಟನೆ ನಡೆಸಿದ್ದಾರೆ.
ಕೋವಿಡ್ ಹಿನ್ನೆಲೆ ಜಿಲ್ಲಾಡಳಿತ ಪಂಚಮಹಾರಥೋತ್ಸವವನ್ನು ರದ್ದು ಮಾಡಿ ಆದೇಶ ಹೊರಡಿಸಿದೆ.
ಅಲ್ಲದೆ ಸರಳವಾಗಿ ದೇವಸ್ಥಾನದ ಆವರಣದಲ್ಲಿ ಚಿಕ್ಕತೇರು ಬಳಸಿ ಉತ್ಸವ ಆಚರಿಸುವಂತೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸೂಚಿಸಿದ್ದಾರೆ.
ಜಿಲ್ಲಾಡಳಿತದ ಈ ನಿರ್ಧಾರಕ್ಕೆ ಸ್ಥಳೀರು ಅಸಮಾಧಾನ ವ್ಯಕ್ತಪಡಿಸಿದ್ದು, ಜಿಲ್ಲೆಯಲ್ಲಿ ಧಾರ್ಮಿಖ ಕಾರ್ಯಗಳು ನಡೆಯದಿದ್ದಲ್ಲಿ ತಾಲೂಕಿಗೆ ಕೆಡುಕಾಗುತ್ತೆ.
ಅನಾದಿ ಕಾಲದ ಧಾರ್ಮಿಕ ಸಂಪ್ರದಾಯಕ್ಕೆ ತಡೆಯೊಡ್ಡುವುದು ಶೋಭೆಯಲ್ಲ. ಸರ್ಕಾರ ಕೊರೊನಾ ತಡೆಗೆ ಜಾರಿಮಾಡಿರುವ ನಿಯಮವನ್ನು ನಾವು ಸ್ವಾಗತಿಸಿ ಪಾಲಿಸುತ್ತೇವೆ.
ನಂಜನಗೂಡಿನ ಜನತೆಗೆ ಸೀಮಿತಗೊಳಿಸಿ ಆಚರಿಸಲು ಅನುಮತಿ ನೀಡಿ. ಹೊರರಾಜ್ಯ ಹೊರ ತಾಲೂಕುಗಳಿಂದ ಗಳಿಂದ ಆಗಮಿಸುವ ಭಕ್ತರನ್ನು ತಾತ್ಕಾಲಿಕವಾಗಿ ನಿಷೇಧ ಮಾಡಿ.
ಪಂಚಮಹಾರಥ ಎಳೆಯಲು ನಂಜನಗೂಡಿನ ಜನತೆಗೆ ಅವಕಾಶ ಮಾಡಿಕೊಡಿ ಎಂದು ನಂಜನಗೂಡಿನ ಜನರು ಒತ್ತಾಯಿಸಿದ್ದಾರೆ.










