Nanjangudu : ಕಪಿಲೆಯಲ್ಲಿ ಈಜುವ ಸಾಹಸ, ಯುವಕ ನಾಪತ್ತೆ
ಮೈಸೂರು : ತುಂಬಿ ಹರಿಯುತ್ತಿರುವ ಕಪಿಲೆಯಲ್ಲಿ ಈಜುವ ಸಾಹಸಕ್ಕೆ ಮುಂದಾದ ಯುವಕ ನಾಪತ್ತೆಯಾಗಿದ್ದಾನೆ. ಅಹಮದ್ ಕರೀಂ ನಾಪತ್ತೆಯಾದ ಯುವಕ.
ನಂಜನಗೂಡು ತಾಲ್ಲೂಕು ಹೆಜ್ಜಿಗೆ ಗ್ರಾಮದ ಬಳಿ ಘಟನೆ ನಡೆದಿದೆ.
ಹೆಜ್ಜಿಗೆ ಸೇತುವೆಯಿಂದ ನದಿಗೆ ಮೂವರು ಯುವಕರು ಹಾರಿದ್ದರು.
ಇಬ್ಬರು ಯುವಕರು ಈಜಿ ದಡ ಸೇರಿದ್ದಾರೆ. ಅಹಮದ್ ಕರೀಂ ನಾಪತ್ತೆಯಾಗಿದ್ದಾನೆ.
ಅಹಮದ್ ಕರೀಂಗಾಗಿ ನದಿಯಲ್ಲಿ ಹುಡುಕಾಟ ನಡೆಸುತ್ತಿದ್ದಾರೆ.
ನಂಜನಗೂಡು ಪಟ್ಟಣದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ..