ಇದರಂತಹ ಬೊಗಸ್ ಸರ್ಕಾರವನ್ನ ನಾನು ನೋಡಿಲ್ಲ : ನಂಜೇರಾಜೇ ಅರಸ್
ಮಂಡ್ಯ : ದಸರಾ ವಿಚಾರವಾಗಿ ಇತಿಹಾಸ ತಜ್ಞ ನಂಜೇರಾಜೇ ಅರಸ್ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರಗಳಲ್ಲಿ ಇದರಂತಹ ಬೊಗಸ್ ಸರ್ಕಾರವನ್ನ ನಾನು ನೋಡಿಲ್ಲ.
ಮೈಸೂರಿನಲ್ಲಿ ದಸರಾ ಆಚರಣೆ ಮಾಡುತ್ತೇವೆ ಎಂದು ಹೇಳುತ್ತಾರೆ. ಹೆಚ್ಚಿನ ಜನರು ಬರಲೆಂದು ಲೈಟ್ಸ್ ಹಾಕ್ತಾರೆ.
ಆದರೆ, ಮೆರವಣಿಗೆ ಮಾತ್ರ ಕೋಟೆ ಒಳಗೆ ಕೊರೊನಾ ಬರುತ್ತದೆ ಎಂದು ಹೇಳುತ್ತಾರೆ. ಲಕ್ಷಾಂತರ ಜನ ಸೇರಿಸಿಕೊಂಡು ಸಭೆ ಸಮಾರಂಭ, ಯಾತ್ರೆ ಮಾಡಿದರೆ ಕೊರೊನಾ ಬರಲ್ಲ.
ಜನರು ದಸರಾಗೆ ಬಂದರೆ ಕೊರೊನಾ ಅಂತೆ.? ಇದೆಲ್ಲ ಸರ್ಕಾರದ ನಾಟಕ ಎಂದು ಕಿಡಿಕಾರಿದರು.
ಸರ್ಕಾರ ಜ್ಯಾತ್ಯತೀತ ಸರ್ಕಾರವಾದರೆ ಯಾವುದೇ ಧಾರ್ಮಿಕ ಆಚರಣೆ ಮಾಡುವಂತಿಲ್ಲ. ಚಾಮುಂಡಿಯನ್ನು ಹಿಂದೂ ದೇವರು ಎಂದು ಕರೆಯುತ್ತೀರಿ.
ಧಾರ್ಮಿಕ ಉತ್ಸವ ಮಾಡುವುದಕ್ಕೆ ಸರ್ಕಾರಕ್ಕೆ ಹಕ್ಕಿಲ್ಲ. ಆದರೂ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಇದೇ ವೇಳೆ ಮೈಷುಗರ್ ಕಾರ್ಖಾನೆ ಖಾಸಗೀಕರಣ ಬಗ್ಗೆ ಮಾತನಾಡಿ, ಮೈಷುಗರ್ ಕಾರ್ಖಾನೆಯನ್ನು ಸರ್ಕಾರಿ ಸ್ವಾಮ್ಯದಲ್ಲಿಯೇ ನಡೆಸಬೇಕು.
ನಷ್ಟ ಎಂಬ ಕಾರಣ ನೀಡಿ ಖಾಸಗಿಯವರಿಗೆ ಮಾರಾಟ ಮಾಡುವುದು ಸರಿಯಲ್ಲ. ಐತಿಹಾಸಿಕವಾಗಿ ರಾಜರು ಕಟ್ಟಿದಂಥ ಕಾರ್ಖಾನೆ ಉಳಿಸಬೇಕು ಎಂದು ಒತ್ತಾಯಿಸಿದರು.









