Shimogga : ಶಿವಮೊಗ್ಗದಲ್ಲಿ ಭಜರಂಗದಳ ಕಾರ್ಯಕರ್ತನ ಬರ್ಬರ ಹತ್ಯೆ ಪ್ರಕರಣ : ಬೊಮ್ಮಾಯಿ ಭೇಟಿ ಬಳಿಕ ನಾರಾಯಣ ಗೌಡ ಪ್ರತಿಕ್ರಿಯೆ
ಶಿವಮೊಗ್ಗದಲ್ಲಿ ಭಜರಂಗದಳ ಕಾರ್ಯಕರ್ತನ ಬರ್ಬರ ಹತ್ಯೆ ಪ್ರಕರಣ ಹಿನ್ನೆಲೆ, ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ಬಳಿಕ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ನಾರಾಯಣ ಗೌಡ ಅವರು ಪ್ರತಿಕ್ರಿಯೆ ನೀಡಿದ್ದಾರೆ.. SP ಹಾಗೂ ಜಿಲ್ಲಾಧಿಕಾರಿ ಜೊತೆಗೆ ಮಾತನಾಡಿದ್ದೇನೆ, ಶೀಘ್ರದಲ್ಲೇ ಪೊಲೀಸರು ಆರೋಪಗಳನ್ನು ಬಂಧಿಸುತ್ತಾರೆ..
ತನಿಖೆ ಆಗ್ತಿದೆ, ಈಗಲೇ ನಾನು ಏನು ಹೇಳಲ್ಲ.. ಸದನ ಮುಗಿಸಿಕೊಂಡು ನಾನು ಶಿವಮೊಗ್ಗ ಜಿಲ್ಲೆಗೆ ಹೋಗುತ್ತೇನೆ.ಆರು ತಿಂಗಳ ಹಿಂದೆ ಜಗಳವಾಗಿತ್ತು ಎಂಬ ಮಾಹಿತಿ ಇದೆ
ಯಾವ ಕಾರಣಕ್ಕೆ ಅನ್ನೋದು ಗೊತ್ತಿಲ್ಲ.. ತೆನಿಖೆ ನಡೆಯುತ್ತಿದೆ. ಎಸ್ ಪಿಯವರಿಂದ ಮತ್ತಷ್ಟು ಮಾಹಿತಿ ಪಡೆದು ತಿಳಿಸುತ್ತೇನೆ ಎಂದು ಹೇಳಿಕೊಂಡಿದ್ದಾರೆ.