Narendra Modi : ಖರ್ಗೆ ಕೇವಲ ನಾಮಕಾವಸ್ತೆ ಪ್ರೆಸಿಡೆಂಟ್ – ರಿಮೋಟ್ ಕಂಟ್ರೋಲ್ ಗೇಲಿ ಮಾಡಿದ ಮೋದಿ…
ಖರ್ಗೆ ಕೇವಲ ನಾಮಕಾವಸ್ತೆಗೆ ಪ್ರೆಸಿಡೆಂಟ್ ಆಗಿದ್ದಾರೆ, ಅವರ ರಿಮೋಟ್ ಕಂಟ್ರೋಲ್ ಅನ್ನ ಯಾರು ಹಿಡಿದಿದ್ದಾರೆ ಎಂದು ಎಲ್ಲರಿಗೂ ಗೊತ್ತಿದೆ ಎಂದು ಪ್ರಧಾನಿ ಮೋದಿ ಕಾಂಗ್ರೆಸ್ ವಿರುದ್ಧ ಬೆಳಗಾವಿಯಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಶಿವಮೊಗ್ಗ ಏರ್ಪೋರ್ಟ್ ಉದ್ಘಾಟನೆಯ ನಂತರ ಬೆಳಗಾವಿ ರೋಡ್ ಶೋನಲ್ಲಿ ಭಾಗವಹಿಸಿದ ಪ್ರಧಾನಿ ನಂತರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು. ಒಂದು ಕುಟುಂಬದ ಕಾಂಗ್ರೆಸ್ ನಾಯಕತ್ವ ರಾಯ್ ಪುರ್ ಸಮಾವೇಶದಲ್ಲಿ ಪಕ್ಷದ ಮಖ್ಯಸ್ಥ ಖರ್ಗೆಯವರನ್ನ ಅವಮಾನಿಸಿದೆ ಎಂದು ಮೋದಿ ಹೇಳಿದರು. ಕಾಂಗ್ರೆಸ್ ಅಧ್ಯಕ್ಷರು ಅವರಿಂದ ಅಗೌರವಕ್ಕೆ ಒಳಗಾಗಿದ್ದಾರೆ. ರಿಮೋಟ್ ಕಂಟ್ರೋಲ್ ಯಾರ ಬಳಿ ಇದೆ ಎಂದು ಜಗತ್ತಿಗೆ ಗೊತ್ತಿದೆ ಎಂದು ಹೇಳಿದರು.
ಗಾಂಧಿಗಳು ಕರ್ನಾಟಕ ನಾಯಕರನ್ನ ಅವಮಾನಿಸಿದ್ದಾರೆ ಎಂದು ಆರೋಪಿಸಿದರು. ಕಾಂಗ್ರೆಸ್ ಕರ್ನಾಟಕವನ್ನು ಹೇಗೆ ದ್ವೇಷಿಸುತ್ತದೆ ಎಂಬುದನ್ನು ನಾನು ನಿಮಗೆ ನೆನಪಿಸಲು ಬಯಸುತ್ತೇನೆ. ಇದು ಕರ್ನಾಟಕದ ನಾಯಕರನ್ನು ಅವಮಾನಿಸುತ್ತದೆ. ಕಾಂಗ್ರೆಸ್ಗೆ ಯಾರೇ ತೊಂದರೆ ಕೊಟ್ಟರೂ ಅವರನ್ನು ಅವಮಾನಿಸತೊಡಗುತ್ತದೆ. ಎಸ್ ನಿಜಲಿಂಗಪ್ಪ ಮತ್ತು ವೀರೇಂದ್ರ ಪಾಟೀಲ್ ಅವರನ್ನು ಕಾಂಗ್ರೆಸ್ ಕುಟುಂಬ ಹೇಗೆ ಅವಮಾನಿಸಿತು ಎಂಬುದಕ್ಕೆ ಇತಿಹಾಸವೇ ಸಾಕ್ಷಿ,” ಎಂದರು.
Narendra Modi: Kharge is only President in name – Modi made fun of remote control…