Narendra Modi : ಮೋದಿ ಶೈಕ್ಷಣಿಕ ಅರ್ಹತೆ ವಿಚಾರ – ಕೇಜ್ರಿವಾಲ್ ಗೆ 25 ಸಾವಿರ ದಂಡ ವಿಧಿಸಿದ ಹೈಕೋರ್ಟ್…
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಗುಜರಾತ್ ಹೈಕೋರ್ಟ್ ಬಿಗ್ ಶಾಕ್ ನೀಡಿದೆ. ಪ್ರಧಾನಿ ನರೇಂದ್ರ ಮೋದಿಯವರ ಪದವಿ ಮತ್ತು ಸ್ನಾತಕೋತ್ತರ ಪದವಿ ಪ್ರಮಾಣಪತ್ರಗಳನ್ನು ತೋರಿಸುವ ಅಗತ್ಯವಿಲ್ಲ ಎಂದು ಗುಜರಾತ್ ಹೈಕೋರ್ಟ್ ಇಂದು ತೀರ್ಪು ನೀಡಿದೆ.
ಅಷ್ಟೇ ಅಲ್ಲದೇ ಆ ವಿವರಗಳನ್ನ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ 25,000 ರೂದಂಡ ವಿಧಿಸಿದೆ ಕೋರ್ಟ್. ಇಂತಹ ವಿವರಗಳನ್ನು ಪ್ರಧಾನಿ ಕಚೇರಿ (ಪಿಎಂಒ) ನೀಡುವ ಅಗತ್ಯವಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಗುಜರಾತ್ ಹೈಕೋರ್ಟ್ನ ಏಕಸದಸ್ಯ ಪೀಠದ ನ್ಯಾಯಮೂರ್ತಿ ಬೈರೆನ್ ವೈಷ್ಣವ್ ಅವರು ಮೋದಿ ಅವರ ಶೈಕ್ಷಣಿಕ ಅರ್ಹತೆಯ ಸಾಕ್ಷ್ಯವನ್ನು ತೋರಿಸಲು ಪ್ರಧಾನ ಮಂತ್ರಿ ಕಚೇರಿಯ (ಪಿಎಂಒ) ಸಾರ್ವಜನಿಕ ಮಾಹಿತಿ ಅಧಿಕಾರಿ (ಪಿಐಒ) ಗೆ ಕೇಂದ್ರ ಮಾಹಿತಿ ಆಯೋಗ (ಸಿಐಸಿ) ನೀಡಿದ ಆದೇಶವನ್ನ ರದ್ದುಗೊಳಿಸಿದ್ದಾರೆ.
ಮೋದಿ ಅವರ ಪದವಿ ಮತ್ತು ಪಿಜಿ ಪದವಿಯ ವಿವರಗಳನ್ನ ಬಹಿರಂಗಪಡಿಸುವಂತೆ ಕೇಂದ್ರ ಮಾಹಿತಿ ಆಯೋಗ (ಸಿಐಸಿ) ನೀಡಿರುವ ಆದೇಶಗಳನ್ನ ಗುಜರಾತ್ ವಿಶ್ವವಿದ್ಯಾಲಯ ಮತ್ತು ದೆಹಲಿ ವಿಶ್ವವಿದ್ಯಾಲಯಗಳು ಸಹ ನಿರ್ಲಕ್ಷಿಸುತ್ತಿವೆ ಎಂದು ಅವರು ಹೇಳಿದರು. ಮೋದಿ ನಿಜವಾಗಿಯೂ ಪದವಿ, ಪಿಜಿ ಪದವಿ ಪಡೆದಿದ್ದಾರಾ? ಅರವಿಂದ್ ಕೇಜ್ರಿವಾಲ್ ಬಹಳ ದಿನಗಳಿಂದ ಕೇಳುತ್ತಿದ್ದಾರೆ.
Narendra Modi : Modi educational qualification issue – Kejriwal fined 25 thousand by High Court…