ನಾಳೆ ಕರ್ನಾಟಕಕ್ಕೆ ಮೋದಿ ಆಗಮನ – ಶಿವಮೊಗ್ಗ ಪ್ರವಾಸದ ವಿವಿರ ಹೀಗಿದೆ…
ಮಲೆ ನಾಡಿನ ಜನರ ಕನಸಿನ ವಿಮಾನ ನಿಲ್ದಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ನಾಳೆ ಶಿವಮೊಗ್ಗಕ್ಕೆ ಆಗಮಿಸಿ ಚಾಲನೆ ನೀಡಲಿದ್ದಾರೆ. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು 80ನೇ ವರ್ಷಕ್ಕೆ ಕಾಲಿಡುತ್ತಿರುವ ಸಂದರ್ಭದಲ್ಲಿ ಹುಟ್ಟು ಹಬ್ಬದ ಉಡುಗೊರೆಯಾಗಿ ಶಿವಮೊಗ್ಗಗೆ ಆಗಮಿಸಿ ವಿಮಾನ ನಿಲ್ದಾಣಕ್ಕೆ ಆಗಮಿಸಿ ಲೋಕಾರ್ಪಣೆಗೊಳಿಸಲಿದ್ದಾರೆ.
ಪ್ರಧಾನಿ ಮೋದಿಯವರ ನಾಳೆ ಶಿವಮೊಗ್ಗ ಪ್ರವಾಸದ ವಿವಿರ ಈ ರೀತಿ ಇದೆ…
ಪ್ರಧಾನಿ ನರೇಂದ್ರ ಮೋದಿ ದೆಹಲಿಯಿಂದ ನೇರವಾಗಿ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ. ದೆಹಲಿಯಿಂದ ಬೆಳಗ್ಗೆ 11.15ಕ್ಕೆ ಶಿವಮೊಗ್ಗ ನೂತನ ಏರ್ಪೋರ್ಟ್ ಗೆ ಆಗಮಿಸಲಿದ್ದಾರೆ. ವಿಮಾನ ಇಳಿದ ಬಳಿಕ ನೂತನ ಏರ್ ಪೊರ್ಟ್ ಟರ್ಮಿನಲ್ ವೀಕ್ಷಿಸಲಿದ್ದಾರೆ. ನಂತರ ಏರ್ ಪೊರ್ಟ್ ಆವರಣದಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ವೇದಿಕೆ ಕಾರ್ಯಕ್ರಮದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮೋದಿ ಭಾಷಣ ಮಾಡಲಿದ್ದಾರೆ. ಶಿವಮೊಗ್ಗ ಜಿಲ್ಲೆಗೆ ಸಾವಿರಾರು ಕೋಟಿ ಕೇಂದ್ರ ಅನುದಾನದ ವಿವಿಧ ಕಾಮಗಾರಿಗಳಿಗೆ ಮೋದಿ ಚಾಲನೆ ನೀಡಲಿದ್ದಾರೆ.
ಮಧ್ಯಾಹ್ನ 1.30ಕ್ಕೆ ಮೋದಿ ಶಿವಮೊಗ್ಗ ಏರ್ಪೋರ್ಟ್ ನಿಂದ ಬೆಳಗಾವಿಯತ್ತ ಪಯಾಣ ಬೆಳೆಸಲಿದ್ದಾರೆ. ಅಲ್ಲಿ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡುವುದರ ಜೊತೆಗೆ ಪಿ ಎಂ ಕಿಸಾನ್ ಯೋಜನೆಯ 13 ನೇ ಕಂತಿನ ಹಣವನ್ನ ಬಿಡುಗಡೆ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಬಿಎಸ್ ಯಡಿಯೂರಪ್ಪ, ಈಶ್ವರಪ್ಪ, ಸಂಸದ ಬಿವೈ ರಾಘವೇಂದ್ರ ಸೇರಿದಂತೆ ಹಲವು ಕೇಂದ್ರ ಮತ್ತು ರಾಜ್ಯ ಸಚಿವರು ಭಾಗಿಯಾಗಲಿದ್ದಾರೆ.
Narendra Modi : Modi’s arrival in Karnataka tomorrow – Shimoga tour details are as follows…