Narendra modi
ನವದೆಹಲಿ: ಇಂದು ದೇಶದ ಮೊದಲ ಪ್ರಧಾನಮಂತ್ರಿ ಜವಾಹರ್ ಲಾಲ್ ನೆಹರು ಅವರ 131ನೇ ಜನ್ಮದಿನ. ಆದ್ರೆ ಈ ದಿನವನ್ನ ನೆಹರು ಅವರ ಆಸೆಯಂತೆಯೇ ಮಕ್ಕಳ ದಿನಾಚರಣೆಯಂದು ಆಚರಣೆ ಮಾಡಲಾಗುತ್ತೆ. ಪ್ರತಿ ವರ್ಷ ಮಕ್ಕಳಿಗೆ ಸಿಹಿ ಶಾಲೆಗಳಲ್ಲಿ ಮಕ್ಕಳೊಂದಿಗೆ ಈ ದಿನವನ್ನ ಆಚರಣೆ ಮಾಡಲಾಗ್ತಿತ್ತು. ಆದರೆ ಈ ಬಾರಿ ಕೊರೊನಾದಿಂದಾಗಿ ಶಾಲೆಗಳೆಲ್ಲಾ ಬಂದ್ ಆಗಿವೆ. ಹೀಗಾಗಿ ಪ್ರತಿ ಬಾರಿಯಂತೆ ಈ ಬಾರಿ ಶಾಲೆಗಳಲ್ಲಿ ಮಕ್ಕಳೆನ್ನೆಲ್ಲಾ ಒಟ್ಟಾಗಿ ಸೇರಿಸಿ ಮಕ್ಕಳ ದಿನಾಚರಣೆ ಆಚರಣೆ ಮಾಡಲಾಗ್ತಿಲ್ಲ.
ಅಂದ್ಹಾಗೆ ಚಾಚಾ ನೆಹರು ಅವರ ಜನ್ಮದಿನಾಚರಣೆ ಪ್ರಯುಕ್ತ ಹಲವು ಗಣ್ಯರು ಸಾಮಾಜಿಕ ಜಾಲತಾಣದ ಮೂಲಕ ನೆಹರು ಅವರನ್ನ ಸ್ಮರಿಸಿದ್ದಾರೆ. ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನೆಹರು ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ. ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ‘ದೇಶದ ಮೊದಲ ಪ್ರಧಾನಮಂತ್ರಿ ಪಂಡಿತ್ ಜವಾಹರ್ ಲಾಲ್ ನೆಹರು ಅವರ ಜನ್ಮ ದಿನಾಚರಣೆ ಹಿನ್ನೆಲೆಯಲ್ಲಿ ಗೌರವ ನಮನ ಸಲ್ಲಿಸುತ್ತಿದ್ದೇನೆಂದು’ ಹೇಳಿದ್ದಾರೆ.
ನೆಹರು ಅವರು ಆಗಸ್ಟ್ 15, 1947 ರಂದು ದೇಶದ ಮೊದಲ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದರು. ಸ್ವತಂತ್ರ ಭಾರತದ ಮೊದಲ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರೂ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಪ್ರತಿವರ್ಷ ನವೆಂಬರ್ 14 ರಂದು ಮಕ್ಕಳ ದಿನಾಚರಣೆಯೆಂದು ಆಚರಿಸಲಾಗುತ್ತಿದೆ.
Narendra modi
‘ದೀಪಾವಳಿ ಶುಭಾಶಯ’ : ಕನ್ನಡದಲ್ಲೇ ಶುಭ ಕೋರಿದ ರಾಜ್ಯಪಾಲ ವಜುಬಾಯಿವಾಲ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








