ಹೈದರಾಬಾದ್: ಭಾರತ-ಚೀನಾ ಸಂಘರ್ಷದ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಉನ್ನತ ನಾಯಕತ್ವ ನಾಪತ್ತೆಯಾಗಿದೆ ಎಂದು ಎಐಎಂಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಮ್ಮ ಯೋಧರು ಚೀನಾದ ಪಿಎಲ್ಎ ಯೋಧರನ್ನು ಗಡಿಯಲ್ಲಿ ಧೈರ್ಯದಿಂದ ನಿಯಂತ್ರಿಸಿದ್ದಾರೆ. ಸೇನೆ ಪಾಲಿಗೆ ಇದು ಸುದೀರ್ಘ ಸಮಸ್ಯೆಯೇ ಅಲ್ಲ. ಆದರೆ ದೆಹಲಿಯಲ್ಲಿ ಕುಳಿತಿರುವ ಕೇಂದ್ರ ಸರ್ಕಾರದ ಹಿರಿಯ ನಾಯಕತ್ವ ನಾಪತ್ತೆಯಾಗಿದೆ. ಈ ಸಂಬಂಧ ದೃಢನಿರ್ಧಾರ ತೆಗೆದುಕೊಳ್ಳುವಲ್ಲಿ ವಿಫಲವಾಗಿದೆ ಎಂದು ಓವೈಸಿ ಕಿಡಿಕಾರಿದ್ದಾರೆ.
ಚೀನಾ ಮತ್ತು ಭಾರತದ ನಡುವೆ ಶೀಥಲ ಸಮರವೇರ್ಪಟ್ಟಿದೆ. ಲಡಾಖ್ ಸಂಘರ್ಷ ನಡೆದು ವಾರಗಳೇ ಕಳೆದರೂ ಈ ವರೆಗೂ ಪ್ರಧಾನಿ ಮೋದಿ ಒಂದೂ ಪದವನ್ನೂ ಆಡಿಲ್ಲ. ಪ್ರಧಾನಿ ಮೋದಿ ನವಿಲುಗಳಿಗೆ ಆಹಾರ ನೀಡುವುದರಿಂದ ಬಿಡುವು ಪಡೆದ್ರೆ ಈ ಬಗ್ಗೆ ಮಾತನಾಡಲು ಸಮಯ ಸಿಗಬಹುದೇನೋ ಎಂದು ವ್ಯಂಗ್ಯವಾಡಿದ್ದಾರೆ.