ಹಿಮಾಚಲ ತಲುಪಿದ ಪ್ರಧಾನಿ ದೇಖೋ ದೇಖೋ ಶೇರ್ ಆಯಾ ಎಂದು ಸ್ವಾಗತ..
ವಿಧಾನಸಭಾ ಚುನಾವಣೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು 17 ದಿನಗಳಲ್ಲಿ ಮೂರನೇ ಬಾರಿಗೆ ಹಿಮಾಚಲ ಪ್ರದೇಶಕ್ಕೆ ಆಗಮಿಸಿದ್ದಾರೆ. ಉನಾ ತಲುಪಿರುವ ಪ್ರಧಾನಿಯವರನ್ನ ಜನ ಆತ್ಮೀಯವಾಗಿ ಸ್ವಾಗತಿಸಿದರು. ಮೋದಿ ಜನಸಮೂಹ ತಲುಪಿದ ತಕ್ಷಣ ಜೈ ಶ್ರೀರಾಮ್ ಮತ್ತು ದೇಖೋ-ದೇಖೋ, ಶೇರ್ ಆಯಾ, ಶೇರ್ ಆಯಾ ಎಂಬ ಘೋಷಣೆಗಳು ಮೊಳಗಲು ಪ್ರಾರಂಬಿಸಿದರು. ನಿಮ್ಮ ಈ ಮಗನಿಗೆ ತನ್ನ ಹೆತ್ತವರ ನೋವು ಅರ್ಥವಾಗದಿದ್ದರೆ ಯಾರಿಗೆ ಅರ್ಥವಾಗುತ್ತದೆ ಎಂದು ಪ್ರಧಾನಿ ಹೇಳಿದರು.
Himachal gives a euphoric welcome to PM @narendramodi ji … The love our PM gets from public is unparalleled … pic.twitter.com/ED1X2Rp0V8
— Visshnu Mittal (@visshnumittal) October 13, 2022
ಉನಾದಿಂದ ದೆಹಲಿಗೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಪ್ರಧಾನಿ ಚಾಲನೆ ನೀಡಿದರು. ಇದರ ನಂತರ ಬಲ್ಕ್ ಡ್ರಗ್ ಫಾರ್ಮಾ ಪಾರ್ಕ್ ಮತ್ತು ಐಐಟಿ ಕ್ಯಾಂಪಸ್ ಉದ್ಘಾಟನೆ ಮಾಡಲಾಯಿತು. ಉನಾದಲ್ಲಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ನಂತರ ಪ್ರಧಾನಿ ಚಂಬಾ ತಲುಪಿದರು. ವಿದ್ಯುತ್ ಯೋಜನೆಗಳ ಉದ್ಘಾಟನೆ ನಂತರ ರ್ಯಾಲಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಹಿಮಾಚಲದ ಜನರು ಸಹ ಹಳೆಯ ಪದ್ಧತಿಯನ್ನು ಬದಲಾಯಿಸಲು ನಿರ್ಧರಿಸಿದ್ದಾರೆ ಎಂದು ಪ್ರಧಾನಿ ಹೇಳಿದರು. ಆದ್ದರಿಂದ ಡಬಲ್ ಎಂಜಿನ್ ಸರ್ಕಾರವು ಹಿಮಾಚಲದಲ್ಲೂ ಸರ್ಕಾರವನ್ನು ಪುನರಾವರ್ತಿಸುವ ಹೊಸ ಇತಿಹಾಸವನ್ನು ಸೃಷ್ಟಿಸುತ್ತದೆ ಎಂದು ತಿಳಿಸಿದರು.
ಹಿಂದಿನ ಸರ್ಕಾರಗಳು 7 ಸಾವಿರ ಕಿಮೀ ರಸ್ತೆಗಳನ್ನು ನಿರ್ಮಿಸಿವೆ ಮತ್ತು ನಾವು ಈಗ 8 ವರ್ಷಗಳಲ್ಲಿ 12 ಸಾವಿರ ಕಿಮೀ ಗ್ರಾಮೀಣ ರಸ್ತೆಗಳನ್ನು ನಿರ್ಮಿಸಿದ್ದೇವೆ ಎಂದು ಪ್ರಧಾನಿ ಲೇವಡಿ ಮಾಡಿದರು. ಹಿಮಾಚಲದಲ್ಲಿ ಶಾಂತಾ ಜಿ ಮತ್ತು ಧುಮಲ್ ಜಿ ಅವರು ಸಿಎಂ ಆಗಿದ್ದಾಗ ದೆಹಲಿಯಲ್ಲಿ ತಮ್ಮ ಹಕ್ಕುಗಳಿಗಾಗಿ ಹೋರಾಡುವುದನ್ನು ನೋಡಿದ್ದೇವೆ ಆದರೆ ಈಗ ಅವರ ಸರ್ಕಾರ ಗುಡ್ಡಗಾಡು ರಾಜ್ಯಗಳ ಜನರಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ಹೇಳಿದರು.
Narendra Modi: Prime Minister Welcome to Himachal – Dekho Dekho Sher Aya..








