ಕರ್ನಾಟಕದ 2 ಸಾಧಕರಿಗೆ ನಾರಿ ಶಕ್ತಿ ಪುರಸ್ಕಾರ – Saaksha Tv
ಬೆಂಗಳೂರು: 2020-21ನೇ ಸಾಲಿನ ನಾರೀಶಕ್ತಿ ಪುರಸ್ಕಾರ 29 ಸಾಧಕರಿಗೆ ಲಭಿಸಿದ್ದು, ಇದರಲ್ಲಿ ಕರ್ನಾಟಕದ ಇಬ್ಬರು ಸಾಧಕರಿಗೆ ಲಭಿಸಿದೆ.
ಕರ್ನಾಟಕದ ಇಂಟೆಲ್ ಇಂಡಿಯಾ ಕಂಪನಿಯ ಕಂಟ್ರಿ ಹೆಡ್ ಆಗಿರುವ ನಿವೃತ್ತಿ ರಾಯ್ ಅವರಿಗೆ ಸಾಫ್ಟ್ವೇರ್ ಕ್ಷೇತ್ರದಲ್ಲಿ ನೀಡಿದ ಕೊಡುಗೆ ಪರಿಗಣಿಸಿ 2020ನೇ ಸಾಲಿನ ಪ್ರಶಸ್ತಿ ಪ್ರಕಟಿಸಲಾಗಿದೆ. ಇನ್ನು ಬೆಳಗಾವಿಯ ಶೋಭಾ ಗಸ್ತಿ ದೇವದಾಸಿ ಮಹಿಳೆಯರ ಸಬಲೀಕರಣ ಹಾಗೂ ದೇವದಾಸಿ ಪದ್ಧತಿಯ ನಿರ್ಮೂಲನೆಗೆ ಶ್ರಮ ಪಡುತ್ತಿರುವ ಸಾಧಕರಿಗೆ 2021ನೇ ಸಾಲಿನ ಪ್ರಶಸ್ತಿ ನೀಡಲಾಗುತ್ತದೆ.
ಹೆಣ್ಣು ಮಕ್ಕಳ ಸಮಸ್ಯೆಗಳಿಗೆ ಸ್ಪಂದನೆ, ದೇವದಾಸಿಯರ ಕುರಿತಾಗಿ ಮಾಡಿರುವ ಅಮೋಘ ಸೇವೆಯನ್ನು ಪರಿಗಣಿಸಿ ಕೇಂದ್ರ ಸರ್ಕಾರವು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಘಟಪ್ರಭಾದ ಶೋಭಾ ಗಸ್ತಿ ಅವರಿಗೆ ನಾರಿಶಕ್ತಿ ಪುರಸ್ಕಾರಕ್ಕೆ ಆಯ್ಕೆ ಮಾಡಿದೆ. ವಿಶ್ವ ಮಹಿಳಾ ದಿನದ ಅಂಗವಾಗಿ ಮಾ.8ರಂದು ದೆಹಲಿಯಲ್ಲಿ ಈ ಪ್ರಶಸ್ತಿಯನ್ನು ಶೋಭಾ ಅವರಿಗೆ ಪ್ರದಾನ ಮಾಡಲಿದೆ ಕೇಂದ್ರ ಸರ್ಕಾರ.
ನನಗೆ ಕೇಂದ್ರ ಸರ್ಕಾರದ ಅತ್ಯುನ್ನತ ನಾರಿ ಶಕ್ತಿ ಪುರಸ್ಕಾರ ಸಿಗುತ್ತದೆ ಎನ್ನುವುದು ನನಗೆ ಗೊತ್ತಿರಲಿಲ್ಲ. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹಾಗೂ ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡುವುದು ಇಂದಿನ ಅತ್ಯವಶ್ಯವಾಗಿದೆ ಎಂದು ಹಂಚಿಕೊಂಡ ಶೋಭಾ ಗಸ್ತಿ ಹೇಳಿದ್ದಾರೆ.








