29 ಸಾಧಕರಿಗೆ ನಾರಿ ಶಕ್ತಿ ಪುರಸ್ಕಾರ – Saaksha Tv
ನವದೆಹಲಿ: 2020-21ನೇ ಸಾಲಿನ ನಾರೀಶಕ್ತಿ ಪುರಸ್ಕಾರವನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು 29 ಸಾಧಕರಿಗೆ ಪ್ರದಾನ ಮಾಡಲಿದ್ದಾರೆ.
ಇಂದು 2020ನೇ ಸಾಲಿನ 14 ಹಾಗೂ 2021ನೇ ಸಾಲಿನ 14 ಒಟ್ಟು 28 ಪ್ರಶಸ್ತಿಗಳನ್ನು 29 ಸಾಧಕರಿಗೆ ನೀಡಿ ಗೌರವಿಸಲಾಗುವುದು. ಸಮಾಜದಲ್ಲಿ ಯಾವುದೇ ಅಸಾಧರಣ ಕೊಡುಗೆ ನೀಡಿದ, ಸಮಾಜದಲ್ಲಿ ಧನಾತ್ಮಕ ಬೆಳವಣಿಗೆಗೆ ಕಾರಣವಾದ ವ್ಯಕ್ತಿಗಳಿಗೆ ಅಥವಾ ಸಂಸ್ಥೆಗಳಿಗೆ ಈ ಪುರಸ್ಕಾರವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದಿಂದ ನೀಡಲಾಗುತ್ತದೆ.
https://twitter.com/narendramodi/status/1500859705043734529?ref_src=twsrc%5Etfw%7Ctwcamp%5Etweetembed%7Ctwterm%5E1500859705043734529%7Ctwgr%5E%7Ctwcon%5Es1_&ref_url=https%3A%2F%2Fwww.etvbharat.com%2Fkannada%2Fkarnataka%2Fbharat%2Fprez-kovind-to-confer-nari-shakti-puraskars-on-29-outstanding-individuals%2Fka20220308102748244
ಈ ಬಾರಿ ಮರ್ಚೆಂಟ್ ನೇವಿ ಕ್ಯಾಪ್ಟನ್ ರಾಧಿಕಾ ಮೆನನ್, ಸಾಮಾಜಿಕ ಉದ್ಯಮಿ ಅನಿತಾ ಗುಪ್ತಾ, ಸಾವಯವ ಕೃಷಿಕರು ಮತ್ತು ಬುಡಕಟ್ಟು ಜನಾಂಗದ ಹೋರಾಟಗಾರ್ತಿ ಉಷಾಬೆನ್ ದಿನೇಶ್ಭಾಯಿ ವಾಸವಾ, ನವೋದ್ಯಮಿ ನಾಸಿರಾ ಅಖ್ತರ್, ಇಂಟೆಲ್ ಇಂಡಿಯಾ ಮುಖ್ಯಸ್ಥೆ ನಿವೃತ್ತಿ ರೈ, ಡೌನ್ ಸಿಂಡ್ರೋಮ್ ಪೀಡಿತ ಕಥಕ್ ನರ್ತಕಿ ಸೇಲಿ ನಂದಕಿಶೋರ್, ಮೊದಲ ಮಹಿಳಾ ಉರಗ ರಕ್ಷಕಿ ವನಿತಾ ಜಗದೇವ್ ಬೊರಾಡೆ ಮತ್ತು ಗಣಿತ ತಜ್ಞೆ ನೀನಾ ಗುಪ್ತಾ ಮುಂತಾದವರು ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.
ಮಹಿಳಾ ದಿನಾಚರಣೆಯ ಹಿಂದಿನ ದಿನ ಪ್ರಧಾನಿ ನರೇಂದ್ರ ಮೋದಿ ಅವರು ನಾರೀಶಕ್ತಿ ಪುರಸ್ಕೃತರ ಜೊತೆ ಸಂವಾದ ನಡೆಸಿದರು. ಸಂವಾದ ವೇಳೆ ಸಾಧಕರನ್ನು ಶ್ಲಾಘಿಸಿದ ಪ್ರಧಾನಮಂತ್ರಿ, ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರ ಹೆಜ್ಜೆ ಗುರುತುಗಳಿವೆ. ರಾಜ್ಯ ಹಾಗೂ ದೇಶಕ್ಕೆ ಕೊಡುಗೆ ನೀಡುತ್ತಿರುವ ಈ ಎಲ್ಲ ಸಾಧಕರು ಮಾಡುತ್ತಿರುವ ಕೆಲಸಗಳಲ್ಲಿ ಸೇವಾ ಮನೋಭಾವವಿದ್ದರೂ, ಅವರ ಕೆಲಸದಲ್ಲಿ ಹೊಸತನ ಗೋಚರಿಸುತ್ತದೆ ಎಂದರು.








