2030ಕ್ಕೆ ಭಯಾನಕ ಪ್ರವಾಹದ ಎಚ್ಚರಿಕೆ : ವಿನಾಶದ ಬಗ್ಗೆ ಮಾಹಿತಿ ಕೊಟ್ಟ ಸಂಶೋಧನೆ – ನಾಸಾ ಹೇಳಿದ್ದೇನು..?
ದೈತ್ಯ ಬಾಹ್ಯಾಕಾಶ ಸಂಸ್ಥೆಯಾಗಿರುವ ನ್ಯಾಷನಲ್ ಏರೋನಾಟಿಕ್ಸ್ ಅಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್ (NASA) ಹೊಸ ಅಧ್ಯಯನ ನಡೆಸಿದ್ದು ಇಡೀ ವಿಶ್ವಕ್ಕೆ ಆಘಾತಕಾರಿಯಾದ ಅಂಶವನ್ನು ತಿಳಿಸಿದೆ.
ಹೌದು ಚಂದ್ರನ ಕಕ್ಷೆಯಲ್ಲಿ ಕಂಪನ ಕಂಡುಕೊಂಡಿದ್ದು, ಜಗತ್ತಿನ ವಿನಾಶದ ಬಗ್ಗೆ ಈ ಸಂಶೋಧನೆ ಮಾಹಿತಿ ಹೊರಹಾಕಿದೆ. ನಿರಂತರವಾಗಿ ಸಮುದ್ರ ಮಟ್ಟದಲ್ಲಿ ಏರಿಕೆಯಾಗುತ್ತಿರುವುದು 2030ರ ವೇಳೆಗೆ ವಿನಾಶಕಾರಿ ಪ್ರವಾಹಕ್ಕೆ ಕಾರಣವಾಗಲಿದೆ ಎಂದು ಎಚ್ಚರಿಕೆ ನೀಡಿದೆ ನಾಸಾ.
ಕೊರೊನಾ ಸಂಕಷ್ಟ – ಈ ಬಾರಿಯೂ ಕನ್ವರ್ ಯಾತ್ರೆ ರದ್ದು
ಇನ್ನೂ ಪ್ರವಾಹಗಳು ಅನಿಯಮಿತವಾಗಿದ್ದು ಹೆಚ್ಚು ತೀವ್ರವಾಗಿ ಸಂಭವಿಸಲಿದೆ ಎನ್ನುತ್ತಿದ್ದಾರೆ ವಿಜ್ಞಾನಿಗಳು. ಇನ್ನೂ ಅಮೆರಿಕದ ಕರಾವಳಿಯು ಈ ಹೊಡೆತಕ್ಕೆ ಸಾಕಷ್ಟು ಹತ್ತಿರದಲ್ಲಿದ್ದು ಭಾರೀ ಮುಂಜಾಗ್ರತೆ ವಹಿಸಬೇಕು ಎಂದು ಅಧ್ಯಯನ ಹೇಳಿದೆ.
ಅಧ್ಯಯನದ ಪ್ರಮುಖ ಲೇಖಕ ಹವಾಯಿ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಫಿಲ್ ಥಾಂಪ್ಸನ್ ಭೂಮಿಯಲ್ಲಿ ಪ್ರವಾಹ ಉಂಟಾಗಲು ಚಂದ್ರನ ಪ್ರಭಾವದ ಬಗ್ಗೆ ತಿಳಿಸಿದರು. ಚಂದ್ರನ ಕಕ್ಷೆಯಲ್ಲಿನ ಕಂಪನ ಪೂರ್ಣಗೊಳ್ಳಲು 18.6 ವರ್ಷಗಳು ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದಾರೆ.
ಕಂಪನ ಎನ್ನುವುದು ಇದ್ದೇ ಇರುತ್ತದೆ. ಆದರೆ ಗ್ರಹದ ಉಷ್ಣತೆ ಹೆಚ್ಚಾದಾಗ ಸಮುದ್ರ ಮಟ್ಟದಲ್ಲಿ ಏರಿಕೆಯಾಗುತ್ತದೆ ಆಗ ಈ ಕಂಪನ ಸೇರಿಬಿಟ್ಟರೇ ಅದು ವಿನಾಶಕ್ಕೆ ಕಾರಣವಾಗುತ್ತೆ ಎಂದು ಥಾಂಪ್ಸನ್ ಹೇಳಿದ್ದಾರೆ. ಈ ಭಯಾನಕ ಪ್ರವಾಹವು 2030ರ ದಶಕದ ಮಧ್ಯಭಾಗದಲ್ಲಿ ಕಂಡು ಬರಲಿದೆ. ಅಲ್ಲದೇ ಹೆಚ್ಚುತ್ತಿರುವ ಸಮುದ್ರ ಮಟ್ಟವೂ ಈ ಆತಂಕವನ್ನು ಇನ್ನಷ್ಟು ಇಮ್ಮಡಿಗೊಳಿಸಿದೆ. ಜಾಗತಿಕ ತಾಪಮಾನವನ್ನು ಇನ್ನಾದರೂ ನಿಯಂತ್ರಣಕ್ಕೆ ತರದೇ ಹೋದರೆ ಸಾಕಷ್ಟು ಕಷ್ಟವನ್ನು ಎದುರಿಸಲು ಸಜ್ಜಾಗಬೇಕಿದೆ ಎಂದು ಎಚ್ಚರಿಸಿದ್ದಾರೆ.
ಸೆಪ್ಟೆಂಬರ್ 11 ರಂದು ನೀಟ್ ಸ್ನಾತಕೋತ್ತರ ಪರೀಕ್ಷೆ
ನಾಸಾದ ವೆಬ್ಸೈಟ್ ಪ್ರಕಾರ ಚಂದ್ರನು ತನ್ನ ಅಂಡಾಕಾರದ ಕಕ್ಷೆಗೆ ಬಂದಾಗ ಅದರ ವೇಗವು ಬದಲಾಗುತ್ತದೆ. ಲೈಟ್ ಸೈಡ್ ನ ನಮ್ಮ ದೃಷ್ಟಿಕೋನವು ಸ್ವಲ್ಪ ವಿಭಿನ್ನ ಕೋನಗಳಲ್ಲಿ ಗೋಚರಿಸುವಂತೆ ಮಾಡುತ್ತದೆ. ಸಾಮಾನ್ಯವಾಗಿ ಆಕಾಶವನ್ನು ನೋಡುವುದರಿಂದ ನಮಗೆ ಇದು ಗೋಚರವಾಗುವುದಿಲ್ಲ. ಪೂರ್ಣ ತಿಂಗಳ ಚಂದ್ರನ ವೀಕ್ಷಣೆಗಳನ್ನು 12 ಸೆಕೆಂಡುಗಳಲ್ಲಿ ಸಂಕುಚಿತಗೊಳಿಸಿದಾಗ ಈ ಅಗೋಚರ ಅಂಶವನ್ನು ಲೆಕ್ಕಹಾಕಬಹುದು ಎಂದಿದ್ದಾರೆ.