2030ರಲ್ಲಿ ಶುಕ್ರಗ್ರಹಕ್ಕೆ ಗಗನನೌಕೆ ಕಳಿಸುವುದಾಗಿ ನಾಸಾ ಘೋಷಣೆ
ಬ್ರಿಟನ್ : ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ ಸೌರವ್ಯೂಹದ ಸದಸ್ಯ ಶುಕ್ರಗ್ರಹಕ್ಕೆ ವ್ಯೋಮನೌಕೆ ಕಳಿಸಿ, ಅಧ್ಯಯನ ಕೈಗೊಳ್ಳುವ ಯೋಜನೆಗಳನ್ನು ಘೋಷಿಸಿದೆ. ಈ ಬಾಹ್ಯಾಕಾಶ ಕಾರ್ಯಕ್ರಮಗಳನ್ನು ಕ್ರಮವಾಗಿ 2028 ಹಾಗೂ 2030ರಲ್ಲಿ ಕಾರ್ಯಗತಗೊಳಿಸಲಾಗುವುದು ಎಂದು ನಾಸಾ ಹೇಳಿದೆ.
ಅಂದ್ಹಾಗೆ 1970ರಲ್ಲಿ ಆಗಿನ ಸೋವಿಯತ್ ಒಕ್ಕೂಟ ‘ವೆನೆರಾ-7’ ಎಂಬ ಗಗನನೌಕೆಯನ್ನು ಶುಕ್ರ ಗ್ರಹಕ್ಕೆ ಕಳಿಸಿತ್ತು. ಆ ಗ್ರಹದ ಮೇಲೆ ಇಳಿಯುವ ಮುನ್ನವೇ, ಅಲ್ಲಿನ ಉಷ್ಣತೆಗೆ ಪ್ಯಾರಾಚೂಟ್ ಕರಗಿದ ಕಾರಣ, ಆ ವ್ಯೋಮಯಾನ ವಿಫಲವಾಗಿತ್ತು.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.








