ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ನಮ್ಮ ಕೆಚ್ಚೆದೆಯ ವೀರರಿಗೆ ಭಾವಪೂರ್ಣ ಶ್ರದ್ಧಾಂಜಲಿ
ಇಂದು ಭಾರತೀಯರು ಎಂದಿಗೂ ಮರೆಯಲಾಗದ ಕರಾಳ ದಿನ. ಪಾಕಿಸ್ತಾನಿ ಉಗ್ರನೋರ್ವ ನಡೆಸಿದ ಆತ್ಮಾಹುತಿ ದಾಳಿಗೆ 40 ಭಾರತೀಯ ಮೀಸಲು ಪಡೆಯ ಯೋಧರು ಹುತಾತ್ಮರಾದ ದಿನ.
ಫೆಬ್ರವರಿ 14 ರ ಭಾನುವಾರದಂದು ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳಾದ್ಯಂತ ನೆಟ್ಟಿಗರು ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ ಎರಡು ವರ್ಷಗಳ ಹಿಂದೆ ರಾಷ್ಟ್ರಕ್ಕಾಗಿ ತಮ್ಮ ಪ್ರಾಣ ತ್ಯಾಗ ಮಾಡಿದ ಧೈರ್ಯಶಾಲಿ ಯೋಧರನ್ನು ನೆನಪಿಸಿಕೊಂಡರು.
ಇಂದಿಗೆ ಸರಿಯಾಗಿ ಎರಡು ವರ್ಷಗಳ ಹಿಂದೆ ಭಯೋತ್ಪಾದಕ ಗುಂಪು ಜೈಶ್-ಎ-ಮೊಹಮ್ಮದ್ ಆತ್ಮಹತ್ಯಾ ಬಾಂಬರ್ ಆದಿಲ್ ಅಹ್ಮದ್ ದಾರ್ ತನ್ನ ಸ್ಫೋಟಕ ತುಂಬಿದ ಕಾರನ್ನು ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ಬೆಂಗಾವಲಿಗೆ ನುಗ್ಗಿಸಿದ. ಇದರ ಪರಿಣಾಮವಾಗಿ ಅಲ್ಲಿನ ಚಿತ್ರಣ ರಕ್ತ ಸಿಕ್ತವಾಗಿ ಬದಲಾಯಿತು. ಈ ದುರಂತದಲ್ಲಿ 40 ಭಾರತೀಯ ಮೀಸಲು ಪಡೆಯ ಯೋಧರು ಹುತಾತ್ಮರಾದರು.
ಬೆಂಗಾವಲಿನಲ್ಲಿ 78 ಬಸ್ಗಳಿದ್ದು, ಸುಮಾರು 2,500 ಸಿಬ್ಬಂದಿ ಜಮ್ಮುವಿನಿಂದ ಶ್ರೀನಗರಕ್ಕೆ ಪ್ರಯಾಣಿಸುತ್ತಿದ್ದರು. ಈ ಮಾರಣಾಂತಿಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ಸಂಬಂಧ ತೀವ್ರ ಹದಗೆಟ್ಟಿತು. ಅದಕ್ಕೆ ಪ್ರತಿಯಾಗಿ ಭಾರತವು ಪಾಕಿಸ್ತಾನದ ಜೆಎಂನ ಬಾಲಕೋಟ್ ಭಯೋತ್ಪಾದಕ ತರಬೇತಿ ಶಿಬಿರದ ಮೇಲೆ ವೈಮಾನಿಕ ದಾಳಿ ನಡೆಸಿತು.
ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನಕ್ಕೆ ನೀಡಲಾದ ಮೋಸ್ಟ್ ಫೇವರ್ಡ್ ನೇಷನ್ (ಎಂಎಫ್ಎನ್) ಸ್ಥಾನಮಾನವನ್ನೂ ಹಿಂತೆಗೆದುಕೊಳ್ಳಲಾಗಿದೆ.
ಸಿಆರ್ಪಿಎಫ್ ಭಾನುವಾರ ಪುಲ್ವಾಮಾ ದಾಳಿಯ ಹುತಾತ್ಮರನ್ನು ನೆನಪಿಸಿಕೊಂಡಿದ್ದು, ಕ್ಷಮಿಸುವುದಿಲ್ಲ ಮತ್ತು ಮರೆಯುವುದಿಲ್ಲ: #ಪುಲ್ವಾಮಾ ಅಟ್ಯಾಕ್ನಲ್ಲಿ ರಾಷ್ಟ್ರಕ್ಕಾಗಿ ಸರ್ವೋಚ್ಚ ತ್ಯಾಗ ಮಾಡಿದ ನಮ್ಮ ಸಹೋದರರಿಗೆ ನಮನಗಳು. ನಾವು ನಮ್ಮ ಧೀರ ಯೋಧರ ಕುಟುಂಬಗಳೊಂದಿಗೆ ನಿಲ್ಲುತ್ತೇವೆ ಎಂದು ಟ್ವೀಟ್ ಮಾಡಿದೆ.
ಇದಲ್ಲದೆ, 2019 ರ ಪುಲ್ವಾಮಾ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಎಲ್ಲಾ 40 ಸೈನಿಕರಿಗೂ ಭಾರತೀಯರು ಗೌರವ ಸಲ್ಲಿಸಿದ್ದಾರೆ.
ಕಳೆದ ವರ್ಷ, ಎಲ್ಲಾ 40 ಹುತಾತ್ಮರ ಸ್ಮಾರಕವನ್ನು ಫೆಬ್ರವರಿ 14 ರಂದು ಪುಲ್ವಾಮಾದ ಲೆಥ್ಪೊರಾ ಶಿಬಿರದ ಸಿಆರ್ಪಿಎಫ್ ತರಬೇತಿ ಕೇಂದ್ರದಲ್ಲಿ ಉದ್ಘಾಟಿಸಲಾಯಿತು. ಸ್ಮಾರಕವನ್ನು ಎಲ್ಲಾ 40 ಸೈನಿಕರ ಹೆಸರುಗಳೊಂದಿಗೆ ಅವರ ಛಾಯಾಚಿತ್ರಗಳೊಂದಿಗೆ ಮತ್ತು ಸಿಆರ್ಪಿಎಫ್ ನ ಧ್ಯೇಯವಾಕ್ಯ – ಸೇವೆ ಮತ್ತು ನಿಷ್ಠೆಯೊಂದಿಗೆ ಕೆತ್ತಲಾಗಿದೆ.
ಇಂದು, ಸಿಆರ್ಪಿಎಫ್ ಪುಲ್ವಾಮಾದ ಲೆಥ್ಪೊರಾ ಶಿಬಿರದಲ್ಲಿ ಪುಲ್ವಾಮಾ ದಾಳಿಯ ಎರಡನೇ ವಾರ್ಷಿಕೋತ್ಸವದಂದು 40 ಜವಾನರಿಗೆ ಗೌರವ ಸಲ್ಲಿಸಲು ಮಾಲಾರ್ಪಣೆ ಸಮಾರಂಭವನ್ನು ಆಯೋಜಿಸಲಾಗಿತ್ತು. ಹುತಾತ್ಮರಾದ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿ ಆರ್ ಪಿಎಫ್) ಯೋಧರನ್ನು ಭಾರತ ಸರ್ಕಾರ ಗೌರವಿಸಿ ನಮನ ಸಲ್ಲಿಸಿದೆ.
ಪುಲ್ವಾಮಾ ದಾಳಿಯ ನಂತರ, ಹೆದ್ದಾರಿಗಳಲ್ಲಿ ಬೆಂಗಾವಲುಗಳನ್ನು ಚಲಿಸಲು ಸಿಆರ್ಪಿಎಫ್ ತನ್ನ ಎಸ್ಒಪಿ (ಸ್ಟ್ಯಾಂಡರ್ಡ್ ಆಪರೇಟಿಂಗ್ ಕಾರ್ಯವಿಧಾನ) ಅನ್ನು ಸಂಪೂರ್ಣವಾಗಿ ಕೂಲಂಕಷವಾಗಿ ಪರಿಶೀಲಿಸಲು ನಿರ್ಧರಿಸಿತು. ದೊಡ್ಡ ಬೆಂಗಾವಲುಗಳಲ್ಲಿ ಚಲಿಸುವ ಬದಲು, ಸಿಆರ್ಪಿಎಫ್ ಬೆಂಗಾವಲು ಗರಿಷ್ಠ 40 ವಾಹನಗಳೊಂದಿಗೆ ಸಣ್ಣ ತುಕಡಿಗಳಲ್ಲಿ ಚಲಿಸುತ್ತದೆ. ಅಲ್ಲದೆ, ದಾಳಿಯ ನಂತರ, ಗುಂಡು ಮತ್ತು ಕಡಿಮೆ-ತೀವ್ರತೆಯ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಸ್ಫೋಟಗಳನ್ನು ತಡೆದುಕೊಳ್ಳಲು ಬೆಂಗಾವಲು ಚಲನೆಗಾಗಿ ಬಳಸುವ ಹೆಚ್ಚಿನ ವಾಹನಗಳನ್ನು ನವೀಕರಿಸಲಾಗಿದೆ.
ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಸಾಕ್ಷಾಟಿವಿ ವತಿಯಿಂದ ಭಾವಪೂರ್ಣ ಶ್ರದ್ಧಾಂಜಲಿ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ಶಿಲೀಂಧ್ರ ಸೋಂಕು (fungal infections) ಗೆ ಮನೆಮದ್ದುಗಳು https://t.co/94JI0CcWb2
— Saaksha TV (@SaakshaTv) February 11, 2021
ಎಚ್ಚರ – ಕೋವಿಡ್-19 ಲಸಿಕೆಯನ್ನು ₹ 4,000-6,000 ಕ್ಕೆ ನೀಡುವುದಾಗಿ ಹೇಳಿಕೊಳ್ಳುತ್ತಿದೆ ನಕಲಿ ವೆಬ್ಸೈಟ್ ! https://t.co/zqxfDb817r
— Saaksha TV (@SaakshaTv) February 12, 2021