ಕೊರೊನಾ ಭೀತಿಯಿಂದ ದೇಶವೇ ಲಾಕ್ ಡೌನ್ ಆಗಿದೆ. ಹಾಗಾಗಿ 21 ದಿನಗಳ ಕಾಲ ದೇಶದ ಜನರು ಮನೆಯಲ್ಲಿ ಇರಬೇಕಾದ ಪರಿಸ್ಥಿತಿ ಬಂದಿದೆ. ಇದಕ್ಕೆ ಸಿನಿಮಾ ರಂಗ ಹೊರತಲ್ಲ. ಸದಾ ಶೂಟಿಂಗ್ ಬ್ಯೂಸಿಯಲ್ಲಿರು ನಟ, ನಟಿಯರು ಲಾಕ್ ಡೌನ್ ನಿಂದಾಗಿ ಕುಟುಂಬದ ಜೊತೆ ಕಾಲ ಕಳೆಯುತ್ತಿದ್ದಾರೆ. ಒಬ್ಬೊಬ್ಬ ನಟ, ನಟಿಯರು ಒಂದೊಂದು ರೀತಿ ಟೈಮ್ ಸ್ಪೆಂಡ್ ಮಾಡುತ್ತಿದ್ದಾರೆ. ಬಹುಭಾಷಾ ನಟ ಪ್ರಕಾಶ್ ರಾಜ್ ಕೂಡ ತಮ್ಮ ಕುಟುಂಬದ ಜೊತೆ ಟೈಮ್ ಸ್ಪೆಂಡ್ ಮಾಡುತ್ತಿದ್ದಾರೆ. ಕುಟುಂಬದ ಜೊತೆ ಕಾಲ ಕಳೆಯುತ್ತಿರುವ ಪ್ರಕಾಶ್ ರಾಜ್ ತಮ್ಮ ಪುಟ್ಟ ಮಗನಿಗೆ ರಾಷ್ಟ್ರಗೀತೆ ಹೇಳಿಕೊಡುತ್ತಿದ್ದಾರೆ. ಈ ದೃಶ್ಯವನ್ನು ಸ್ವತಃ ಪ್ರಕಾಶ್ ರಾಜ್ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ವಿಡಿಯೋದಲ್ಲಿ ಮನೆಯಲ್ಲಿ ಇದ್ದು ಸುತ್ತಮುತ್ತಲಿನವರನ್ನು ಕಾಪಾಡುವಂತೆ ಮನವಿ ಮಾಡಿಕೊಂಡಿದ್ದಾರೆ. ವೈರಸ್ ಹರಡುವುದಿಲ್ಲ. ನಾವೇ ಅದನ್ನು ಹರಡುತ್ತೇವೆ. ಹಾಗಾಗಿ ಹರಡುವಿಕೆ ತಪ್ಪಿಸಬೇಕಾದರೆ ನಾವು ಮನೆಯಲ್ಲಿ ಇರಬೇಕು. ಯಾರು ಸಹ ಮನೆಯಿಂದ ಹೊರ ಬರಬೇಡಿ ಎಂದು ಮನವಿ ಮಾಡಿದ್ದಾರೆ.