ಆಸ್ಪತ್ರೆ ಸೇರಿದ ನ್ಯಾಷನಲ್ ಕ್ರಷ್ – ರಶ್ಮಿಕಾಗೆ ಏನಾಯ್ತು??
ದಕ್ಷಿಣ ಚಿತ್ರರಂಗದಲ್ಲಿ ಮಿಂಚಿ ಬಾಲಿವುಡ್ ನಲ್ಲಿ ನೆಲೆಯೂರಲು ಸಿದ್ಧತೆ ನಡೆಸುತ್ತಿರುವ ನಟಿ ರಶ್ಮಿಕಾ ಮಂದಣ್ಣ ಆಸ್ಪತ್ರೆಗೆ ದಾಖಲಾಗಿದ್ದಾರೆ ಈ ವಿಷಯವನ್ನ ಸ್ವತಃ ರಶ್ಮಿಕಾಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರೇ ಬಹಿರಂಗಡಿಸಿದ್ದಾರೆ.
ಸತತವಾಗಿ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿರುವ ರಶ್ಮಿಕಾ ಮೊಣಕಾಲಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈಗಾಗಿ ಹೈದ್ರಾಬಾದ ನ ಪ್ರತಿಷ್ಟಿತ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೈದಾಬಾದ್ನಲ್ಲಿನ ಪ್ರಮುಖ ಆರ್ಥೋ ಸ್ಪೆಷಲಿಸ್ಟ್ ಗುರುವಾ ರೆಡ್ಡಿ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ.
ರಶ್ಮಿಕಾ ಮಂದಣ್ಣ ಅವರ ಸಮಸ್ಯೆಯನ್ನು ಹಾಸ್ಯಾತ್ಮಕವಾಗಿ ವಿವರಿಸಿರುವ ಗುರುವ ರೆಡ್ಡಿ, ”ಸಾಮಿ..ಸಾಮಿ.. ಎಂದು ಮೊಣಕಾಲಿನ ಮೇಲೆ ಭಾರ ಹಾಕಿಕೊಂಡು ಡ್ಯಾನ್ಸ್ ಮಾಡಿದ್ದಕ್ಕೆ ನಿಮಗೆ ಮೊಣಕಾಲು ನೋವು ಬಂದಿದೆ ಹಾಗಾಗಿ ನನ್ನ ಬಳಿ ಬಂದಿದ್ದೀರಿ ಎಂದು ತಮ್ಮ ಸೋಶಿಯಲ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
https://www.facebook.com/photo.php?fbid=636496904587449&set=a.276057117298098&type=3
ರಶ್ಮಿಕಾ ಸದ್ಯ ಅಲ್ಲು ಅರ್ಜುನ್ ಜೊತೆ ಪುಷ್ಪಾ ಹಾಗೂ ತಮಿಳಿನ ಸ್ಟಾರ್ ನಟ ವಿಜಯ್ ಜೊತೆ ವಾರಿಸು ಚಿತ್ರದಲ್ಲಿ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ ಈಗಾಗಲೇ ಗುಡ್ ಬೈ ಚಿತ್ರದ ಮೂಲಕ ಬಾಲಿವುಡ್ಗೂ ಲಗ್ಗೆಯಿಟ್ಟಿರುವ ನ್ಯಾಷನಲ್ ಕ್ರಷ್ ಮಿಷನ್ ಮಜ್ನು ಹಾಗೂ ಅನಿಮಲ್ ಚಿತ್ರಗಳ ಮೂಲಕ ಬಾಲಿವುಡ್ ನಲ್ಲೂ ನೆಲೆಯೂರುತ್ತಿದ್ದಾರೆ.