ಪ್ರಮುಖ ರಾಷ್ಟ್ರೀಯ – ಅಂತರಾಷ್ಟ್ರೀಯ ಸುದ್ದಿಗಳು..!
ಪೂರ್ಣ ಸುದ್ದಿಗಾಗಿ ( ಸಂಕ್ಷಿಪ್ತ ವಿವರಣೆ) ಲಿಂಕ್ ಗಳನ್ನ ಕ್ಲಿಕ್ ಮಾಡಿ
ರಜನಿಕಾಂತ್ ಹೊಸ ಪಕ್ಷದ ಹೆಸರು ಬಹಿರಂಗ.. ಚಿಹ್ನೆ ಏನು ಗೊತ್ತಾ..?
ಚೆನ್ನೈ : ಸೂಪರ್ ಸ್ಟಾರ್ ರಜನಿಕಾಂತ್ ಈಗಾಗಲೇ ರಾಜಕೀಯ ಪ್ರವೇಶದ ಬಗ್ಗೆ ಅಧಿಕೃತಗೊಳಿಸಿದ್ದಾರೆ. ಆದ್ರೆ ಇದುವರೆಗೂ ಅವರು ತಮ್ಮ ಪಕ್ಷದ ಹೆಸರನ್ನಾಗಲಿ, ಚಿಹ್ನಯನ್ನಾಗಲಿ ಎಲ್ಲೂ ಬಹಿರಂಗ ಪಡಿಸಿಲ್ಲ. ಡಿಸೆಂಬರ್ 31ರಂದು ತಮ್ಮ ಹೊಸ ಪಕ್ಷಕ್ಕೆ ಸಂಬಂಧಿಸಿದ ವಿವರಗಳನ್ನು ಬಹಿರಂಗಪಡಿಸುವುದಾಗಿ ಮತ್ತು ಮುಂಬರುವ ಜನವರಿಯಲ್ಲಿ ಪಕ್ಷಕ್ಕೆ ಚಾಲನೆ ನೀಡುವುದಾಗಿ ರಜನಿ ಘೋಷಿಸಿಕೊಂಡಿದ್ದಾರೆ. ಈ ಮಧ್ಯೆ ರಜಿನಿಕಾಂತ್ ತಮ್ಮ ಹೊಸ ಪಕ್ಷಕ್ಕೆ ‘ಮಕ್ಕೈ ಸೆವಾಯ್ ಕಚ್ಚಿ’ ಎಂದು ಹೆಸರಿಟ್ಟಿದ್ದಾರೆ ಮತ್ತು ಪಕ್ಷದ ಚಿಹ್ನೆ ‘ಆಟೋ ರಿಕ್ಷಾ’ ಎಂಬ ಸುದ್ದಿ ಅಂತರ್ಜಾಲದಲ್ಲಿ ಭಾರಿ ಸದ್ದು ಮಾಡುತ್ತಿದೆ.
ಯೋಗಿ ನಾಡಿನತ್ತ ಅರವಿಂದ ಕೇಜ್ರಿವಾಲ್ ಚಿತ್ತ..!
ನವದೆಹಲಿ : ಆಮ್ ಆದ್ಮಿ ಪಕ್ಷದ ಮೂಲಕ ದೆಹಲಿಯಲ್ಲಿ ರಾಷ್ರೀಯ ಪಕ್ಷಗಳಿಗೆ ಟಕ್ಕರ್ ನೀಡಿದ್ದ ಅರವಿಂದ ಕೇಜ್ರಿವಾಲ್ ಇದೀಗ ಯೋಗಿ ನಾಡಿನತ್ತ ಗಮನ ಹರಿಸಿದ್ದಾರೆ. ಅಂದ್ರೆ 2022ರಲ್ಲಿ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪಕ್ಷ ಸ್ಪರ್ಧಿಸಲಿದೆ ಎಂದು ಕೇಜ್ರಿವಾಲ್ ಘೋಷಣೆ ಮಾಡಿದ್ದಾರೆ. ಉತ್ತರ ಪ್ರದೇಶ ಕೂಡ ದೆಹಲಿಯಂತಹ ಕಲ್ಯಾಣ ಮತ್ತು ಸವಲತ್ತುಗಳಿಗೆ ಅರ್ಹವಾಗಿದೆ. ಆದ್ದರಿಂದ ಅಲ್ಲಿಯವರು ವಿನಾಕಾರಣ, ಆರೋಗ್ಯ ಆರೈಕೆ, ಶಿಕ್ಷಣ ಮತ್ತು ಮೂಲ ಸೌಕರ್ಯಗಳಿಗಾಗಿ ದೆಹಲಿಯವರೆಗೆ ಹೋಗಿ ಬರುವುದನ್ನು ತಪ್ಪಿಸುವುದಕ್ಕಾಗಿ ಅಲ್ಲಿಯ ಜನರ ಅನುಕೂಲಕ್ಕಾಗಿ ತಮ್ಮ ಪಕ್ಷ ಅಲ್ಲಿ ಸ್ಪರ್ಧಿಸಲಿದೆ ಎಂದು ತಿಳಿಸಿದ ಕೇಜ್ರಿವಾಲ್, ತನ್ನ ಪಕ್ಷಕ್ಕೆ ಒಂದು ಅವಕಾಶ ಕೊಡಿ ಎಂದು ಮತದಾರರಲ್ಲಿ ಮನವಿ ಮಾಡಿಕೊಂಡರು.
ಪೆಟ್ರೋಲ್, ಡಿಸೇಲ್ ದರ ಏರಿಕೆ ಬೆನ್ನಲ್ಲೆ `ಎಲ್ ಪಿಜಿ ಬೆಲೆ ಹೆಚ್ಚಳ’
ನವದೆಹಲಿ : ದೇಶದಲ್ಲಿ ಕೆಲ ದಿನಗಳಿಂದ ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆ ಕಾಣುತ್ತಲೇ ಇದೆ. ಇದರ ಬೆನ್ನಲ್ಲೆ ಇದೀಗ ಎಲ್‍ಪಿಜಿ ಬೆಲೆ ಹೆಚ್ಚಳವಾಗಿದ್ದು, ಗಾಯದ ಮೇಲೆ ಬರೆ ಎಳೆದಂತಾಗಿದೆ. ದೇಶಿ ಬಳಕೆಯ 14.2 ಕೆ.ಜಿ ಎಲ್‍ಪಿಜಿ ಸಿಲಿಂಡರ್‍ನ ಬೆಲೆ 50 ರೂ. ಏರಿಕೆಯಾಗಿದ್ದರೇ 5 ಕೆ.ಜಿ. ಚಿಕ್ಕ ಸಿಲಿಂಡರ್‍ನ ಬೆಲೆ18 ರೂ. ಹೆಚ್ಚಳವಾಗಿದ್ದು 19 ಕೆ.ಜಿ. ಸಿಲಿಂಡರ್‍ನ ಬೆಲೆ 36.50 ರೂ.ಯಷ್ಟು ಏರಿಕೆ ಕಂಡಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸಬ್ಸಿಡಿ ರಹಿತ 14.2 ಕೆಜಿ ಗ್ಯಾಸ್ ಸಿಲಿಂಡರ್ ಮೊದಲು 594 ರೂ. ಇತ್ತು, ಈಗ 644 ರೂ.ಆಗಿದೆ.
ಚೆಟ್ಟಿನಾಡ್ ಸಮೂಹದಿಂದ 700 ಕೋಟಿ ರೂ. ತೆರಿಗೆ ವಂಚನೆ
ಚೆನ್ನೈ : ತೆರಿಗೆ ವಂಚನೆ ಆರೋಪದಡಿ ಚೆನ್ನೈ ಮೂಲದ ಚೆಟ್ಟಿನಾಡ್ ಗ್ರೂಪ್ ಗೆ ಸಂಬಂಧಿಸಿದ ಹಲವು ಕಡೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ. ತಿರುಚ್ಚಿ, ಕೊಯಮತ್ತೂರು, ಆಂಧ್ರ, ಕರ್ನಾಟಕ ಮತ್ತು ಮುಂಬೈ ಸೇರಿದಂತೆ 60 ಕಡೆ ದಾಳಿ ನಡೆದಿದೆ. ದಾಳಿ ವೇಳೆ 700 ಕೋಟಿ ತೆರಿಗೆ ವಂಚನೆಯ ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ದೆಹಲಿಯಲ್ಲಿ ರೈತರ ಪ್ರತಿಭಟನೆ : ನಿತ್ಯ 3,500 ಕೋಟಿ ನಷ್ಟ
ನವದೆಹಲಿ : ಕೇಂದ್ರ ಕೃಷಿ ಕಾಯ್ದೆಗಳ ವಿರುದ್ಧ ರೈತರು ದೆಹಲಿಯಲ್ಲಿ ನಡೆಸುತ್ತಿರುವ ಪ್ರತಿಭಟನೆಗೆ ವ್ಯಾಪಾರ ವಹಿವಾಟು ನಲುಗಿ ಹೋಗಿದೆ. ಪರಿಣಾಮ ನಿತ್ಯ 3500 ಕೋಟಿ ನಷ್ಟ ಉಂಟಾಗುತ್ತಿದೆ ಎಂದು ಅಂದಾಜಿಸಲಾಗಿದೆ. ರಾಷ್ಟ್ರ ರಾಜಧಾನಿ ಗಡಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ಇಂದಿಗೆ 20ನೇ ದಿನಕ್ಕೆ ಕಾಲಿಟ್ಟಿದೆ. ಈ ಪ್ರದೇಶದಲ್ಲಿ ಸಂಚಾರ ಅಡೆತಡೆಯಿಂದಾಗಿ ನಿತ್ಯ ಸಾವಿರಾರು ಕೋಟಿ ರೂಪಾಯಿ ಆರ್ಥಿಕ ಹೊಡೆತವಾಗುತ್ತಿದೆ. ರೈತರ ಮುಷ್ಕರದಿಂದಾಗಿ ಮೌಲ್ಯಯುತ ಸರಪಳಿ ಮತ್ತು ಸಾರಿಗೆ ಅಡ್ಡಿಗಳಿಂದ ಈ ಪ್ರದೇಶದ ಆರ್ಥಿಕತೆಗೆ ನಿತ್ಯ 3,000- 3,500 ಕೋಟಿ ರೂ.ಯಷ್ಟು ನಷ್ಟ ಉಂಟಾಗುತ್ತಿದೆ ಎಂದು ಎಂದು ಅಸ್ಸೋಚಾಮ್ ಅಂದಾಜಿಸಿದೆ.
6 ವರ್ಷದ ಮಗನ ಆ್ಯಪ್ ಖರೀದಿ – ತಾಯಿಯ ಖಾತೆಯಿಂದ 11ಲಕ್ಷ ರೂಪಾಯಿ ಕಡಿತ – ಹಣ ಹಿಂತಿರುಗಿಸಲು ಆಪಲ್ ನಿರಾಕರಣೆ
ನ್ಯೂಯಾರ್ಕ್, ಡಿಸೆಂಬರ್15: ಜನರು ಕೆಲವೊಮ್ಮೆ ತಮ್ಮ ಮಕ್ಕಳಿಂದ ಹಣಕಾಸಿನ ನಷ್ಟಕ್ಕೆ ಬಲಿಯಾಗುತ್ತಾರೆ. ಜೆಸ್ಸಿಕಾ ಜಾನ್ಸನ್ ಎಂಬಾಕೆಯ ಖಾತೆಯಿಂದ, ಅಂದಾಜು 11 ಲಕ್ಷ ರೂ ಕಡಿತಗೊಳಿಸಲಾಗಿದೆ ಮತ್ತು ಆಪಲ್ ಗೆ ಪಾವತಿಸಲಾಗಿದೆ. ಹಣ ಏಕೆ ಕಡಿತಗೊಂಡಿದೆ ಎಂದು ವಿಚಾರಿಸಿದಾಗ ಆಕೆಯ ಆರು ವರ್ಷದ ಮಗ ಜಾರ್ಜ್ ಜಾನ್ಸನ್ ಆಪಲ್ ಆಪ್ ಸ್ಟೋರ್ ಅಪ್ಲಿಕೇಶನ್‌ನಲ್ಲಿ ಆ್ಯಪ್ ಖರೀದಿ ಮಾಡಿದ್ದು, ಈ ಹಿನ್ನೆಲೆಯಲ್ಲಿ ಆಕೆಯ ಖಾತೆಯಿಂದ ಹಣವನ್ನು ಕಡಿತಗೊಳಿಸಲಾಗಿರುವುದು ತಿಳಿದು ಬಂದಿದೆ. ಈ ಘಟನೆ ನ್ಯೂಯಾರ್ಕ್ ನಲ್ಲಿ ನಡೆದಿದೆ. ಜೆಸ್ಸಿಕಾಳ ಆರು ವರ್ಷದ ಮಗ ಐಪ್ಯಾಡ್ ಬಳಸಿ ಆಪಲ್ ಆಪ್ ಸ್ಟೋರ್‌ನಲ್ಲಿ 11 ಲಕ್ಷ ಮೌಲ್ಯದ ಅಪ್ಲಿಕೇಶನ್ ಖರೀದಿ ಮಾಡಿದ್ದಾನೆ. ಜುಲೈನಲ್ಲಿ ಅವನು ತನ್ನ ಆಟಗಳಿಗೆ ಐಪ್ಯಾಡ್ ಅನ್ನು ಬಳಸಲು ಪ್ರಾರಂಭಿಸಿದ ಮತ್ತು ಆಟಗಳಲ್ಲಿ ಆನ್ ಗಳನ್ನು ಖರೀದಿಸಿ ವ್ಯವಹಾರಗಳನ್ನು ಮಾಡಲಾಗಿದೆ ಎಂದು ಆಕೆ ತಿಳಿಸಿದ್ದಾಳೆ.
ಪೂರ್ಣ ಸುದ್ದಿಗಾಗಿ ( ಸಂಕ್ಷಿಪ್ತ ವಿವರಣೆ) ಲಿಂಕ್ ಗಳನ್ನ ಕ್ಲಿಕ್ ಮಾಡಿ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel