National News : ಚೀನೀಯರು ಅಪಹರಿಸಿದ್ದ ಭಾರತದ ಯುವಕನ ಶೀಘ್ರ ಬಿಡುಗಡೆ ಮಾಡಲಿದೆಯಂತೆ ಚೀನಾ..!!
ನವದೆಹಲಿ : ಜನವರಿ 18ರಂದು ಅರುಣಾಚಲ ಮೂಲದ ಯುವಕನನ್ನು ಚೀನಾ ಸೈನಿಕರು ಅಪಹರಿಸಿದ್ದಾಗಿ ಸುದ್ದಿಯಾಗಿತ್ತು.. ಈತ ಚೀನಾದಲ್ಲಿ ಪತ್ತೆಯಾಗಿದ್ದ. ಇದೀಗ ಚೀನಾ ಈ ಯುವಕನನ್ನು ಬಿಡುಗಡೆ ಮಾಡಲು ಸೂಚನೆ ನೀಡಿದೆ ಎಂದು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ತಿಳಿಸಿದ್ದಾರೆ.
ಅರುಣಾಚಲ ಪ್ರದೇಶದಿಂದ ನಾಪತ್ತೆಯಾಗಿದ್ದ 17 ವರ್ಷದ ಯುವಕನ ಬಿಡುಗಡೆಗೆ ಚೀನಾ ಸೂಚಿಸಿದ್ದು, ಅದರ ದಿನಾಂಕ ಹಾಗೂ ಸಮಯವನ್ನು ಶೀಘ್ರವೇ ಹಂಚಿಕೊಳ್ಳಲಿದೆ ಎಂದು ತಿಳಿಸಿದ್ದಾರೆ. ಚೀನಾ ಯುವಕನ ಬಿಡುಗಡೆಯ ಸ್ಥಳವನ್ನು ಸೂಚಿಸಿದೆ. ಆದರೆ ಹವಾಮಾನ ವೈಪರಿತ್ಯದಿಂದಾಗಿ ಬಿಡುಗಡೆ ವಿಳಂಬವಾಗಿದೆ ಎಂದು ತಿಳಿಸಿದ್ದಾರೆ.
ಅಪ್ಪರ್ ಸಿಯಾಂಗ್ ನ ಜಿಡೋ ಗ್ರಾಮದ ಯುವಕ ಮಿರಾಮ್ ಟ್ಯಾರೋನ್ 2022ರ ಜನವರಿ 18 ರಂದು ಬಿಶಿಂಗ್ ಪ್ರದೇಶದ ಶಿಯುಂಗ್ ಲಾದಿಂದ ನಾಪತ್ತೆಯಾಗಿದ್ದ. ಟ್ಯಾರೋನ್ ನ ಸ್ನೇಹಿತ ಜಾನಿ ಯಾಯಿಂಗ್ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ ಆತನನ್ನು ಅಪಹರಿಸಿದ್ದಾಗಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದ.
chainese about to release kidnapped boy from arunachala pradesh