ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಂದು 70 ವರ್ಷ ತುಂಬುತ್ತಿದ್ದಂತೆ, ಭಾರತೀಯ ಜನತಾ ಪಾರ್ಟಿ ಇಡೀ ವಾರ ಆಚರಣೆಯನ್ನು ಯೋಜಿಸಿದೆ. ಈ ಸಾಪ್ತಾಹಿಕ ಆಚರಣೆಯ ಅಂಗವಾಗಿ ಪಕ್ಷವು ದೇಶಾದ್ಯಂತ ಪ್ರತಿ ಜಿಲ್ಲೆಯ 70 ಸ್ಥಳಗಳಲ್ಲಿ ಮರ ನೆಡುವಿಕೆ ಮತ್ತು ರಕ್ತದಾನ ಶಿಬಿರಗಳನ್ನು ಆಯೋಜಿಸಿದೆ.
ಮೋದಿ ಜನ್ಮದಿನ ಹಿನ್ನೆಲೆ ರಾಜಕೀಯ ನಾಯಕರು ಸಾಮಾಜಿಕ ಜಾಲತಾಣಗಳ ಮೂಲಕ ಶುಭ ಹಾರೈಸುತ್ತಿದ್ದಾರೆ. ನಮೋ ಅಭಿಮಾನಿಗಳು ತಮ್ಮ ಫೇಸ್ ಬುಕ್, ಟ್ವಿಟ್ಟರ್, ವಾಟ್ಸಾಪ್ ಸ್ಟೇಟಸ್ ಗಳನ್ನು ಮೋದಿ ಮಯವಾಗಿಸಿಕೊಂಡಿದ್ದಾರೆ. ಇದು ಒಂದು ಕಡೆಯಾದ್ರೆ ಟ್ವಿಟ್ಟರ್ ನಲ್ಲಿ #NationalUnemploymentDay ಹ್ಯಾಷ್ ಟ್ಯಾಗ್ ಭರ್ಜರಿಯಾಗಿ ಟ್ರೆಂಡ್ ಆಗುತ್ತಿದೆ.
2 ಕೋಟಿ ಉದ್ಯೋಗದ ಭರಸವೆ ನೀಡಿ ಅಧಿಕಾರಿಕ್ಕೆ ಬಂದ ನರೇಂದ್ರ ಮೋದಿ, ಕಳೆದ ಆರು ತಿಂಗಳಲ್ಲಿ 2.1 ಕೋಟಿ ಯುವಕರ ಕೆಲಸ ಕಸಿದುಕೊಂಡಿದ್ದಾರೆ ಎಂದು ಟ್ವೀಟ್ ಗಳ ಮೂಲಕ ನೆಟ್ಟಿಗರು ಕುಟುಕುತ್ತಿದ್ದಾರೆ.
ಇನ್ನಷ್ಟು ಸುದ್ದಿಗಳನ್ನು ಇಲ್ಲಿ ಓದಿ
ಇಂದು ನಮ್ಮ ಪ್ರಧಾನಿಗಳ ಜನ್ಮದಿನ… ಇದು #NationalUnemploymentDay ಉದ್ಯೋಗವಿಲ್ಲದೇ ನಾವು ಹೇಗೆ ಇದ್ದೇವೆ ಎಂಬುದನ್ನು ತೋರಿಸಬೇಕು.
ನರೇಂದ್ರ ಮೋದಿ ಅವರೇ ನಾವು ನಿಮ್ಮ ಜನ್ಮದಿನವನ್ನು ರಾಷ್ಟ್ರೀಯ ನಿರುದ್ಯೋಗ ದಿನವನ್ನಾಗಿ ಆಚರಿಸುತ್ತಿದ್ದೇವೆ. ನಿಮ್ಮ ಬಗ್ಗೆ ನಮಗೆ ಹೆಮ್ಮೆ ಇದೆ. ಯಾಕೆಂದ್ರೆ ನಿಮ್ಮ ಅಲೋಚನೆಗಳು ಪಕೋಡಾ ಮತ್ತು ಖಿಲೋನಾ ಕೆಲಸ ಎಂದು ವ್ಯಂಗ್ಯವಾಡಿದ್ದಾರೆ.
ಹೀಗೆ ಟ್ವಿಟ್ಟರ್ ನಲ್ಲಿ ನರೇಂದ್ರ ಮೋದಿ ಜನ್ಮದಿನವನ್ನು ನೆಟ್ಟಿಗರು ರಾಷ್ಟ್ರೀಯ ನಿರುದ್ಯೋಗ ದಿನವನ್ನಾಗಿ ಆಚರಿಸುತ್ತ #NationalUnemploymentDay ಎಂಬ ಹ್ಯಾಷ್ ಟ್ಯಾಗ್ ಅನ್ನು ಟ್ರೆಂಡಿಂಗ್ ಮಾಡುತ್ತಿದ್ದಾರೆ.