ಬೆಳಗಾವಿ: ಖಾನಾಪುರ, ಬೈಲಹೊಂಗಲ ಪ್ರದೇಶಗಳಲ್ಲಿ ಮಳೆ ಆರ್ಭಟ ಕೊಂಚ ಕಡಿಮೆಯಾಗಿದೆ. ನವಿಲುತೀರ್ಥ ಅಣೆಕಟ್ಟಿನ ಒಳಹರಿವಿನಲ್ಲೂ ಇಳಿಕೆಯಾಗಿದೆ. ಆದರೂ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿರುವ ಜಿಲ್ಲಾಡಳಿತ ನವಿಲುತೀರ್ಥ ಆಣೆಕಟ್ಟಿನಿಂದ ಸುಮಾರು 300 ಕ್ಯೂಸೆಕ್ ನೀರು ಬಿಡಗಡೆಗೆ ಸಿದ್ಧತೆ ನಡೆಸಿಕೊಂಡಿದೆ. ಆಣೆಕಟ್ಟಿನಿಂದ ನೀರನ್ನು ಮಲಪ್ರಭಾ ನದಿಗೆ ಬಿಡಲು ತಯಾರಿ ನಡೆಸಿಕೊಳ್ಳಲಾಗಿದೆ. ಈ ಹಿನ್ನೆಲೆ ಈಗಾಗಲೇ ನದಿ ತೀರದ ಗ್ರಾಮಗಳ ಜನರಿಗೆ ಎಚ್ಚರದಿಂದ ಇರುವಂತೆ ಮುನ್ಸೂಚನೆ ನೀಡಲಾಗಿದೆ.
ಸ್ಪೀಕರ್ ಪದಚ್ಯುತಿ ನೋಟಿಸ್‌ನಲ್ಲಿ ದೋಷಗಳು ಪತ್ತೆ.. ವಿಪಕ್ಷಗಳಿಗೆ ಮುಖಭಂಗ!
ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ವಿರುದ್ಧ 118 ವಿರೋಧ ಪಕ್ಷದ ಸಂಸದರು ಸಲ್ಲಿಸಿದ್ದ ಪದಚ್ಯುತಿ ನೋಟಿಸ್‌ನಲ್ಲಿ ತಾಂತ್ರಿಕ ದೋಷಗಳು ಪತ್ತೆಯಾಗಿರುವುದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ....








