ಶರಣಾಗತಿಗೆ ಕಾಲಾವಕಾಶ ಕೇಳಿ ಸುಪ್ರೀಂ ಗೆ ಅರ್ಜಿ ಸಲ್ಲಿಸಿದ ನವಜೋತ್ ಸಿಂಗ್ ಸಿಧು…
ಪಂಜಾಬ್ ಕಾಂಗ್ರೆಸ್ ಮಾಜಿ ಮುಖ್ಯಸ್ಥ ನವಜೋತ್ ಸಿಧು ಶರಣಾಗತಿಗಾಗಿ 1 ವಾರ ಕಾಲಾವಕಾಶ ಕೇಳಿ ಸುಪ್ರೀಂ ಕೋರ್ಟ್ನಲ್ಲಿ ಕ್ಯುರೇಟಿವ್ ಅರ್ಜಿ ಸಲ್ಲಿಸಿದ್ದಾರೆ. ಅನಾರೋಗ್ಯವನ್ನು ಉಲ್ಲೇಖಿಸಿ ಸಿಧು ಕಾಲಾವಕಾಶ ಕೇಳಿದ್ದಾರೆ. ಇದಕ್ಕೂ ಮೊದಲು ಸಿಧುಗೆ ಶಿಕ್ಷೆ ವಿಧಿಸಿದ್ದ ಪೀಠ ಕ್ಯುರೇಟಿವ್ ಅರ್ಜಿಯ ವಿಚಾರಣೆ ನಡೆಸಲು ನಿರಾಕರಿಸಿತ್ತು.
ಸಿಧು ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಸಲ್ಲಿಸಿದ್ದ ಅರ್ಜಿಯ ಕುರಿತು, ನ್ಯಾಯಮೂರ್ತಿ ಎಎಂ ಖಾನ್ವಿಲ್ಕರ್ ಮಾತನಾಡಿ ನಾವು ವಿಷಯವನ್ನು ಮುಖ್ಯ ನ್ಯಾಯಮೂರ್ತಿಗಳಿಗೆ ಕಳುಹಿಸುತ್ತಿದ್ದೇವೆ, ಅವರು ಅದನ್ನು ಆಲಿಸಲು ನಿರ್ಧರಿಸುತ್ತಾರೆ ಎಂದು ಹೇಳಿದ್ದಾರೆ. ಸುಪ್ರೀಂ ಕೋರ್ಟ್ನಿಂದ ಪರಿಹಾರ ಸಿಗದಿದ್ದರೆ ನವಜೋತ್ ಸಿಧು ಇಂದೆ ಶರಣಾಗಬೇಕಾಗುತ್ತದೆ.
ಕ್ಯುರೇಟಿವ್ ಅರ್ಜಿ ಎಂದರೇನು?
ಕ್ಯುರೇಟಿವ್ ಅರ್ಜಿಯು ಯಾವುದೇ ಅಪರಾಧಿ ವ್ಯಕ್ತಿಗೆ ಪರಿಹಾರದ ಕೊನೆಯ ಅಸ್ತ್ರವಾಗಿದೆ. ಇದರಲ್ಲಿ ಸುಪ್ರೀಂ ಕೋರ್ಟ್ ಆರ್ಟಿಕಲ್ 142 ಅನ್ನು ಬಳಸುತ್ತದೆ. ಇತ್ತೀಚೆಗೆ, ಎಸ್ಪಿ ನಾಯಕ ಅಜಂ ಖಾನ್ಗೆ ಮಧ್ಯಂತರ ಜಾಮೀನು ನೀಡಲು ಮತ್ತು ರಾಜೀವ್ ಗಾಂಧಿ ಹತ್ಯೆಯ ಅಪರಾಧಿಯನ್ನು ಬಿಡುಗಡೆ ಮಾಡಲು ಸುಪ್ರೀಂ ಕೋರ್ಟ್ ಈ ಕಾಯ್ದೆಯನ್ನ ಬಳಸಿತ್ತು. ಬಾಕಿ ಇರುವ ಯಾವುದೇ ವಿಚಾರದಲ್ಲಿ ಸುಪ್ರೀಂ ಕೋರ್ಟ್ ತನ್ನ ಅಧಿಕಾರವನ್ನು ಚಲಾಯಿಸುವ ಮೂಲಕ ನಿರ್ಧರಿಸುತ್ತದೆ.
34 ವರ್ಷಗಳ ಹಿಂದಿನ ರೋಡ್ ರೇಜ್ ( ರಸ್ತೆ ದಾಂಧಲೆ) ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದೆ.