ಕಾಮಿಡಿ ಕಿಲಾಡಿಗಳಲ್ಲಿ ಸಿಕ್ಕಾಪಟ್ಟೆ ಎಂಟರ್ ಟೈನ್ ಮಾಡಿ ಮನೆಮಾತನಾಗಿದ್ದ ನಯನಾ ಇದೀಗ ಕನ್ನಡಕ್ಕೆ ಅವಮಾನ ಮಾಡಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಹೌದು ಕನ್ನಡದ ಕಾಮಿಡಿ ಶೊನಲ್ಲಿ ಸಕ್ಸ ಸ್ ಕಂಡು ಹಲವು ಸಿನಿಮಾಗಳಲ್ಲೂ ನಟಿಸಿರುವ ನಯಾನಾ ಇದೀಗ ಕನ್ನಡಾಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ನಯನಾ ಕನ್ನಡಾಭಿಮಾನಿಯೊಬ್ಬರಿಗೆ ಕೆಟ್ಟ ಪದ ಬಳಕೆ ಮಾಡಿದ್ದು, ಇದು ಅನೇಕರ ಆಕ್ರೋಶಕ್ಕೆ ಕಾರಣವಾಗಿದೆ.

ಅಷ್ಟಕ್ಕೂ ನಯನಾ ಏನ್ ಮಾಡಿದ್ರು..? ಕನ್ನಡಾಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದ್ದು ಏನು..?
ನಯನಾ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಾಕಿ ಅದಕ್ಕೆ ಇಂಗ್ಲಿಷ್ ನಲ್ಲಿ ಅಡಿಬರಹ ಹಾಕಿದ್ದರು. ಅವರ ಈ ಪೋಸ್ಟ್ ಗೆ ವ್ಯಕ್ತಿಯೊಬ್ಬರು ರಿಪ್ಲೈ ಮಾಡಿ ಫೇಮಸ್ ಆಗೋ ತನಕ ಕನ್ನಡ ಬೇಕು, ಫೇಮಸ್ ಆದ್ಮೇಲೆ ಇಂಗ್ಲೀಷ್ ಅಂತ ಕಮೆಂಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ನಯನಾ ಅಸಂಬದ್ಧ ಪದ ಬಳಕೆ ಮಾಡಿದ್ದು, ನಯನಾ ಪ್ರತಿಕ್ರಿಯಿಸಿದ ರೀತಿ ಈಗ ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ.

ಕನ್ನಡದ ಭಕ್ತನಿಗೆ ಅಪಮಾನ ಮಾಡಿದ ನಯನಾ ನಡೆ ವಿರುದ್ಧ ನೆಟ್ಟಿಗರ ಆಕ್ರೋಶ.!
ನಯನಾರನ್ನು ಸಿಕ್ಕಾಪಟ್ಟೆ ತರಾಟೆಗೆ ತೆಗೆದುಕೊಂಡಿರುವ ನೆಟ್ಟಿಗರು ನಿಮಗೆ ಸಂಪೂರ್ಣ ಸಪೋರ್ಟ್ ಮಾಡಿದ್ದು ಕನ್ನಡಿಗರು, ಪರಭಾಷಿಕರಲ್ಲ ಅದನ್ನು ಯಾವತ್ತಿಗೂ ಮರೆಯಬೇಡಿ ಎಂದು ಟ್ರೋಲ್ ಮಾಡಿದ್ದಾರೆ.









