ನವದೆಹಲಿ: ಬಿಜೆಪಿ ನೇತೃತ್ವದ ಎನ್ ಡಿಎ(NDA) ಮೈತ್ರಿಕೂಟದ 12 ಜನ ಸದಸ್ಯರು ರಾಜ್ಯಸಭೆಗೆ (Rajya Sabha) ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಎನ್ ಡಿಎ ಮೈತ್ರಿಕೂಟ ಮೇಲ್ಮನೆಯಲ್ಲಿ 2014ರ ನಂತರ ಸ್ಪಷ್ಟ ಬಹುಮತ ಪಡೆದಿದೆ.
ಉಪಚುನಾವಣೆಯಲ್ಲಿ (By Election) ಬಿಜೆಪಿ 9 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಎನ್‌ಸಿಪಿ (ಅಜಿತ್ ಪವಾರ್ ಬಣ) ಮತ್ತು ರಾಷ್ಟ್ರೀಯ ಲೋಕ ಮಂಚ್‌ನತಲಾ ಒಬ್ಬರು ಆಯ್ಕೆಯಾಗಿದ್ದಾರೆ. ಇನ್ನೊಂದು ಸ್ಥಾನ ಕಾಂಗ್ರೆಸ್ ಪಾಲಾಗಿದೆ. ಈ ಗೆಲುವಿನ ಮೂಲಕ 2014ರ ನಂತರ ಮೊದಲ ಬಾರಿಗೆ ಎನ್‌ಡಿಎ ಒಕ್ಕೂಟ ರಾಜ್ಯಸಭೆಯಲ್ಲಿ ಬಹುಮತ ಪಡೆದಿದೆ.
ಮೋದಿ ಸರ್ಕಾರದ ಎರಡೂ ಅವಧಿಯಲ್ಲಿ ಎನ್‌ಡಿಎ ಮತ್ತು ಯುಪಿಎ ಹೊರತಾದ ಪಕ್ಷಗಳ ಸದಸ್ಯರ ಬಲದಿಂದ ರಾಜ್ಯಸಭೆಯಲ್ಲಿ ಮಸೂದೆಗಳನ್ನು ಪಾಸ್‌ಮಾಡುತಿತ್ತು. ವೈಎಸ್‌ಆರ್‌ಪಿ(11), ಬಿಜೆಡಿ(8), ಎಐಎಡಿಎಂಕೆ(4) ಸದಸ್ಯರು ಹಲವು ಬಾರಿ ಸರ್ಕಾರದ ಪರ ನಿಂತಿದ್ದರು. ಈಗ ಎನ್ ಡಿಎಗೆ ಸ್ಪಷ್ಟ ಬಹುಮತ ಸಿಕ್ಕಂತಾಗಿದೆ. ರಾಜ್ಯಸಭೆಯ ಒಟ್ಟು 245 ಸ್ಥಾನಗಳ ಪೈಕಿ 8 ಸ್ಥಾನಗಳು (ಜಮ್ಮು ಮತ್ತು ಕಾಶ್ಮೀರದಿಂದ 4, ನಾಮನಿರ್ದೇಶಿತ 4) ಖಾಲಿಯಿವೆ. ಹೀಗಾಗಿ ಸದನದ ಬಲ 237 ಆಗಿರುವುದರಿಂದ ಬಹುಮತಕ್ಕೆ 119 ಸ್ಥಾನಗಳ ಅಗತ್ಯ ಇದೆ.
ಈ ಪೈಕಿ ರಾಜ್ಯಸಭೆಯಲ್ಲಿ ಬಿಜೆಪಿಯ ಸದಸ್ಯರ ಸಂಖ್ಯೆ 96ಕ್ಕೆ ಏರಿಕೆ ಕಂಡಿದೆ. ವಿರೋಧ ಪಕ್ಷ ಕಾಂಗ್ರೆಸ್ 27 ಸದಸ್ಯರನ್ನು ಹೊಂದಿದೆ. 13 ಸದಸ್ಯರನ್ನುಹೊಂದುವ ಮೂಲಕ ಟಿಎಂಸಿಯು ಅತಿಹೆಚ್ಚು ಸದಸ್ಯರನ್ನು ಹೊಂದಿರುವ ಮೂರನೇ ಪಕ್ಷವಾಗಿದೆ. ರಾಜ್ಯಸಭೆಯ ಒಟ್ಟು ಸದಸ್ಯರ ಸಂಖ್ಯೆ 245 ಆಗಿದ್ದು ಬಹುಮತಕ್ಕೆ 123 ಸ್ಥಾನದ ಅಗತ್ಯ ಬೇಕಿದೆ. ನಾಮ ನಿರ್ದೇಶಿತ ಸದಸ್ಯರ ನಾಲ್ಕು ಸ್ಥಾನಗಳನ್ನು ಸರ್ಕಾರ ಭರ್ತಿಗೊಳಿಸಿದರೆ ಎನ್‌ಡಿಎ ಸದಸ್ಯರ ಸಂಖ್ಯೆ 125ಕ್ಕೆ ಏರಿಕೆ ಕಾಣಲಿದೆ.








