ಬಿಹಾರದಲ್ಲಿ ಎನ್ ಡಿಎ ಕಮಾಲ್ : ಸುಳ್ಳಾಗುತ್ತಾ ಚುನಾವಣೋತ್ತರ ಸಮೀಕ್ಷೆ ?
ಪಾಟ್ನಾ : ಬಿಹಾರ ವಿಧಾನಸಭಾ ಚುನಾವಣೆ ಮತ ಎಣಿಕೆ ನಡೆಯುತ್ತಿದ್ದು, ಭಾರಿ ಕುತೂಹಲಘಟ್ಟ ತಲುಪಿದೆ. ಎನ್ ಡಿ ಎ ಮೈತ್ರಿಕೂಟ ಸದ್ಯ ಮುನ್ನಡೆ ಸಾಧಿಸಿದೆ. ಇನ್ನು ಈ ಬಾರಿ ಬಿಹಾರದಲ್ಲಿ ಮಹಾ ಮೈತ್ರಿ ಅಧಿಕಾರಕ್ಕೆ ಬರಲಿದೆ ಎಂದು ಹಲವು ಚುನಾವಣೋತ್ತರ ಸಮೀಕ್ಷೆಗಳು ಹೇಳಿದ್ದವು.
ಆದ್ರೆ ಸದ್ಯದ ಟ್ರೆಂಡ್ ಪ್ರಕಾರ ನಿತೀಶ್ ಕುಮಾರ್ ನೇತೃತ್ವದ ಎನ್ಡಿಎ ಅಧಿಕಾರಕ್ಕೆ ಏರುವ ಸಾಧ್ಯತೆಯಿದೆ. ಸದ್ಯದ ಮಾಹಿತಿ ಪ್ರಕಾರ ಎನ್ಡಿಎ 129, ಮಹಾಮೈತ್ರಿ 99 ಇತರರು 15 ಸ್ಥಾನದಲ್ಲಿ ಮುನ್ನಡೆಯಲ್ಲಿದ್ದಾರೆ.
ಇಂಡಿಯಾ ಟುಡೇ – ಆಕ್ಸಿಸ್ ಸರ್ವೆ ಮತ್ತು ಟುಡೇಸ್ ಚಾಣಕ್ಯ ಸರ್ವೆ 15 ವರ್ಷಗಳ ಕಾಲ ಅಧಿಕಾರದಲ್ಲಿದ್ದ ಸಿಎಂ ನಿತೀಶ್ ಕುಮಾರ್ ನೇತೃತ್ವದ ಬಿಜೆಪಿ ಮತ್ತು ಜೆಡಿಯು ಮೈತ್ರಿಕೂಟ ಅಧಿಕಾರ ಕಳೆದುಕೊಳ್ಳುತ್ತದೆ.
ಆರ್.ಆರ್ ನಗರ, ಶಿರಾದಲ್ಲಿ ಬಿಜೆಪಿ ನಾಗಾಲೋಟ..ಮಂಕಾದ ಕೈ-ದಳ..!
ಆರ್ ಜೆಡಿ, ಕಾಂಗ್ರೆಸ್ ಮತ್ತು ಎಡಪಕ್ಷಗಳ ಮಹಾಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ. ಲಾಲೂಪ್ರಸಾದ್ ಯಾದವ್ ಪುತ್ರ ತೇಜಸ್ವಿ ಯಾದವ್ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಹೇಳಿತ್ತು.
ಆದ್ರೆ ಸದ್ಯದ ಟ್ರೆಂಡ್ ಪ್ರಕಾರ ಎನ್ ಡಿಎ ಮೈತ್ರಿಕೂಟ ಗದ್ದುಗೆ ಹೇರುವ ಸಾಧ್ಯತೆಗಳಿವೆ.
ಇನ್ನು ಇಂದು ಮತ ಎಣಿಕೆ ಆರಂಭವಾಗುತ್ತಿದ್ದಂತೆ ಆರ್ ಜೆಡಿ ಮೈತ್ರಿಕೂಟ ಮುನ್ನಡೆ ಪಡೆದಿತ್ತು. ಆದರೆ ಬೆಳಗ್ಗೆ 10 ಗಂಟೆಯ ನಂತರ ಟ್ರೆಂಡ್ ಬದಲಾಗತೊಡಗಿತು.
2015ರ ಚುನಾವಣೆಯಲ್ಲಿ ಆರ್ಜೆಡಿ 80, ಬಿಜೆಪಿ 53, ಜೆಡಿಯು 71, ಕಾಂಗ್ರೆಸ್ 27 ಎಲ್ಜೆಪಿ 2, ಇತರರು 10 ಸ್ಥಾನ ಗೆದ್ದಿದ್ದರು. ಒಟ್ಟು 243 ವಿಧಾನಸಭಾ ಕ್ಷೇತ್ರಗಳಿದ್ದು 123 ಮ್ಯಾಜಿಕ್ ಸಂಖ್ಯೆಯಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel