ಕಾಶ್ಮೀರದ ಬುಲೆಟ್ ಎಕ್ಸ್ ಪ್ರೆಸ್ ಬಗ್ಗೆ ವಿರಾಟ್ ಮೆಚ್ಚುಗೆ Virat Kohli saaksha tv
ಅಬುಧಾಬಿ : ಕೇವಲ ತಮ್ಮ ವೇಗದಿಂದಲೇ ಟಾಕ್ ಆಫ್ ದಿ ಟೌನ್ ಆಗಿರುವ ಸನ್ ರೈಸ್ ಹೈದರಾಬಾದ್ ನ ವೇಗಿ ಉಮ್ರಾನ್ ಮಲಿಕ್ ಬಗ್ಗೆ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಹೈದರಾಬಾದ್ ನಡುವಿನ ಪಂದ್ಯದ ಬಳಿಕ ಪ್ರಶಸ್ತಿ ಸಮಾರಂಭದಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ, ಉಮ್ರಾನ್ ಬಗ್ಗೆ ಪ್ರತಿಕ್ರಿಯೆ ನೀಡಿದರು. ಜಮ್ಮು- ಕಾಶ್ಮೀರದ ಯುವಕನ ಸಾಮರ್ಥ್ಯವನ್ನು ಗಮನಹರಿಸಬೇಕಾಗಿದೆ. ಈ ಟೂರ್ನಮೆಂಟ್ ಪ್ರತಿ ವರ್ಷ ಯುವ ಆಟಗಾರರನ್ನು ಹೊರ ತರುತ್ತಿದೆ. 150 ಕಿಲೋ ಮೀಟರ್ ವೇಗದಲ್ಲಿ ಬೌಲಿಂಗ್ ಮಾಡಬಲ್ಲ ಯುವಕನನ್ನು ನೋಡುವುದಕ್ಕೆ ತುಂಬಾ ಖುಷಿಯಾಗುತ್ತದೆ. ಇಲ್ಲಿಂದಲೇ ಆತನ ಪ್ರಗತಿ ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ ಎಂದಿದ್ದಾರೆ.
ಇನ್ನು ಭಾರತೀಯ ಕ್ರಿಕೆಟ್ ಭವಿಷ್ಯದ ದೃಷ್ಠಿಯಿಂದ ವೇಗದ ಬೌಲರ್ ಗಳ ಬೆಳವಣಿಗೆ ಒಳ್ಳೆಯ ಸಂಕೇತವಾಗಿದೆ ಎಂದು ವಿರಾಟ್ ಉಮ್ರಾನ್ ಮಲಿಕ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಬಾರಿಯ ಐಪಿಎಲ್ ನಲ್ಲಿ ಸನ್ ರೈಸ್ ಹೈದರಾಬಾದ್ ಹೇಳಿಕೊಳ್ಳುವ ಪ್ರದರ್ಶನ ನೀಡಿಲ್ಲ. ಬ್ಯಾಟಿಂಗ್, ಬೌಲಿಂಗ್ ನಲ್ಲಿ ವೈಫಲ್ಯ ಅನುಭವಿಸಿ, ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಆದ್ರೆ ಉಮ್ರಾನ್ ಮಲಿಕ್ ವಿಚಾರವಾಗಿ ಎಸ್ ಆರ್ ಹೆಚ್ ಟಾಪ್ ನಲ್ಲಿದೆ. ಯಾಕಂದರೇ ಎಸ್ ಆರ್ ಹೆಚ್ ನ ಮಲಿಕ್, ಎಲ್ಲರ ಹುಬ್ಬೇರುವಂತೆ ಬೌಲಿಂಗ್ ಮಾಡುತ್ತಿದ್ದಾರೆ. ಬರೋಬ್ಬರು 150ಕ್ಕೂ ಹೆಚ್ಚು ಸ್ಪೀಡ್ ನಲ್ಲಿ ಬಾಲ್ ಎಸೆಯುತ್ತಿದ್ದಾರೆ.
ಆ ಮೂಲಕ ಎದುರಾಳಿ ಬ್ಯಾಟ್ಸ್ ಮೆನ್ ಗಳ ಎದೆ ಝಲ್ ಎನ್ನುವಂತೆ ಮಾಡುತ್ತಿದ್ದಾರೆ. ಕೆಕೆಆರ್ ವಿರುದ್ಧದ ಪಂದ್ಯದಲ್ಲಿ 151.03 ವೇಗದಲ್ಲಿ ಬೌಲಿಂಗ್ ಮಾಡಿದ್ದ ಮಲಿಕ್, ನಿನ್ನೆ ನಡೆದ ಆರ್ ಸಿಬಿ ವಿರುದ್ಧದ ಮ್ಯಾಚ್ ನಲ್ಲಿ ಬರೋಬ್ಬರಿ 153 ಕಿಲೋ ಮೀಟರ್ ವೇಗದಲ್ಲಿ ಬೌಲಿಂಗ್ ಮಾಡಿದ್ದಾರೆ. ಇದು ಐಪಿಎಲ್ ನ ಫಾಸ್ಟೆಸ್ಟ್ ಬಾಲ್ ಆಗಿದೆ.