ಲಂಡನ್ : ಪಂಜಾಬ್ ನ್ಯಾಷನಲ್ ಬ್ಯಾಂಕ್ ನಿಂದ ಕೋಟ್ಯಾಂತರ ರೂಪಾಯಿ ಪಡೆದು ಪಂಗನಾಮ ಹಾಕಿದ್ದ ದೇಶಭ್ರಷ್ಟ ನೀರವ್ ಮೋದಿಯ ಬಂಧನದ ಅವಧಿ ವಿಸ್ತರಣೆಯಾಗಿದೆ. ಯುಕೆ ನ್ಯಾಯಾಲಯದ ಎದುರು ವಿಚಾರಣೆ ಎದುರಿಸುತ್ತಿರುವ ನೀರವ್ ಮೋದಿ ಇಂದು ವಿಡಿಯೋಲಿಂಕ್ ಮೂಲಕ ಕೋರ್ಟ್ ಗೆ ಹಾಜರಾಗಿದ್ದು, ಆಗಸ್ಟ್ 27 ವರೆಗೆ ಆತನ ಬಂಧನದ ಅವಧಿಯನ್ನು ವಿಸ್ತರಿಸಲಾಗಿದೆ. ಇನ್ನೂ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 7ಕ್ಕೆ ಮುಂದೂಡಿಕೆ ಮಾಡಲಾಗಿದೆ.
ಮಾರ್ಚ್‌ನಲ್ಲಿ ಬಂಧನಕ್ಕೊಳಗಾಗಿ ಲಂಡನ್‌ನ ವಾಂಡ್ಸ್‌ವರ್ತ್ ಜೈಲಿನಲ್ಲಿ ಕಂಬಿ ಎಣಿಸುತ್ತಿರುವ ನೀರವ್ ಮೋದಿಯನ್ನು ವೆಸ್ಟ್ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ನ್ಯಾಯಾಧೀಶರಾದ ವನೆಸ್ಸಾ ಬಾರೈಟ್ಸರ್ ಅವರು ವಿಚಾರಣೆ ನಡೆಸಿದ್ದಾರೆ. ಭಾರತಕ್ಕೆ ನೀರವ್ ಮೋದಿ ಹಸ್ತಾಂತರದ ವಿಚಾರಣೆಯನ್ನು ವಿಡಿಯೋಲಿಂಕ್ ಮೂಲಕವೇ ನಡೆಸಲಾಗುತ್ತಿದ್ದು ಎರಡನೇ ಭಾಗದ ವಿಚಾರಣೆಯು ಸೆಪ್ಟೆಂಬರ್ 7 ಕ್ಕೆ ಮುಂದೂಡಲಾಗಿದೆ.