ಕೋಟ(ರಾಜಸ್ಥಾನ)(ಮೇ.10): ಬೆಂಗಳೂರು ಮೂಲದ ನೀಟ್ ಪರೀಕ್ಷಾ ಆಕಾಂಕ್ಷಿತ ವಿದ್ಯಾರ್ಥಿ ರಾಜಸ್ಥಾನದ ಕೋಟದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ.
ಮೊಹಮ್ಮದ್ ನಾಸಿರ್ (22) ಎಂಬ ವಿದ್ಯಾರ್ಥಿ ಅಲ್ಲಿಯ ವಿಜ್ಞಾನನಗರದಲ್ಲಿ ಕಟ್ಟಡದ 10ನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದಾರೆ. ಈ ವಿದ್ಯಾರ್ಥಿ ಕಳೆದ ಒಂದು ವರ್ಷದಿಂದ ಕೋಟದ ಕೋಚಿಂಗ್ ಇನ್ಸಟಿಟ್ಯೂಟ್‌ನಲ್ಲಿ ನೀಟ್ ಪರೀಕ್ಷೆಗೆ ತರಬೇತಿ ಪಡೆಯುತ್ತಿದ್ದ, ಜೈಪುರದಲ್ಲಿ ಪರೀಕ್ಷೆಯನ್ನು ಬರೆದು ಸೋಮವಾರ ಕೋಟಕ್ಕೆ ಮರಳಿದ್ದ. ಅದೇ ದಿನ ರಾತ್ರಿ 11 ಗಂಟೆಗೆ ಇಲ್ಲಿನ ಕಟ್ಟಡವೊಂದರ 10ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ.
ಈ ಸಂದರ್ಭದಲ್ಲಿ ಆತನ ರೂಮ್ ನಲ್ಲಿ ಯಾರೂ ಇರಲಿಲ್ಲ ಎನ್ನಲಾಗಿದೆ. ಮೃತ ಶರೀರವನ್ನು ಎಂಬಿಎಸ್ ಆಸ್ಪತ್ರೆಯೆಯಲ್ಲಿ ಇರಿಸಲಾಗಿದ್ದು, ಬೆಂಗಳೂರಿನಿಂದ ಆತನ ಪೋಷಕರು ಬಂದ ನಂತರ ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.








