ಜೂಜು ದಂಧೆ – ಸ್ಯಾಂಡಲ್ ವುಡ್ ನಟಿ ನೇಹಾ ಶೆಟ್ಟಿ ತಂದೆ ಬಂಧನ , ಚಾರ್ಜ್ ಶೀಟ್ ಸಲ್ಲಿಕೆ
ಬೆಂಗಳೂರು : ಮುಂಗಾರು ಮಳೆ ೨ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಜೊತೆಗೆ ಮುಂಗಾರಿನ ಮಿಂಚು ಹರಿಸಿದ್ದ ನಟಿ ನೇಹಾ ಶೆಟಟ್‌ಟಿ ಅವರ ತಂದೆಯನ್ನ ಜೂಜು ದಂಧೆ ನಡೆಸುತ್ತಿದ್ದ ಆರೋಪಡಿ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಹಲವು ಕಡೆ ಜೂಜು ಅಡ್ಡೆ ನರ‍್ಮಿಸಿ ಗ್ಯಾಂಬ್ಲಿಂಗ್ ನಡೆಸುತ್ತಿದ್ದ ಆರೋಪದ ಮೇರೆಗೆ
ನೇಹಾ ಶೆಟ್ಟಿ ತಂದೆ, ಉದ್ಯಮಿ ಹರಿರಾಜ್ ಶೆಟ್ಟಿಯನ್ನು ಬಂಧಿಸಿದ ಸಿಸಿಬಿ ಅಧಿಕಾರಿಗಳು ಚರ‍್ಚ್ ಶೀಟ್ ಸಲ್ಲಿಸಿದ್ದಾರೆ. ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ ಗ್ಯಾಬ್ಲಿಂಗ್ ಉದ್ಯಮಿ ಹರಿರಾಜ್ ಶೆಟ್ಟಿ, ಮಹಿಳೆಯರು ಸೇರಿದಂತೆ ಒಟ್ಟು ೪೨ ಮಂದಿ ಗ್ಯಾಂಬ್ಲರ್ ಗಳ ವಿರುದ್ಧ ೨೫೦ ಪುಟಗಳ ಚರ‍್ಜ್ ಶೀಟ್ ಸಲ್ಲಿಸಲಾಗಿದೆ.
ಪೂಲ್ ಮತ್ತು ರಿ ಕ್ರಿಯೇಷನ್ ಹೆಸರಿನಲ್ಲಿ ಕ್ಲಬ್ ನರ‍್ಮಿಸಿ ಅದರಲ್ಲಿ ಜೂಜು, ವಿಡಿಯೋ ಗೇಮ್ ಪರ‍್ಲಲ್, ಬ್ಯಾನ್ ಸ್ಕಿಲ್ ನಡೆಸುತ್ತಿದ್ದರು ಎನ್ನುವ ಆರೋಪ ಕೇಳಿಬಂದಿದೆ. ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿ ಪೂಲ್ ಎಂ ಕ್ಲಬ್ ಹೆಸರಿನಲ್ಲಿ ಹರಿರಾಜ್ ಶೆಟ್ಟಿ ಜೂಜು ಅಡ್ಡೆ ನಡೆಸುತ್ತಿದ್ದರು. ವಿಷಯ ತಿಳಿದ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿ ವೇಳೆ ೪೨ ಜೂಜುಕೋರರು ಸಿಕ್ಕಿಬಿದ್ದಿದ್ದಾರೆ. ಜೊತೆ ಲಕ್ಷ ಲಕ್ಷ ರೂ. ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಂಧಿತರಲ್ಲಿ ಬೆಂಗಳೂರು, ಚಿಕ್ಕಬಳ್ಳಾಪುರ, ಬಳ್ಳಾರಿ ಮಾತ್ರವಲ್ಲದೆ ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯದ ಜೂಜುಕೋರರು ಇದ್ದರು ಎನ್ನುವ ಮಾಹಿತಿ ತಿಳಿದುಬಂದಿದೆ. ಕಾನೂನು ಬಾಹಿರ ಕೃತ್ಯಕ್ಕೆ ಹರಿರಾಜ್ ಶೆಟ್ಟಿ ಮಹಿಳೆಯರನ್ನು ಕರೆದುಕೊಂಡು ಬರುತ್ತಿದ್ದ ಮಾಹಿತಿ ಬಹಿರಂಗವಾಗಿದೆ. ಬಂಧಿತ ೪೨ ಮಂದಿಯಲ್ಲಿ ೫ ಮಂದಿ ಮಹಿಳೆಯರಿದ್ದಾರೆ. ಇದರಲ್ಲಿ ಉದ್ಯಮಿಗಳ ಪತ್ನಿಯರು, ರ‍್ಕಾರಿ ಅಧಿಕಾರಿಗಳ ಪತ್ನಿಯರು ಮತ್ತು ಮತ್ತರ‍್ವ ಮಹಿಳೆ ರೌಡಿ ಶೀಟರ್ ತಾಯಿ ಎನ್ನಲಾಗಿದೆ.
ಹರಿರಾಜ್ ಬೆಂಗಳೂರಿನಲ್ಲಿ ಸುಮಾರು ೧೪ಕ್ಕೂ ಹೆಚ್ಚು ಕಡೆ ಜೂಜು ಅಡ್ಡಗಳನ್ನು ನಡೆಸುತ್ತಿದ್ದರು ಎನ್ನುವ ಮಾಹಿತಿ ಬಹಿರಂಗವಾಗಿತ್ತು. ಜೂನ್ ೫ರಂದು ಹರಿರಾಜ್ ಬಂಧಿಸಲಾಗಿತ್ತು. ಹರಿರಾಜ್ ವಿರುದ್ಧ ಈಗಾಗಲೇ ೧೯ ಪ್ರಕರಣಗಳು ದಾಖಲಾಗಿದೆ.
ಶೂಟಿಂಗ್ ವೇಳೆ ಜಾರಿ ಬಿದ್ದು ಗಾಯಗೊಂಡ ‘ಮಾಸ್ಟರ್ ಪೀಸ್’ ಸುಂದರಿ ಶಾನ್ವಿ..!
ಹರಿರಾಜ್ ಜೂಜು ಅಡ್ಡೆಗಳ ಮೇಲೆ ದಾಳಿ ನಡೆಸುತ್ತಿರುವುದು ಹೊಸದೇನಲ್ಲ. ಅನೇಕ ಬಾರಿ ದಾಳಿ ನಡೆದಿದೆ. ಪ್ರಕರಣ ಕ್ಲೋಸ್ ಆಗುತ್ತಿದ್ದಂತೆ ಮತ್ತೆ ದಂಧೆಯಲ್ಲಿ ಮುಳುಗುತ್ತಿದ್ದರು. ಪೊಲೀಸರ ವಿರುದ್ಧವೇ ಸಿಟ್ಟಿಗೆದಿದ್ದ ಹರಿರಾಜ್ ಪೊಲೀಸರ ವಿರುದ್ಧ ಅಪಪ್ರಚಾರ ಮಾಡುತ್ತಿದ್ದರು ಎನ್ನುವ ಆರೋಪ ಕೂಡ ಇದೆ. ಸಾಮಾಜಿಕ ಜಾಲತಾಣದಲ್ಲಿ ಪೊಲೀಸರ ಬಗ್ಗೆ ಕೆಟ್ಟದಾಗಿ ಪ್ರಚಾರ ಮಾಡುತ್ತಿದ್ದರು ಎನ್ನಲಾಗಿದೆ. ಈ ಮೊದಲು ಗೂಂಡಾ ಕಾಯ್ದೆಯಡಿ ಹರಿರಾಜ್‌ನನ್ನು ಬಂಧಿಸಲಾಗಿತ್ತು. ಆದರೆ ಪೊಲೀಸರು ಸುಳ್ಳು ಪ್ರಕರಣ ದಾಖಲಿಸಿದ್ದಾರೆ ಎಂದು ಕರ‍್ಟ್ ನಲ್ಲಿ ಸ್ಟೇ ಪಡೆದು ಜೈಲಿನಿಂದ ಹೊರಬಂದಿದ್ದರು.
ಬಳಿಕ ಗೂಂಡ ಕಾಯ್ದೆ ತಡೆ ತೆರವಿಗೆ ಸಿಸಿಬಿ ಮನವಿ ಮಾಡಿತ್ತು. ರ‍್ಜಿಯನ್ನು ನ್ಯಾಯಾಲಯ ಪುರಸ್ಕರಿಸಿದ ಬಳಿಕ ಹರಿರಾಜ್ ನನ್ನು ಜೂನ್ ತಿಂಗಳಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದರು. ನಗರದ ಕುಖ್ಯಾತ ಜೂಜುಕೋರ ಎನ್ನುವ ಆರೋಪ ಕೂಡ ಹರಿರಾಜ್ ವಿರುದ್ಧ ಕೇಳಿಬಂದಿದೆ. ಇದೀಗ ಹರಿರಾಜ್ ಜೊತೆ ೪೨ ಮಂದಿಯನ್ನು ಬಂಧಿಸಿ ಚರ‍್ಜ್ ಶೀಟ್ ಸಲ್ಲಿಸಲಾಗಿದೆ.








