Netflix – ನಯನತಾರ ಮತ್ತು ವಿಘ್ನೇಶ್ ಮದುವೆಯ ವಿಡಿಯೋ ಟೀಸರ್ ಬಿಡುಗಡೆ
ಲೇಡಿ ಸೂಪರ್ ಸ್ಟಾರ್ ನಯನತಾರ ಮತ್ತು ವಿಘ್ನೇಶ್ ಶಿವನ್ ಜೋಡಿಯ ವಿವಾಹ ಮಹೋತ್ಸವವನ್ನ ನೀವು ಶೀಘ್ರದಲ್ಲೇ ನಿಮ್ಮ ಮನೆಯಲ್ಲಿ ನೋಡಬಹುದು. ನೆಟ್ ಫ್ಲಿಕ್ಸ್ ಇಂಡಿಯಾ ಮಂಗಳವಾರ ನಯನಾ ಮತ್ತು ವಿಘ್ನೇಶ್ ಮದುವೆ ಆಲ್ಬಂನ ಸಣ್ಣ ಟೀಸರ್ ನ್ನ ಬಿಡುಗಡೆ ಮಾಡಿದೆ.
ನಯನತಾರಾ ಮತ್ತು ವಿಘ್ನೇಶ್ ಮದುವೆ ದೃಶ್ಯಗಳನ್ನ ಪ್ರಸಾರ ಮಾಡುವ ಹಕ್ಕನ್ನ ನೆಟ್ ಫ್ಲಿಕ್ಸ್ ಪಡೆದುಕೊಂಡಿದೆ. ಇದನ್ನ ಗೌತಮ್ ವಾಸುದೇವ್ ಮೆನೆನ್ ನಿರ್ದೇಶಿಸಿದ್ದಾರೆ. ಜೂನ್ ನಲ್ಲಿ ಈ ತಾರ ಜೋಡಿ ಅದ್ದೂರಿಯಾಗಿ ವಿವಾಹವಾಗಿದ್ದರು.
ನಾನು ಕೆಲಸ ಮಾಡುವುದನನ್ನ ಮಾತ್ರ ನಂಬುತ್ತೇನೆ. ನಿಮ್ಮ ಸುತ್ತ ಪ್ರೀತಿ ಇದೆ ಎಂದು ಕಂಡುಕೊಳ್ಳುವುದು ಖುಷಿ ಕೊಡುತ್ತದೆ. ಎಂದು ವಿಡಿಯೋ ಬೈಟ್ಸ್ ನಲ್ಲಿ ನಯನತಾರ ಹೇಳುವ ಗ್ಲಿಂಪ್ಸ್ ಅನ್ನ ನೆಟ್ ಫ್ಲಿಕ್ಸ್ ಬಿಡುಗಡೆ ಮಾಡಿದೆ.
ಮಹಿಳೆಯಾಗಿ ಅವರ ಕ್ಯಾರೆಕ್ಟರ್ ಮತ್ತು ಪಾತ್ರ ಸ್ಪೂರ್ತಿದಾಯಕವಾಗಿದೆ ಅವರು. ಅವರು ಅಂತರಗದಲ್ಲೂ ಹೊರಗೂ ತುಂಬ ಸುಂದರವಾಗಿದ್ದಾರೆ ಎಂದು ವಿಘ್ನೇಶ್ ಶಿವನ್ ಹೇಳಿದ್ದಾರೆ.
ಹಲವು ವರ್ಷಗಳ ಡೇಟಿಂಗ್ ನಂತರ, ನಯನತಾರಾ ಮತ್ತು ವಿಘ್ನೇಶ್ ಶಿವನ್ ಜೂನ್ 9 ರಂದು ಮಹಾಬಲಿಪುರಂನ ಐಷಾರಾಮಿ ರೆಸಾರ್ಟ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯಲ್ಲಿ ಸೂರ್ಯ, ಜ್ಯೋತಿಕಾ, ರಜನಿಕಾಂತ್ ಮತ್ತು ಶಾರುಖ್ ಖಾನ್ ಸೇರಿದಂತೆ ಭಾರತೀಯ ಚಿತ್ರರಂಗದ ಟಾಪ್ ಸೆಲೆಬ್ರಿಟಿಗಳು ಭಾಗವಹಿಸಿದ್ದರು.








