Yuzvendra Chahal | ಒಂದೇ ಒಂದು ಮ್ಯಾಚ್ ಆಡದ ಚಹಾಲ್ !
ಟಿ 20 ವಿಶ್ವಕಪ್ 2022 ಸೆಮಿಫೈನಲ್ ನಲ್ಲಿ ಭಾರತ ತಂಡ ಘೋರ ಪರಾಭವ ಅನುಭವಿಸಿದೆ.
ಇಂಗ್ಲೆಂಡ್ ವಿರುದ್ಧ 10 ವಿಕೆಟ್ ಗಳ ಅಂತರದಲ್ಲಿ ಸೋತ ಟೀಂ ಇಂಡಿಯಾ, ಟೂರ್ನಿಯಿಂದ ಹೊರಬಿದ್ದಿದೆ.
ಭಾರತ ನೀಡಿದ 169 ರನ್ ಗಳ ಗುರಿಯನ್ನ ಒಂದೇ ಒಂದು ವಿಕೆಟ್ ನಷ್ಟವಿಲ್ಲದೇ ಇಂಗ್ಲೆಂಡ್ ತಂಡ ತಲುಪಿತು.
ಈ ಮ್ಯಾಚ್ ನಲ್ಲಿ ಭಾರತ ತಂಡದ ಬೌಲರ್ ಗಳು ಪೂರ್ತಿಯಾಗಿ ವಿಫಲರಾದರು.
ಇದು ಹೀಗಿದ್ದರೇ ಟಿ 20 ವಿಶ್ವಕಪ್ ಗೆ ಆಯ್ಕೆಯಾದ ಲೆಗ್ ಸ್ಪಿನ್ನರ್ ಯುಜುವೇಂದ್ರ ಚಹಾಲ್ ಕೇವಲ ಬೆಂಚ್ ಗೆ ಸೀಮಿತವಾಗಿದ್ದರು.

ಅಲ್ಲದೇ ಈ ವಿಶ್ವಕಪ್ ನಲ್ಲಿ ವನಿಂದು ಹಸರಂಗ, ಅದಿಲ್ ರಿಶೀದ್, ಜಂಪಾ, ರಷಿದ್ ಖಾನ್ ರಂತಹ ಲೆಗ್ ಸ್ಪಿನ್ನರ್ ಗಳು ಅದ್ಭುತ ಪ್ರದರ್ಶನ ನೀಡಿದರು.
ಆದ್ರೆ ಟೀಂ ಇಂಡಿಯಾ ಪರ ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್ ತೀವ್ರ ನಿರಾಸೆ ಮೂಡಿಸಿದರು.
ಇಂಗ್ಲೆಂಡ್ ವಿರುದ್ಧ ನಾಲ್ಕು ಓವರ್ ಗಳನ್ನು ಎಸೆದ ಅಕ್ಷರ್ ಪಟೇಲ್ 30 ರನ್ ನೀಡಿದ್ರೆ, ಅಶ್ವಿನ್ ಎರಡು ಓವರ್ ಗಳಲ್ಲಿ 27 ರನ್ ಗಳಿಸಿದರು.
ಇತ್ತ ಲೆಗ್ ಸ್ಪಿನ್ನರ್ ಚಹಾಲ್ ಗೆ ಮಾತ್ರ ಒಂದೇ ಒಂದು ಮ್ಯಾಚ್ ನಲ್ಲಿ ಅವಕಾಶ ನೀಡಲಿಲ್ಲ. ಚಹಾಲ್ ಏನಾದ್ರೂ ಆಸೀಸ್ ಟೂರ್ ಗೆ ಬಂದಿದ್ರಾ ? ಕನಿಷ್ಠ ಒಂದೇ ಒಂದು ಮ್ಯಾಚ್ ನಲ್ಲಿದ್ರೂ ಅವಕಾಶ ನೀಡಬೇಕಿತ್ತು ಎನ್ನುತ್ತಿದ್ದಾರೆ.








