ನನ್ನ ಕ್ರಿಕೆಟ್ ಬದುಕಿನಲ್ಲಿ ಆ ರೀತಿ ಬ್ಯಾಟಿಂಗ್ ಮಾಡಿದವರನ್ನು ಯಾವತ್ತೂ ನೋಡಿಲ್ಲ… ಇದು 15 ವರ್ಷಗಳ ಹಿಂದೆ ಮಹೇಂದ್ರ ಸಿಂಗ್ ಧೋನಿಯ ಬ್ಯಾಟಿಂಗ್ ವೈಖರಿಯನ್ನು ನೋಡಿದ್ದ ಟೀಮ್ ಇಂಡಿಯಾದ ಮಾಜಿ ಆಟಗಾರ ಮಹಮ್ಮದ್ ಕೈಫ್ ಹೇಳಿರುವ ಮಾತು.
2005ರಲ್ಲಿ ವಿಶಾಖಪಟ್ಟಣದಲ್ಲಿ ನಡೆದಿದ್ದ ಪಂದ್ಯ. ಅದು ಬದ್ಧ ವೈರಿ ಪಾಕಿಸ್ತಾನ ವಿರುದ್ಧ. ಆಗಷ್ಟೇ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ಪದಾರ್ಪಣೆ ಮಾಡಿದ್ದ ಸಮಯ. ಧೋನಿಯವರದ್ದು ಅದು ನಾಲ್ಕನೇ ಏಕದಿನ ಪಂದ್ಯ. ಆ ಪಂದ್ಯವನ್ನು ನಾನು ತುಂಬಾ ಹತ್ತಿರದಿಂದ, ಸೂಕ್ಷ್ಮವಾಗಿ ಗಮನಿಸಿದ್ದೇನೆ. ಧೋನಿ ಚೆಂಡನ್ನು ಹೊಡೆಯುತ್ತಿದ್ದ ರೀತಿಗೆ ನಿಜಕ್ಕೂ ಚಕಿತಗೊಂಡಿದ್ದೆ. ಧೋನಿ ಚೆಂಡನ್ನು ಹರಿದುಹಾಕುವಂತೆ (ಒಡೆದು ಹಾಕುವಂತೆ) ಬ್ಯಾಟ್ ಬೀಸುತ್ತಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್ ನ ಆರಂಭದಲ್ಲಿ ಆ ರೀತಿ ಬ್ಯಾಟಿಂಗ್ ಮಾಡಿದವರನ್ನು ನಾನು ನೋಡಿರಲಿಲ್ಲ. ಆಗಲೇ ಅಂದುಕೊಂಡಿದ್ದೆ. ಧೋನಿಗೆ ಉಜ್ಜಲವಾದ ಭವಿಷ್ಯವಿದೆ ಅಂತ ಮಹಮ್ಮದ್ ಕೈಫ್ ಹೇಳಿಕೊಂಡಿದ್ದಾರೆ.
ಪಾಕಿಸ್ತಾನದ ಬೌಲರ್‍ಗಳನ್ನು ಬೆವರಿಳಿಸಿದ್ದ ಧೋನಿ 123 ಎಸೆತಗಳಲ್ಲಿ 148 ರನ್ ಸಿಡಿಸಿದ್ದರು. ಆಗಲೇ ಅವರನ್ನು ಮೂರನೇ ಕ್ರಮಾಂಕಕ್ಕೆ ಬಡ್ತಿ ನೀಡುವುದು ಉತ್ತಮ ಎಂದು ಭಾವಿಸಿದ್ದೆ ಎಂದು ಕೈಪ್ ಆ ಪಂದ್ಯವನ್ನು ನೆನಪಿಸಿಕೊಂಡಿದ್ದಾರೆ. ಪಾಕ್ ವಿರುದ್ಧ 58 ರನ್‍ಗಳಿಂದ ಟೀಮ್ ಇಂಡಿಯಾ ಗೆಲುವಿನ ನಗೆ ಬೀರಿತ್ತು. ಅರ್ಹವಾಗಿಯೇ ಧೋನಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿಯೂ ಒಲಿಯಿತ್ತು. ಕೇವಲ ಎರಡೇ ಎರಡು ವರ್ಷಗಳಲ್ಲಿ ಧೋನಿ ಟೀಮ್ ಇಂಡಿಯಾದ ನಾಯಕನಾದ್ರು. ಚೊಚ್ಚಲ ಟಿ-ಟ್ವೆಂಟಿ ವಿಶ್ವಕಪ್ ಗೆದ್ದ ಸಾಧನೆಯನ್ನೂ ಮಾಡಿದ್ದರು. ನಂತರ ಧೋನಿ ಹಿಂತಿರುಗಿ ನೋಡಲೇ ಇಲ್ಲ, ಇನ್ನು ಧೋನಿ ತನ್ನ ಚೊಚ್ಚಲ ಏಕದಿನ ಪಂದ್ಯದಲ್ಲಿ ಡಕೌಟ್ ಆಗಿದ್ದರು.
ಆಗ ಮತ್ತೊಂದು ತುದಿಯಲ್ಲಿ ಕೈಫ್ ಬ್ಯಾಟಿಂಗ್ ಮಾಡುತ್ತಿದ್ದರು. ಬಾಂಗ್ಲಾ ವಿರುದ್ಧ ಆಡುವ ಮೂಲಕ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ಪದಾರ್ಪಣೆ ಮಾಡಿದ್ದರು. ದುರಾದೃಷ್ಟವಶಾತ್ ಮೊದಲ ಪಂದ್ಯದಲ್ಲೇ ಡಕೌಟ್ ಆಗಿದ್ದರು. ಆಗ ಯಾರು ಅಂದುಕೊಂಡಿರಲಿಲ್ಲ. ಧೋನಿ ಮ್ಯಾಚ್ ಫಿನಿಷರ್ ಅಂತ. ಹಾಗೇ ಪಂದ್ಯ ಗೆಲ್ಲಿಸಿಕೊಡುವಂತ ಸಾಮಥ್ರ್ಯವಿದೆಯಂತ. ಅಲ್ಲದೆ ಮೊದಲ ಮೂರು ಏಕದಿನ ಪಂದ್ಯಗಳಲ್ಲೂ ಧೋನಿ ಹೇಳಿಕೊಳ್ಳುವಂತಹ ಬ್ಯಾಟಿಂಗ್ ಪ್ರದರ್ಶನ ನೀಡಿರಲಿಲ್ಲ. ಆದ್ರೆ ವಿಶಾಖಪಟ್ಟಣದ ಪಂದ್ಯ ಧೋನಿಯ ಕ್ರಿಕೆಟ್ ಬದುಕಿಗೆ ಹೊಸ ತಿರುವನ್ನು ನೀಡಿತ್ತು ಅಂತ ಮಹಮ್ಮದ್ ಕೈಫ್ ಅಭಿಪ್ರಾಯಪಟ್ಟಿದ್ದಾರೆ.
ಅಂದ ಹಾಗೇ ಧೋನಿಯವರನ್ನು ನಾನು ಮೊದಲ ಬಾರಿ ನೋಡಿದ್ದು 2002ರಲ್ಲಿ. ದೇವಧರ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ನಾನು ಕೇಂದ್ರ ವಲಯ ತಂಡದ ನಾಯಕನಾಗಿದ್ದೆ. ಧೋನಿ ಪೂರ್ವ ವಲಯ ಪರ ಆಡುತ್ತಿದ್ದರು. ನಾವು 360 ರನ್‍ಗಳ ಸವಾಲನ್ನು ನೀಡಿದ್ದೇವು. ಧೋನಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‍ಗೆ ಆಗಮಿಸಿದ್ದರು. ಆಗ ನಾವು ಧೋನಿ ವಿರುದ್ಧ ಆಕ್ರಮಮಣಕಾರಿಯಾಗಿ ಬೌಲಿಂಗ್ ಮಾಡಬೇಕು ಅಂತ ಪ್ಲಾನ್ ಮಾಡಿಕೊಂಡಿದ್ದೇವು. ಆದ್ರೆ ಧೋನಿ ನಮ್ಮ ಲೆಕ್ಕಚಾರಗಳನ್ನು ಉಲ್ಟಪಲ್ಟಾ ಮಾಡಿಬಿಟ್ಟರು. ಕೇವಲ 40-50 ಎಸೆತಗಳಲ್ಲಿ 80-85 ರನ್ ಸಿಡಿಸಿದ್ದರು. ಆಗಲೇ ನಾನು ಅಂದುಕೊಂಡೆ. ಧೋನಿ ಎಕ್ಸ್ ಫ್ಯಾಕ್ಟರ್ ಅಂತ. ತನ್ನ ನಿರ್ಭಿತ ಹಾಗೂ ವಿಶಿಷ್ಟ ಶೈಲಿಯ ಬ್ಯಾಟಿಂಗ್ ಜೊತೆಗೆ ಪಂದ್ಯದ ಗತಿಯನ್ನು ಅರಿತುಕೊಂಡಿರುವ ಧೋನಿ ಅಪ್ರತಿಮ ಆಟಗಾರ ಎಂದು ಕೈಫ್ ಧೋನಿಯ ಹಳೆಯ ಪಂದ್ಯಗಳನ್ನು ಮೆಲುಕು ಹಾಕಿಕೊಂಡಿದ್ದಾರೆ.








