ದೇಶದಲ್ಲಿ ಹೊಸದಾಗಿ 2.34 ಲಕ್ಷ ಕೊರೊನಾ ಕೇಸ್ ಪತ್ತೆ Saaksha Tv
ನವದೆಹಲಿ: ದೇಶದಲ್ಲಿ ಹೆಚ್ಚುತ್ತಿರುವ ಕೊರೊನಾ ಸಂಕಿಂತರ ಸಂಖ್ಯೆ ಸಾಕಷ್ಟು ಆತಂಕ ಮೂಡಿಸಿದೆ. ಈಗ ಕಳೆದ 24 ಗಂಟೆಯಲ್ಲಿ 2,34,281 ಲಕ್ಷ ಹೊಸ ಪ್ರಕರಣಗಳು ಪತ್ತೆಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಟ್ವೀಟ್ ಮಾಡಿದೆ.
ಕೊರೊನಾ ದಿನದ ಏರಿಕೆ ಪ್ರಮಾಣವು 14.50ರಷ್ಟಿದ್ದು, ವಾರದ ಏರಿಕೆ ಪ್ರಮಾಣವು 16.40ರಷ್ಟಿದೆ. ಇನ್ನೂ ಸಕ್ರೀಯ ಪ್ರಕರಣಗಳು 18,84,937 ಲಕ್ಷ ಇದ್ದು, ಶೇ 4.59 ರಷ್ಟು ಸಕ್ರೀಯ ಪ್ರಮಾಣಗಳ ಸಂಖ್ಯೆ ಇದೆ. ಕಳೆದ 24 ಗಂಟೆಯಲ್ಲಿ 3,52,784 ಲಕ್ಷ ಜನ ಚೇತರಿಸಿಕೊಂಡಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.
ಕಳೆದ 24 ಗಂಟೆಯಲ್ಲಿ 893 ಜನ ಸಾವನ್ನಪ್ಪಿದ್ದಾರೆ. ಹಾಗೇ 16,15,993 ಜನರಿಗೆ ಕಳೆದ 24 ಗಂಟೆಯಲ್ಲಿ ಕೊರೊನಾ ಪರೀಕ್ಷೆ ಮಾಡಲಾಗಿದೆ. ಇನ್ನೂ ಲಸಿಕಾ ಅಭಿಯಾನ ಪ್ರಾರಂಭವಾದಾಗಿನಿಂದ 165.70 ಕೋಟಿ ಲಸಿಕೆಗಳನ್ನು ನೀಡಲಾಗಿದೆ ಎಂದು ಹೇಳಿದೆ.