ಕೊರೊನಾ ಆತಂಕದ ನಡುವೆ ಮತ್ತೊಂದು ಬ್ಯಾಕ್ಟೀರಿಯಾ ಪತ್ತೆ : ಕೇರಳದಲ್ಲಿ ಬಾಲಕ ಸಾವು..!
ದೇಶದಲ್ಲಿ ಕೊರೊನಾ ಮಹಾಮಾರಿ ಆರ್ಭಟ ಕ್ಷೀಣಿಸುತ್ತಿದೆ. ಆದ್ರೆ ಇದರ ನಡುವೆ ಹೊಸ ಹೊಸ ಸೋಂಕು ಪತ್ತೆಯಾಗ್ತಿರೋದು ದೇಶದ ಜನರ ನೆಮ್ಮದಿ ಕೆಡಿಸುತ್ತಿದೆ. ಇತ್ತೀಚೆಗಷ್ಟೇ ಆಂಧ್ರದಲ್ಲಿ ನಿಗೂಢ ಕಾಯಿಲೆ ಪತ್ತೆಯಾಗಿ ಆತಂಕ ಸೃಷ್ಟಿಸಿತ್ತು. ಅಲ್ಲದೇ ಹರಿಯಾಣ ದೆಹಲಿ ಭಾಗಗಳಲ್ಲೂ ಹೊಸ ಸೋಂಕು ಕಾಣಿಸಿಕೊಂಡು 9 ಜನರ ಬಲಿ ಪಡೆದಿತ್ತು. ಇದೀಗ ಕೇರಳದಲ್ಲಿ ಮತ್ತೊಂದು ಬ್ಯಾಕ್ಟೀರಿಯಾದ ಹಾವಳಿ ಶುರುವಾಗಿದೆ.
ನಡುರಸ್ತೆಯಲ್ಲೇ ಯುವತಿಯ ಮೇಲೆ ಮಚ್ಚಿನಿಂದ ಹಲ್ಲೆ : ಪಾಗಲ್ ಪ್ರೇಮಿ ಅಂದರ್..!
ಶಿಜೆಲ್ಲಾ ಬ್ಯಾಕ್ಟೀರಿಯಾ ಎಂಬ ಸೋಂಕಿನ ಭೀತಿ ಕಾಡತೊಡಗಿದೆ. ಈ ಬ್ಯಾಕ್ಟೀರಿಯಾ ಸೋಂಕಿಗೆ ಕೇರಳದ ವಯನಾಡ್ನಲ್ಲಿ 11 ವರ್ಷದ ಬಾಲಕನೋರ್ವ ಬಲಿಯಾಗಿದ್ದಾನೆ. ಕೇರಳದ ಕೊಜಿಕ್ಕೋಡ್ ಜಿಲ್ಲೆಯಲ್ಲಿ ಸೋಂಕು ಕಂಡು ಬಂದಿದೆ. ಈಗಾಗಲೇ 26 ಶಂಕಿತ ಸೋಂಕಿತರು ಪತ್ತೆಯಾಗಿರೋದು ಆತಂಕಕ್ಕೆ ಕಾರಣವಾಗಿದೆ. ಇನ್ನು ಈ ಬ್ಯಾಕ್ಟೀರಿಯಾ ಸೋಂಕಿನ ಲಕ್ಷಣಗಳು ಆತಂಕಕಾರಿಯಾಗಿದೆ. ಅತಿಸಾರ, ಹೊಟ್ಟೆನೋವು , ಜ್ವರ, ವಾಂತಿ, ಈ ಸೋಂಕಿನ ಲಕ್ಷಣವಾಗಿದೆ. ಅಂದ್ಹಾಗೆ ಕಲುಷಿತ ನೀರು ಸೇವನೆಯಿಂದ ಈ ಸೋಂಕು ಹರಡಿರಬಹುದು ಎಂದು ವೈದ್ಯರು ಅನುಮಾನ ವ್ಯಕ್ತಪಡಿಸಿದ್ದಾರೆ.
‘ಶಸ್ತ್ರಾಸ್ತ್ರದಿಂದ ಬಾಹ್ಯಾಕಾಶ ಕ್ಷೇತ್ರದ ಸ್ಪರ್ಧೆಯವರೆಗೆ’ ಬೆಳವಣಿಗೆ ಕಂಡಿದ್ದೇವೆ : ನಮೋ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








