`ಹೊಸ ರಕ್ತ, ಹೊಸ ಚಿಂತನೆ ಬರಬೇಕು’ ಎಂದ ಸಿದ್ದುಗೆ ಬಿಜೆಪಿ ಟಾಂಗ್
ಬೆಂಗಳೂರು : ಕೋಮುವಾದಿ ಬಿಜೆಪಿಯಿಂದ ದೇಶದ ಐಕ್ಯತೆ ಉಳಿಸಲು ಸಾಧ್ಯವಿಲ್ಲ. ಹಾಗಾಗಿ ಕಾಂಗ್ರೆಸ್ ಗೆ ಹೊಸ ರಕ್ತದ ಜೊತೆಗೆ ಹೊಸ ಚಿಂತನೆಗಳು ಬರಬೇಕು, ಬದ್ಧತೆ ಇರಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕರೆಕೊಟ್ಟಿದ್ದಾರೆ.
ಸಿದ್ದರಾಮಯ್ಯ ಅವರ ಈ ಹೇಳಿಕೆಗೆ ಟ್ವಿಟ್ಟರ್ ನಲ್ಲಿ ರಾಜ್ಯ ಬಿಜೆಪಿ ಘಟಕ ಟಾಂಗ್ ಕೊಟ್ಟಿದೆ.
ಪಕ್ಷಕ್ಕೆ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕೆಂದು ಸಿದ್ದರಾಮಯ್ಯ ಕರೆಕೊಟ್ಟಿದ್ದಾರೆ.
ಪಕ್ಷಕ್ಕೆ ಬರುವ ಯುವಕರಿಗೆ ಸ್ಥಾಪಿತ ಹಿತಾಸಕ್ತಿಗಳ ಕೂಟದಲ್ಲಿ ಯಾವ ಸ್ಥಾನ ನೀಡುತ್ತೀರಿ?
ಇದೇ ನಮ್ಮ ಕೊನೆಯ ಚುನಾವಣೆ ಎನ್ನುತ್ತಲೇ ನೀವು ಮೂರು ಬಾರಿ ಚುನಾವಣೆಗೆ ನಿಂತಿರಿ.
ಕಾಂಗ್ರೆಸ್ ನಲ್ಲಿ ಹೊಸಬರಿಗೆ ಅವಕಾಶ ಸಾಧ್ಯವೇ ಎಂದು ರಾಜ್ಯ ಬಿಜೆಪಿ ವ್ಯಂಗ್ಯವಾಡಿದೆ.
ಭಾನುವಾರ ಸಿದ್ದರಾಮಯ್ಯ ಹೇಳಿದ್ದಿಷ್ಟು..
ಭ್ರಷ್ಟಾಚಾರ ಬಿಜೆಪಿಯವರಿಗೆ ನೀರು ಕುಡಿದಷ್ಟೇ ಸಲೀಸಾಗಿದೆ.
ಅದು ಅವರ ರಾಜಕೀಯದ ಒಂದು ಭಾಗವಾಗಿಬಿಟ್ಟಿದೆ. ಇಂತಹಾ ಬಿಜೆಪಿಯನ್ನು 2023 ರ ಚುನಾವಣೆಯಲ್ಲಿ ಅಧಿಕಾರದಿಂದ ಕಿತ್ತೊಗೆಯಬೇಕು.
ದೇಶ, ಸಮಾಜ, ಪ್ರಜಾಪ್ರಭುತ್ವ, ಸಂವಿಧಾನದ ಉಳಿವಿಗಾಗಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕಿದೆ ಎಂದಿದ್ದರು.
ಕೋಮುವಾದಿ ಬಿಜೆಪಿಯಿಂದ ದೇಶದ ಐಕ್ಯತೆ ಉಳಿಸಲು ಸಾಧ್ಯವಿಲ್ಲ. ಹಾಗಾಗಿ ಕಾಂಗ್ರೆಸ್ ಗೆ ಹೊಸ ರಕ್ತದ ಜೊತೆಗೆ ಹೊಸ ಚಿಂತನೆಗಳು ಬರಬೇಕು, ಬದ್ಧತೆ ಇರಬೇಕು.
ಇದಕ್ಕಾಗಿ ಹೊಸಬರನ್ನ ಪಕ್ಷಕ್ಕೆ ಸೇರಿಸಬೇಕು. ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ಮಹಿಳೆಯರು, ರೈತ-ಕಾರ್ಮಿಕರು, ವಿದ್ಯಾರ್ಥಿ-ಯುವ ಜನರು ಕಾಂಗ್ರೆಸ್ ಸೇರಬೇಕು ಎಂದು ಸಿದ್ದರಾಮಯ್ಯ ಕರೆಕೊಟ್ಟಿದ್ದರು.