ಬೆಂಗಳೂರಿನ ಎರಡು ಖಾಸಗಿ ಶಾಲೆಗಳಲ್ಲಿ ಕರೋನಾ ಸ್ಪೋಟ…
ರಾಜ್ಯ ಮತ್ತು ದೇಶದಲ್ಲಿ ದಿನದಿಂದ ದಿನಕ್ಕೆ ಕರೋನಾ ಪ್ರಕರಣಗಳು ಹೆಚ್ಚಾಗುತ್ತಾ ಇವೆ. ಇದೀಗ ರಾಜಧಾನಿ ಬೆಂಗಳೂರಿನ ಎರಡು ಖಾಸಗಿ ಶಾಲೆಗಳಲ್ಲಿ ಕೊರೋನಾ ಸ್ಫೋಟಗೊಂಡಿದೆ.
ದಾಸರಹಳ್ಳಿಯ ರಾಜ ಗೋಪಾಲನಗರದಲ್ಲಿ ಇರುವ ನ್ಯೂ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಮತ್ತು ಎಂಇಎಸ್ ಪಬ್ಲಿಕ್ ಸ್ಕೂಲ್ ಎಂಬ ಎರಡು ಖಾಸಗಿ ಶಾಲೆಗಳ ವಿದ್ಯಾರ್ಥಿಗಳಲ್ಲಿ ಕರೋನಾ ಸೋಂಕು ಕಾಣಿಸಿಕೊಂಡಿದೆ.
ನ್ಯೂ ಇಂಟರ್ ನ್ಯಾಷನಲ್ ಸ್ಕೂಲ್‍ನಲ್ಲಿ 5 ಮತ್ತು 6 ನೇ ತರಗತಿಯಲ್ಲಿ ಓದುತ್ತಿದ್ದ 21 ಮಕ್ಕಳಿಗೆ ಕೊರೋನಾ ಪಾಸಿಟಿವ್ ಬಂದಿದ್ದು, ಎಂಇಎಸ್ ಪಬ್ಲಿಕ್ ಸ್ಕೂಲ್‍ನಲ್ಲಿ 5 ನೇ ತರಗತಿಯಲ್ಲಿ ಓದುತ್ತಿದ್ದ 10 ಮಕ್ಕಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಸದ್ಯಕ್ಕೆ ಶಾಲೆಯ ಎಲ್ಲಾ ಸಿಬ್ಬಂದಿ ಮತ್ತು ಮಕ್ಕಳಿಗೆ ಕೋವಿಡ್ ಪರೀಕ್ಷೆ ಮಾಡಲಾಗಿದೆ.
ಶಾಲಾ ವಲಯಗಳನ ಕಂಟೈನ್ಮೆಂಟ್ ಜೋನ್ ಎಂದು ಪರಿಗಣನೆ ಮಾಡಲಾಗಿದೆ. ಕೊರೊನಾ ಪಾಸಿಟಿವ್ ಬಂದಿರುವ ಮಕ್ಕಳೆಲ್ಲರೂ ಕೂಡ ಆರೋಗ್ಯವಾಗಿದ್ದು, ಯಾವುದೇ ಆತಂಕ ಪಡುವಂತ ಅಗತ್ಯವಿಲ್ಲ ಎನ್ನಲಾಗುತ್ತಿದೆ.
ಸೋಮವಾರ ರಾಜ್ಯದ್ಯಾಂತ 415 ಕೊರೊನಾ ಪ್ರಕರಣಗಳು ಕಂಡಿ ಬಂದಿದ್ದು, ಈ ಪೈಕಿ ಬೆಂಗಳೂರು ನಗರ ಒಂದರಲ್ಲೇ ಭರ್ತಿ 400 ಪಾಸಿಟಿವ್ ಕೇಸ್ ವರದಿಯಾಗಿದೆ.