ದೆಹಲಿ ದಂಗಲ್ : 1000 ಅಪರಿಚಿತ ಆರೋಪಿಗಳ ವಿರುದ್ಧ ಕೇಸ್
ಪಾಲ್ವಾಲ್ : ದೆಹಲಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗಡ್ಪುರಿ ಪೊಲೀಸ್ ಠಾಣೆಯಲ್ಲಿ ಸುಮಾರು ಒಂದು ಸಾವಿರ ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ನಿನ್ನೆಯ ರೈತರ ಟ್ರ್ಯಾಕ್ಟರ್ ರ್ಯಾಲಿಯ ವೇಳೆ ಸಾಫ್ತಾ ಮೊರ್ ನಲ್ಲಿ ಪ್ರತಿಭಟನಾಕಾರರು ಮತ್ತು ಪೊಲೀಸರ ಮಧ್ಯೆ ಘರ್ಷಣೆ ಉಂಟಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗಡ್ಪುರಿ ಪೊಲೀಸ್ ಠಾಣೆಯಲ್ಲಿ 1000 ಅಪರಿಚಿತ ಆರೋಪಿಗಳ ಮೇಲೆ ಪೊಲೀಸರು 307, 323 ಮತ್ತು 186 ಸೆಕ್ಷನ್ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೊಲೆ ಯತ್ನ ಮತ್ತು ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಕೇಸ್ ದಾಖಲಿಸಿದ್ದಾರೆ.
ಆದ್ರೆ ಇದುವರೆಗೆ ಈ ಸಂಬಂಧ ಯಾರನ್ನೂ ವಶಕ್ಕೆ ತೆಗೆದುಕೊಂಡಿಲ್ಲ ಅಥವಾ ಯಾರನ್ನು ಬಂಧಿಸಿಲ್ಲ.
ಕೆಂಪುಕೋಟೆಯಲ್ಲಿ ಧ್ವಜ ಹಾರಿಸಿದ್ದು ನಟ ದೀಪು ಸಿಧು : ಬಿಜೆಪಿ ಜೊತೆ ನಂಟಿನ ಸಾಕ್ಷ್ಯ
ನಿನ್ನೆ ದೆಹಲಿ ರಣರಂಗವಾಗಿ ಬದಲಾಗಿತ್ತು. ಕಳೆದ ಎರಡು ತಿಂಗಳಿನಿಂದ ಶಾಂತಿಯುತವಾಗಿದ್ದ ರೈತರ ಚಳವಳಿ ಹಿಂಸಾತ್ಮಕ ರೂಪ ಪಡೆದುಕೊಂಡಿತ್ತು.
ಕೆಲ ಕಿಡಿಗೇಡಿಗಳು ನಿನ್ನೆ ಪ್ರತಿಭಟನೆಯಲ್ಲಿ ಸಾಮಾಜಘಾತುಕ ಕೃತ್ಯಗಳನ್ನ ಎಸಗಿ ದೇಶಕ್ಕೆ ಅಪಮಾನ ಮಾಡಿದ್ರು.
ನೂರಾರು ಪ್ರತಿಭಟನಾಕಾರರು ಪೆÇಲೀಸ್ ಸಿಬ್ಬಂದಿಯನ್ನು ಬೆನ್ನಟ್ಟಿದ್ದಲ್ಲದೆ, ತಮ್ಮ ಟ್ರ್ಯಾಕ್ಟರುಗಳ ಮೂಲಕ ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ಹಾನಿ ಮಾಡಿದ್ರು.
ಇವಷ್ಟೇ ಅಲ್ಲದೆ, ದೇಶದ ಹೆಮ್ಮೆಯ ಕೆಂಪು ಕೋಟೆಯ ಮೇಲೆ ಏರಿ ತಮ್ಮ ಧ್ವಜ ಹಾರಿಸಿಯೇ ಬಿಟ್ಟರು. ಇದು ಸದ್ಯ ದೇಶದಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿದೆ.