ಆಧಾರ್ ಕಾರ್ಡ್ ದಾರರಿಗೆ ಗುಡ್ ನ್ಯೂಸ್ : ಹೊಸ ಸೌಲಭ್ಯ ಒದಗಿಸಿದ UDPI
ಆಧಾರ್ ಕಾರ್ಡ್ ದಾರರಿಗೆ ಮತ್ತಷ್ಟು ಅನುಕೂಲಕ್ಕಾಗಿ ಹೊಸದೊಂದು ಸೌಲಭ್ಯವನ್ನ ಒದಗಿಸಲು ಮುಂದಾಗಿದೆ. ವಿಶಿಷ್ಟ ಗುರುತು ಪ್ರಾಧಿಕಾರ ಮಾಹಿತಿ ನೀಡರುವ ಪ್ರಕಾರ ಆಧಾರ್ ಕಾರ್ಡ್ ಹೊಂದಿರುವ ಭಾರತೀಯ ನಾಗರಿಕರು ಎಂಆಧಾರ್ ಅಪ್ಲಿಕೇಶನ್ನಲ್ಲಿ ಐದು ಪ್ರೊಫೈಲ್ ಗಳನ್ನ ಸೇರಿಸಬಹುದಾಗಿದೆ. ಈ ಸೌಲಭ್ಯವನ್ನ ಪಡೆಯಲಿಕ್ಕಾಗಿ ಜನತೆ ತಮ್ಮ ಮೊಬೈಲ್ನಲ್ಲಿರುವ ಎಂಆಧಾರ್ ಅಪ್ಲಿಕೇಶನ್ನ್ನು ಅಪ್ಡೇಟ್ ಮಾಡಬೇಕಾಗುತ್ತದೆ.
ಈ ಸಂಬಂಧ ಟ್ವೀಟ್ ಮಾಡಿರುವ ವಿಶಿಷ್ಟ ಗುರುತು ಪ್ರಾಧಿಕಾರ, ನೀವು ನಿಮ್ಮ ಎಂಆಧಾರ್ ಅಪ್ಲಿಕೇಶನ್ ಮೂಲಕ 5 ಪ್ರೊಫೈಲ್ಗಳನ್ನ ಸೇರಿಸಬಹುದಾಗಿದೆ. ನೋಂದಾಯಿತ ಮೊಬೈಲ್ ಸಂಖ್ಯೆಗೆ ನಿಮ್ಮ ಒಟಿಪಿ ಬರಲಿದೆ. https://tinyurl.com/taj87tg (iOS), https://tinyurl.com/yx32kkeq (android) ವೆಬ್ಸೈಟ್ಗಳ ಮೂಲಕ ಹೊಸ ಎಂಆಧಾರ್ ಅಪ್ಲಿಕೇಶನ್ಗಳನ್ನ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.
ಪ್ರಪಂಚದಲ್ಲಿ ಅತಿ ಹೆಚ್ಚು ಸ್ಯಾಲರಿ ಕೊಡೋ ದೇಶಗಳಿವು…! INTERESTING FACTS
ಇದಕ್ಕಾಗಿ ಬಳಕೆದಾರರು ಸಂಪೂರ್ಣ ವಿವರವನ್ನ ಎಂಆಧಾರ್ ಅಪ್ಲಿಕೇಶನ್ಗೆ ಸಲ್ಲಿಸಬೇಕಾಗುತ್ತದೆ. ಹಾಗೂ ನೊಂದಾಯಿತ ಮೊಬೈಲ್ ಸಂಖ್ಯೆಗೆ ಒಟಿಪಿ ಬರಲಿದೆ. ಒಂದು ವೇಳೆ ಈ ಪ್ರಕ್ರಿಯೆಯಲ್ಲಿ ಯಾವುದೇ ಬಳಕೆದಾರರಿಗೆ ದೋಷ ಕಂಡು ಬಂದಲ್ಲಿ ಅವರು ಅಪ್ಲಿಕೇಶನ್ನ್ನು ಅನ್ಇನ್ಸ್ಟಾಲ್ ಬಳಿಕ ಪುನಃ ಇನ್ಸ್ಟಾಲ್ ಮಾಡುವಂತೆ ವಿಶಿಷ್ಟ ಗುರುತು ಪ್ರಾಧಿಕಾರ ಸಲಹೆ ನೀಡಿದೆ.








