ಪಶ್ಚಿಮ ಬಂಗಾಳ ಕ್ಲಿನಿಕಲ್ ಎಸ್ಟಾಬ್ಲಿಷ್ಮೆಂಟ್ ರೆಗ್ಯುಲೇಟರಿ ಕಮಿಷನ್ (ಡಬ್ಲ್ಯುಬಿಸಿಇಆರ್ಸಿ) ಅಧಿಸೂಚನೆಯಲ್ಲಿ, ಖಾಸಗಿ ಆಸ್ಪತ್ರೆಗಳಿಗೆ ಹೊಸ ಮಾರ್ಗಸೂಚಿ ಬಿಡುಗಡೆ …
ಕೋಲ್ಕತಾ
ಮಹತ್ವದ ಬೆಳವಣಿಗೆಯಲ್ಲಿ ಪಶ್ಚಿಮ ಬಂಗಾಳದ ಮಮತಾ ದೀದಿ ಸರಕಾರ ಖಾಸಗಿ ಆಸ್ಪತ್ರೆಗಳು ಹೊಸ ಮಾರ್ಗಸೂಚಿ ಬಿಡುಗಡೆ ಹೊರಡಿಸಿದೆ. ರೋಗಿಗಳಿಗೆ ಪ್ರವೇಶದ ಸಮಯದಲ್ಲಿ ಚಿಕಿತ್ಸೆಯ ಅಂದಾಜು ವೆಚ್ಚದ ಶೇಕಡಾ 20 ಅಥವಾ ಗರಿಷ್ಠ 50,000 ರೂ. ಗಳಿಗಿಂತ ಹೆಚ್ಚು ವಿಧಿಸಲು ಸಾಧ್ಯವಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.
ಒಂದು ವೇಳೆ ತಕ್ಷಣವೇ ಹಣ ಪಾವತಿಸದಿದ್ದರೆ ಖಾಸಗಿ ಆಸ್ಪತ್ರೆಗಳು ಪ್ರವೇಶ ಅಥವಾ ಚಿಕಿತ್ಸೆಯನ್ನು ನಿರಾಕರಿಸಬಾರದು ಎಂದು ಪಶ್ಚಿಮ ಬಂಗಾಳ ಕ್ಲಿನಿಕಲ್ ಎಸ್ಟಾಬ್ಲಿಷ್ಮೆಂಟ್ ರೆಗ್ಯುಲೇಟರಿ ಕಮಿಷನ್ (ಡಬ್ಲ್ಯುಬಿಸಿಇಆರ್ಸಿ) ಅಧಿಸೂಚನೆಯಲ್ಲಿ ತಿಳಿಸಿದೆ.
“ಖಾಸಗಿ ಆಸ್ಪತ್ರೆಗಳು ಚಿಕಿತ್ಸೆಯ ಅಂದಾಜು ವೆಚ್ಚದ ಶೇಕಡಾ 20 ಅಥವಾ ಗರಿಷ್ಠ 50,000 ರೂಗಳಲ್ಲಿ ಯಾವುದು ಕಡಿಮೆ ಇದ್ದರೂ, ಪ್ರವೇಶದ ಸಮಯದಲ್ಲಿ ಬೇಡಿಕೆಯಿಡಲು ಸಾಧ್ಯವಿಲ್ಲ ಎಂದು ನಿರ್ಧರಿಸಲಾಗಿದೆ” ಹೇಳಿದರು.
ಒಂದು ವೇಳೆ ರೋಗಿಯು ಪ್ರವೇಶದ ಸಮಯದಲ್ಲಿ ಅಗತ್ಯ ಮೊತ್ತವನ್ನು ಠೇವಣಿ ಇಡುವ ಸಾಧ್ಯವಾಗದೆ ಹೋದರೆ , ಆಸ್ಪತ್ರೆಯು ತಾತ್ಕಾಲಿಕ ಪ್ರವೇಶವನ್ನು ನೀಡಬೇಕು ಮತ್ತು ಅಗತ್ಯ ಚಿಕಿತ್ಸೆಯನ್ನು ಕೊಡಬೇಕು ಎಂದು ಅಧಿಸೂಚನೆ ತಿಳಿಸಿದೆ.
“ಆದಾಗ್ಯೂ, 12 ಗಂಟೆಗಳ ಅನಾ ಪಾವತಿ ಮಾಡದಿದ್ದರೆ, ತಾತ್ಕಾಲಿಕ ಪ್ರವೇಶವನ್ನು ರದ್ದುಗೊಳಿಸಲು ಆಸ್ಪತ್ರೆಗಳಿಗೆ ಪೂರ್ಣ ಸ್ವಾತಂತ್ರ್ಯ ಇದೆ ಎಂದು ಉಲ್ಲೇಖಿಸಲಾಗಿದೆ.
ಇನ್ನೊಂದೆಡೆ ಪ್ರತಿದಿನವೂ ರೋಗಿಗಳ ಖರ್ಚು ವೆಚ್ಚದ ಬಗ್ಗೆ ಆಸ್ಪತ್ರೆಗಳು ಮಾಹಿತಿ ನೀಡಬೇಕೆಂದು ತಿಳಿಸಲಾಗಿದೆ ಮತ್ತು 2,000 ರೂ.ಗಿಂತ ಹೆಚ್ಚಿನ ಮೊತ್ತದ ವೆಚ್ಚದ ಕುರಿತು ರೋಗಿಗೆ ಮತ್ತು ಅವರ ಕುಟುಂಬ ಸದಸ್ಯರಿಗೆ ಮೊದಲಾಗಿ ತಿಳಿಸಬೇಕು ಎಂದು ಆದೇಶಿಸಲಾಗಿದೆ.








