ಅಕ್ಟೋಬರ್ 15 ರ ನಂತರ ಶಾಲೆಗಳ ಪುನರಾರಂಭಕ್ಕೆ ಸಂಬಂಧಿಸಿ ಹೊಸ ಮಾರ್ಗಸೂಚಿ
ಹೊಸದಿಲ್ಲಿ, ಅಕ್ಟೋಬರ್ 04: ಅನ್ಲಾಕ್ 5 ಹಂತದಲ್ಲಿ ಶಾಲೆಗಳ ಪುನರಾರಂಭಕ್ಕೆ ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನು ಶಿಕ್ಷಣ ಸಚಿವಾಲಯ ಶನಿವಾರ ಬಿಡುಗಡೆ ಮಾಡಿದೆ. ಮಾರ್ಗಸೂಚಿಗಳ ಪ್ರಕಾರ, ಶಾಲೆಗಳು, ಕಾಲೇಜುಗಳು, ಕೋಚಿಂಗ್ ಸಂಸ್ಥೆ ಮತ್ತು ಇತರ ಶಿಕ್ಷಣ ಸಂಸ್ಥೆಗಳು ಅಕ್ಟೋಬರ್ 15 ರ ನಂತರ ನಾನ್-ಕಂಟೈನ್ ಮೆಂಟ್ ವಲಯಗಳಲ್ಲಿ ಮಾತ್ರ ತೆರೆಯಬಹುದು. ಆದಾಗ್ಯೂ, ಶಿಕ್ಷಣ ಸಂಸ್ಥೆಗಳು ಪುನಃ ತೆರೆಯಬೇಕೆ ಎಂಬ ನಿರ್ಧಾರವನ್ನು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಗೆ ಬಿಡಲಾಗಿದೆ.
ವಿಶ್ವದ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾ ನಿರ್ಮಿಸಿದ ಅರಬ್ಟೆಕ್ ಆರ್ಥಿಕ ಬಿಕ್ಕಟ್ಟಿನಿಂದಾಗಿ ದಿವಾಳಿ
ವಿದ್ಯಾರ್ಥಿಗಳು ಶಾಲೆಗೆ ಬರಬಹುದು ಆದರೆ ಅವರಿಗೆ ಅವರ ಪೋಷಕರು ಅಥವಾ ಪಾಲಕರ ಲಿಖಿತ ಒಪ್ಪಿಗೆ ಬೇಕಾಗುತ್ತದೆ. ವಿದ್ಯಾರ್ಥಿಗಳು ಶಾಲೆಗಳಿಗೆ ಬರದಂತೆ ನಿರ್ಧರಿಸಿದಲ್ಲಿ ಆನ್‌ಲೈನ್ ಕಲಿಕೆಯನ್ನು ಇನ್ನೂ ಮುಂದುವರಿಸಬೇಕಾಗುತ್ತದೆ.
ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ತಮ್ಮ ಎಸ್‌ಒಪಿಗಳನ್ನು ಕೇಂದ್ರದ ಅನ್‌ಲಾಕ್ 5 ಮಾರ್ಗಸೂಚಿಗಳಿಗೆ ಅನುಗುಣವಾಗಿ ಮತ್ತು ಆಯಾ ಪ್ರದೇಶದ ಪರಿಸ್ಥಿತಿಗೆ ಅನುಗುಣವಾಗಿ ಸಿದ್ಧಪಡಿಸುವ ಅಗತ್ಯವಿದೆ.
ಪ್ರಾಯೋಗಿಕ ಅಥವಾ ಲ್ಯಾಬ್ ಕೆಲಸದ ಅಗತ್ಯವಿರುವ ವಿಜ್ಞಾನ ಮತ್ತು ತಂತ್ರಜ್ಞಾನದ ಸ್ಟ್ರೀಮ್‌ಗಳಲ್ಲಿ ಪಿಎಚ್‌ಡಿ ಮತ್ತು ಪಿಜಿ ವಿದ್ಯಾರ್ಥಿಗಳಿಗೆ ಮಾತ್ರ ಉನ್ನತ ಸಂಸ್ಥೆಗಳು ಮತ್ತೆ ತೆರೆಯಬಹುದು.
Guidelines for reopening of schools/HEIs outside containment zones:
States/UTs may take a decision in respect of reopening of schools & coaching institutes after Oct 15, in a graded manner. pic.twitter.com/kp89ol48Cr
— Ministry of Education (@EduMinOfIndia) October 3, 2020
ಈ ಹಿಂದೆ ಕೇಂದ್ರ ಗೃಹ ಸಚಿವಾಲಯವು ಆದೇಶ ಹೊರಡಿಸಿ ಅಕ್ಟೋಬರ್ 15 ರಂದು ಶಾಲೆಗಳು ತರಗತಿಗಳನ್ನು ಪುನರಾರಂಭಿಸುವುದು ಕಡ್ಡಾಯವಲ್ಲ ಎಂದು ಸ್ಪಷ್ಟಪಡಿಸಿತ್ತು. ಅನ್ಲಾಕ್ 5 ಮಾರ್ಗಸೂಚಿಗಳಲ್ಲಿ, ರಾಜ್ಯಗಳು ಮತ್ತು ಕೆಂದ್ರ ಪ್ರದೇಶಗಳಿಗೆ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ನೀಡಲಾಗಿದೆ ಎಂದು ಎಂಎಚ್‌ಎ ತಿಳಿಸಿತ್ತು.








