ಗಜಕೇಸರಿ, ಹೆಬ್ಬುಲಿ ಹಾಗೂ ಪೈಲ್ವಾನ್ ನಂತಹ ಸೂಪರ್ ಹಿಟ್ ಸಿನೆಮಾಗಳಿಗೆ ಆಕ್ಷನ್ ಕಟ್ ಹೇಳಿ ಸಕ್ಸಸ್ ಕಂಡಿರುವ ನಿರ್ದೇಶಕ ಕೃಷ್ಣ ಅವರು ಹೊಸ ಪ್ರಾಜೆಕ್ಟ್ ಕೈಗೆತ್ತಿಕೊಂಡಿದ್ದಾರೆ.
ಇನ್ನೂ ಇತ್ತೀಚಿಗಷ್ಟೆ ಸ್ಕ್ರಿಪ್ಟ್ ಪೂಜೆಯನ್ನೂ ಮುಗಿಸಿದ್ದಾರೆ.
ಇನ್ನೂ ಈ ಬಗ್ಗೆ ನಿರ್ಮಾಪಕಿ ಸ್ವಪ್ನ ಕೃಷ್ಣ ಅವರು ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಶೀಘ್ರದಲ್ಲಿ ಸಿನಿಮಾ ಆರಂಭಿಸಲಿದ್ದೇವೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಇನ್ನೂ ಕೃಷ್ಣ ಅವರ ಹೊಸ ಚಿತ್ರಕ್ಕೆ ಹೀರೋ ಯಾರು ಎಂಬ ಕುತೂಹಲ ಸದ್ಯ ಎಲ್ಲರಲ್ಲೂ ಮನೆಮಾಡಿದ್ದು, ಕೆಲ ನಟರ ಹೆಸರುಗಳು ಕೇಳಿಬರುತ್ತಿವೆ.
ಮೂಲಗಳ ಪ್ರಕಾರ ಕೃಷ್ಣ ಅವರ ಮುಂದಿನ ಸಿನೆಮಾಗೆ ನಿಖಿಲ್ ಕುಮಾರಸ್ವಾಮಿ ನಾಯಕರಾಗಲಿದ್ದಾರಂತೆ.
ಎಸ್ ಸದ್ಯ ನಿಖಿಲ್ ಕುಮಾರಸಸ್ವಾಮಿ ಅವರ ಮದುವೆಯ ನಂತರ ಅವರ ಅದೃಷ್ಟ ಮತ್ತಷ್ಟು ಬದಲಾಗಿದೆ.
ಇತ್ತೀಚೆಗಷ್ಟೇ ನಿಖಿಲ್ ಅವರ ಅಭಿನಯದ ರೈಡರ್ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿತ್ತು.
ಪೋಸ್ಟರ್ ನಲ್ಲಿ ನಿಖಿಲ್ ರಗಡ್ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದರು.
ಇದೀಗ ಮತ್ತೊಂದು ಹೊಸ ಸಿನೆಮಾದಲ್ಲಿ ಅಂದ್ರೆ ಸೂಪರ್ ಹಿಟ್ ಸಿನೆಮಾಗಳನ್ನ ನಿರ್ದೇಶಿಸಿರುವ ಕೃಷ್ಣ ಅವರ ಹೊಸ ಸಿನೆಮಾಗೆ ನಿಖಿಲ್ ಹಿರೋ ಎನ್ನಲಾಗುತ್ತಿದ್ದು, ಅಭಿಮಾನಿಗಳಲ್ಲಿ ಸಂತಸ ಮನೆ ಮಾಡಿದೆ.
ಇನ್ನೂ ದರ್ಬಾರ್ , ಖೈದಿಯಂತಹ ದಕ್ಷಿಣ ಕನ್ನಡದ ಸೂಪರ್ ಹಿಟ್ ಸಿನೆಮಾಗಳಿಗೆ ಬಂಡವಾಳ ಹೂಡಿರುವ ಲೈಕಾ ಪ್ರೊಡಕ್ಷನ್ ಈ ಚಿತ್ರವನ್ನೂ ನಿರ್ಮಾಣ ಮಾಡುತ್ತಿದ್ದು, ಚಿತ್ರದ ಬಗೆಗಿನ ನಿರೀಕ್ಷೆ ಹೆಚ್ಚಾಗಿದೆ.








