ಇಲ್ಲಿದೆ ಹೊಸ ಸಂಸತ್ ಭವನದ ಇಂಚಿಂಚು ಮಾಹಿತಿ..
ಪ್ರಧಾನಿ ನರೇಂದ್ರ ಮೋದಿ ದೆಹಲಿಯ ರಾಜಪಥದಲ್ಲಿ ಹೊಸ ಸಂಸತ್ ಭವನದ ಶಂಕು ಸ್ಥಾಪನೆ ಮಾಡಿದ್ದಾರೆ. ಈ ಸಮಾರಂಭದಲ್ಲಿ ಅನೇಕ ರಾಜಕೀಯ ಪಕ್ಷಗಳ ನಾಯಕರು, ಸಚಿವರು, ವಿವಿಧ ದೇಶಗಳು ರಾಯಭಾರಿಗಳು ಭಾಗವಹಿಸಿದ್ದಾರೆ. ಸುಮಾರು 971 ಕೋಟಿ ರೂ. ವೆಚ್ಚದಲ್ಲಿ ನೂತನ ಸಂಸತ್ ಕಟ್ಟಡವನ್ನು ನಿರ್ಮಾಣ ಮಾಡಲಾಗುತ್ತಿದೆ. ಸಂಸತ್ ಭವನದ ಗುತ್ತಿಗೆ ಟಾಟಾ ಪಾಲಾಗಿದೆ.
ಇನ್ನು ಈ ಸಂಸತ್ ಭವನದ ವಿಶೇಷತೆಗಳೇನು ಅಂತಾ ನೋಡೊದಾದ್ರೆ..
ಹೊಸ ಸಂಸತ್ ಭವನದಲ್ಲಿ ಲೋಕಸಭೆಯ ಚೇಂಬರ್‍ನಲ್ಲಿ ಈ ಗಿರುವ 543 ಆಸನಗಳ ಬದಲು 888 ಆಸನಗಳು ಹಾಗೂ ರಾಜ್ಯಸಭೆ ಚೇಂಬರ್‍ನಲ್ಲಿ ಈಗಿರುವ 245 ಆಸನಗಳ ಬದಲು 384 ಆಸನಗಳಿರಲಿವೆ.
ಜಂಟಿ ಸಮಾವೇಶ ನಡೆಸಲು ಹೆಚ್ಚು ಆಸನಗಳ ಸಭಾಂಗಣ ನಿರ್ಮಾಣವಾಗಲಿದೆ. ಇಡೀ ಕಟ್ಟಡ ಭೂಕಂಪ ನಿರೋಧಕ ಶಕ್ತಿ ಹೊಂದಿರಲಿದೆ.
ಫರ್ನಿಚರ್‍ಗಳಲ್ಲಿ ಸ್ಮಾರ್ಟ್ ಡಿಸ್ಪ್ಲೇ, ಮತದಾನವನ್ನು ಸುಲಭಗೊಳಿಸಲು ಬಯೋಮೆಟ್ರಿಕ್ಸ್, ಡಿಜಿಟಲ್ ಅನುವಾದ ವ್ಯವಸ್ಥೆ ಮತ್ತಿತರ ಸೌಲಭ್ಯಗಳನ್ನು ಅಳವಡಿಸಲಾಗುತ್ತದೆ.
ಅಂಡರ್‍ಪಾಸ್ ಮೂಲಕ ಸಂಸತ್ ಭವನಕ್ಕೆ ಸಂಪರ್ಕ ಕಲ್ಪಿಸಲಾಗುತ್ತದೆ. ಹೊಸ ಸಂಸತ್ ಭವನದ ಪಕ್ಕ ಶ್ರಮ ಶಕ್ತಿ ಭವನದ ಇರಲಿದ್ದು, ಇಲ್ಲಿ ಎಲ್ಲಾ ಸಂಸದರಿಗೆ ಕೊಠಡಿಗಳಿವೆ.
ಅತ್ಯಂತ ಆಧುನಿಕ ಡಿಜಿಟಲ್ ತಂತ್ರಜ್ಞಾನವನ್ನು ಹೊಸ ಕಟ್ಟಡದಲ್ಲಿ ಅಳವಡಿಸಲಾಗುತ್ತದೆ.
ಈ ಕಟ್ಟಡ 64,500 ಚ.ಮೀಟರ್ ಪ್ರದೇಶದಲ್ಲಿ ನಿರ್ಮಾಣವಾಗಲಿದೆ. 2022ರ ವೇಳೆಗೆ ಹೊಸ ಸಂಸತ್ ಕಟ್ಟಡ ಉದ್ಘಾಟನೆಗೊಳ್ಳುವ ನಿರೀಕ್ಷೆಯಿದೆ.
ಇನ್ನು ಹೊಸ ಸಂಸತ್ ಭವನದಲ್ಲಿ 120 ಕಚೇರಿಗಳು ಇರಲಿವೆ.
ಸಮಿತಿಗಳ ಕೊಠಡಿಗಳು, ಸಂಸದೀಯ ವ್ಯವಹಾರಗಳ ಸಚಿವಾಲಯದ ಪ್ರಮುಖ ಕಚೇರಿಗಳು, ಲೋಕಸಭಾ ಸಚಿವಾಲಯ, ರಾಜ್ಯಸಭಾ ಸಚಿವಾಲಯ, ಪ್ರಧಾನ ಮಂತ್ರಿಗಳ ಕಚೇರಿಗಳು, ಕೆಲವು ಸಂಸದರು ಮತ್ತು ಸಿಬ್ಬಂದಿ ಮತ್ತು ಭದ್ರತಾ ಸಿಬ್ಬಂದಿಯ ಕಚೇರಿಗಳನ್ನು ಒಳಗೊಂಡಂತೆ ಒಟ್ಟು 120 ಕಚೇರಿಗಳು ಹೊಸ ಸಂಸತ್ ಕಟ್ಟಡ ಹೊಂದಿರಲಿದೆ.
ಕಟ್ಟಡಕ್ಕೆ ಆರು ಪ್ರವೇಶದ್ವಾರಗಳು ಇರಲಿವೆ.
ರಾಷ್ಟ್ರಪತಿ ಮತ್ತು ಪ್ರಧಾನ ಮಂತ್ರಿಗಳು ಬರಲು ಒಂದು ದ್ವಾರ, ಲೋಕಸಭೆಯ ಸ್ಪೀಕರ್, ರಾಜ್ಯಸಭೆಯ ಅಧ್ಯಕ್ಷರು ಮತ್ತು ಸಂಸದರು ಬರಲು ಒಂದು ದ್ವಾರ, ಸಾಮಾನ್ಯ ದ್ವಾರ, ಸಂಸದರಿಗಾಗಿ ಮತ್ತೊಂದು ಪ್ರವೇಶ ದ್ವಾರ ಹಾಗೂ ಎರಡು ಸಾರ್ವಜನಿಕ ಪ್ರವೇಶ ದ್ವಾರಗಳು ಹೊಸ ಕಟ್ಟಡದಲ್ಲಿ ಇರಲಿವೆ.
ಹೊಸ ಸಂಸತ್ ಸಂಕೀರ್ಣ ನಾಲ್ಕು ಮಹಡಿಗಳನ್ನು ಹೊಂದಿರಲಿದ್ದು, ಕೆಳ ಮಹಡಿ, ನೆಲ ಮಹಡಿ, ಮೊದಲ ಮತ್ತು ಎರಡನೇ ಮಹಡಿಗಳು ಇರಲಿವೆ.
ಲೋಕಸಭೆ, ರಾಜ್ಯಸಭೆಯಲ್ಲಿ ಆಗುವ ಬದಲಾವಣೆಗಳೇನು
ಲೋಕಸಭೆ ಮತ್ತು ರಾಜ್ಯಸಭೆ ಎಷ್ಟು ವಿಸ್ತೀರ್ಣದಲ್ಲಿ ನಿರ್ಮಾಣವಾಗಲಿದೆ ಅನ್ನೋದರ ಡಿಟೈಲ್ಸ್ ಹೀಗಿದೆ..
ಎರಡು ಆಸನಗಳ ಬೆಂಚ್‍ಗಳಲ್ಲಿ ಸಂಸದರನ್ನು ಕೂರಿಸಲಾಗುವುದು. ಜಂಟಿ ಅಧಿವೇಶನದ ಸಂದರ್ಭದಲ್ಲಿ ಇಲ್ಲಿ ಮೂವರು ಕುಳಿತುಕೊಳ್ಳಲು ಅವಕಾಶ ಇದೆ. * ಆಸನಗಳು 60 ಸೆಂ.ಮೀ. ಅಗಲ ಮತ್ತು 40 ಸೆಂ.ಮೀ. ಎತ್ತರ ಇರಲಿವೆ. ಪ್ರಸ್ತುತ ಇರುವ ಆಸನಗಳಿಗಿಂತ ದೊಡ್ಡದಾಗಿರಲಿವೆ. * 3,015 ಚ.ಮೀಟರ್ ವಿಸ್ತೀರ್ಣದಲ್ಲಿ ಲೋಕಸಭೆ ಇರಲಿದ್ದು, 1,145 ಚ.ಮೀಟರ್ ವಿಸ್ತೀರ್ಣದಲ್ಲಿ 543 ಆಸನಗಳ ಬದಲಿಗೆ 888 ಆಸನಗಳು ಇರಲಿವೆ. * ಜಂಟಿ ಅಧಿವೇಶನ ನಡೆಯುವ ವೇಳೆ ಹೊಸ ಲೋಕಸಭೆಯಲ್ಲಿ 1,224 ಸದಸ್ಯರಿಗೆ ಕುಳಿತುಕೊಳ್ಳಲು ಅವಕಾಶ ಕಲ್ಪಿಸಬಹುದು. * 3,220 ಚ.ಮೀಟರ್ ವಿಸ್ತೀರ್ಣದಲ್ಲಿ ರಾಜ್ಯಸಭೆ ಇರಲಿದ್ದು, 1,232 ಚ.ಮೀಟರ್ ವಿಸ್ತೀರ್ಣದಲ್ಲಿ 245 ಸ್ಥಾನಗಳ ಬದಲಾಗಿ 384 ಆಸನಗಳನ್ನು ಹೊಂದಿರಲಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









