ಕೇರಳದಲ್ಲಿ ‘ಪ್ಲಾಸ್ಮೋಡಿಯಂ ಓವಲ್’ ಎಂಬ ಹೊಸ ಅಪರೂಪದ ಮಲೇರಿಯಾ ಪ್ರಕರಣ ಪತ್ತೆ
ತಿರುವನಂತಪುರಂ, ಡಿಸೆಂಬರ್11: ಕೇರಳದಲ್ಲಿ ‘ಪ್ಲಾಸ್ಮೋಡಿಯಂ ಓವಲ್’ ಎಂಬ ಹೊಸ ಅಪರೂಪದ ಮಲೇರಿಯಾ ಪತ್ತೆಯಾಗಿದೆ ಎಂದು ರಾಜ್ಯ ಆರೋಗ್ಯ ಸಚಿವ ಕೆ.ಕೆ.ಶೈಲಜಾ ತಿಳಿಸಿದ್ದಾರೆ.

ಸುಡಾನ್‌ನಿಂದ ಪ್ರಯಾಣಿಸಿದ ಸೈನಿಕನಲ್ಲಿ ಈ ರೋಗ ಪತ್ತೆಯಾಗಿದೆ. ಕಣ್ಣೂರಿನ ಜಿಲ್ಲಾ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಲೇರಿಯಾದ ಹೊಸ ಅವತಾರವಾದ ಪ್ಲಾಸ್ಮೋಡಿಯಂ ಓವಲ್ ರಾಜ್ಯದಲ್ಲಿ ಪತ್ತೆಯಾಗಿದೆ. ಕಣ್ಣೂರಿನ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೈನಿಕನಲ್ಲಿ ಇದು ಪತ್ತೆಯಾಗಿದೆ. ಸೈನಿಕ ಸುಡಾನ್‌ನಿಂದ ಬಂದಿದ್ದಾರೆ ಎಂದು ಶೈಲಾಜಾ ಟ್ವಿಟರ್‌ನಲ್ಲಿ ಬರೆದಿದ್ದಾರೆ.
https://twitter.com/shailajateacher/status/1337076603495518210?s=19
ಸಕಾಲಿಕ ಚಿಕಿತ್ಸೆ ಮತ್ತು ತಡೆಗಟ್ಟುವ ಕ್ರಮಗಳಿಂದ ರೋಗ ಹರಡುವುದನ್ನು ತಪ್ಪಿಸಬಹುದು ಎಂದು ಅವರು ಹೇಳಿದ್ದಾರೆ.
ಭಾರತ – ಚೀನಾ ಗಡಿ ವಿವಾದದ ನಡುವೆ ಏನಿದು ರಷ್ಯಾದ ಹೊಸ ವರಸೆ ?
ಕೇರಳದ ತ್ರಿಶೂರ್ ಜಿಲ್ಲೆಯಲ್ಲಿ ದೇಶದ ಮೊದಲ ಕೊರೋನವೈರಸ್ ಪ್ರಕರಣ ದೃಢಪಟ್ಟಿತ್ತು. ಚೀನಾದ ವುಹಾನ್ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದ ಮತ್ತು ಕೇರಳಕ್ಕೆ ಮರಳಿದ ವಿದ್ಯಾರ್ಥಿಯೊಬ್ಬನಿಗೆ ಮೊದಲು ಕೊರೋನವೈರಸ್ ಪ್ರಕರಣ ದೃಢಪಟ್ಟಿತ್ತು.

2018 ರಲ್ಲಿ, ಕೇರಳದ ಕೋಝಿಕೋಡ್ ಜಿಲ್ಲೆಯಿಂದ ನಿಪಾ ವೈರಸ್ ಕಾಯಿಲೆಯು ಕೂಡ ವರದಿಯಾಗಿತ್ತು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
https://twitter.com/SaakshaTv/status/1336718546223521793?s=19
https://twitter.com/SaakshaTv/status/1337086157931212800?s=19








