ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಸಂಬಂಧ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದ್ದು, ಉಭಯ ದೇಶಗಳ ನಡುವೆ ಹೊಸ ಸುತ್ತಿನ ವ್ಯಾಪಾರ ಮಾತುಕತೆಗಳು ಪ್ರಾರಂಭವಾಗಲಿವೆ. ಈ ಮಾತುಕತೆಯಲ್ಲಿ ಕೃಷಿ ವಲಯವು ಪ್ರಮುಖ ಚರ್ಚೆಯ ವಿಷಯವಾಗಲಿದೆ.
ಅಮೆರಿಕವು ಭಾರತದ ಮೇಲಿನ ಕೆಲವು ಸುಂಕಗಳನ್ನು ತೆಗೆದುಹಾಕುವ ಬಗ್ಗೆ ಚರ್ಚೆ ನಡೆಸುತ್ತಿದ್ದರೂ, ಇತ್ತೀಚಿಗೆ 90 ದಿನಗಳ ಗಡುವನ್ನು ವಿಸ್ತರಿಸಿ, ಆಗಸ್ಟ್ 1ರವರೆಗೆ ಸಮಯ ನೀಡಿದೆ. ಇದರಿಂದ ವಾಸ್ತವಿಕ ಒಪ್ಪಂದದ ಸಾಧ್ಯತೆಗಾಗಿ ಎರಡೂ ದೇಶಗಳಲ್ಲಿಯೂ ತಂತ್ರಜ್ಞರು ಮತ್ತು ವಾಣಿಜ್ಯ ತಜ್ಞರು ತಯಾರಿ ನಡೆಸುತ್ತಿದ್ದಾರೆ.
ಈ ಬಗ್ಗೆ ವರದಿಯಾಗಿರುವ ಮಾಹಿತಿಯಂತೆ, ವಾಣಿಜ್ಯ ಸಚಿವಾಲಯದ ವಿಶೇಷ ಕಾರ್ಯದರ್ಶಿ ರಾಜೇಶ್ ಅಗರ್ವಾಲ್ ನೇತೃತ್ವದ ಭಾರತೀಯ ವ್ಯಾಪಾರ ಸಮಾಲೋಚಕರ ತಂಡವು ಅಮೆರಿಕಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ. ಈ ಭೇಟಿ ವೇಳೆ ಉಭಯ ರಾಷ್ಟ್ರಗಳ ಮಧ್ಯೆ ಮಾತುಕತೆ ನಡೆಯುವ ನಿರೀಕ್ಷೆ ಇದೆ.
ಇದುವರೆಗೆ ಯಾವುದೇ ಅಂತಿಮ ಒಪ್ಪಂದ ಆಗದಿದ್ದರೂ, ಈ ಹೊಸ ಸುತ್ತಿನ ಮಾತುಕತೆಯು ಎರಡೂ ರಾಷ್ಟ್ರಗಳ ನಡುವೆ ವ್ಯಾಪಾರದ ಹೊಸ ಹಾದಿ ತೆರೆಯಲಿದೆ ಎಂಬ ನಿರೀಕ್ಷೆ ವ್ಯಾಪಾರ ವಲಯದಲ್ಲಿ ವ್ಯಕ್ತವಾಗಿದೆ.








